More

  ಅಶ್ಲೀಲ ವಿಡಿಯೋ ನೋಡಲು ಒತ್ತಾಯ ಆರೋಪ: ಬಾಲಿವುಡ್​ ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ ದೂರು

  ಮುಂಬೈ: ಬಾಲಿವುಡ್​ ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ 33 ವರ್ಷದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ.

  ಸಹಾಯಕಿ ಕೊರಿಯೋಗ್ರಾಫರ್​ ಆಗಿರುವ ಸಂತ್ರಸ್ತ ಮಹಿಳೆ, ಗಣೇಶ್​ ಆಚಾರ್ಯ ಮತ್ತು ಇಬ್ಬರು ಮಹಿಳೆಯರು ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ. ಮುಂಬೈನ ಅಂಧೇರಿಯಲ್ಲಿ ಭಾನುವಾರ ನಡೆದ ಇಂಡಿಯನ್​ ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಕೊರಿಯೋಗ್ರಾಫರ್​ ಅಸೋಸಿಯೇಷನ್​ ಕಾರ್ಯಕ್ರಮದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ದೂರಿದ್ದಾರೆ.

  ಇದಲ್ಲದೇ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ, ಕಚೇರಿಗೆ ಭೇಟಿ ನೀಡಿದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯ ಮಾಡುತ್ತಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದಕ್ಕಾಗಿ ಕಮಿಷನ್​ ನೀಡುವಂತೆ ಬೇಡಿಕೆ ಇಡುತ್ತಿದ್ದರು ಎಂದು ಸಾಲು ಸಾಲು ಆರೋಪ ಮಾಡಿದ್ದಾರೆ.

  ಆದರೆ ಪ್ರಕರಣ ಸಂಬಂಧ ಗಣೇಶ್​ ಆಚಾರ್ಯ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts