More

    ಅಧಿಕಾರವಿಲ್ಲದಿದ್ದರೂ ಅಭಿವೃದ್ಧಿಗೆ ಬದ್ಧ – ಮಾಜಿ ಶಾಸಕ ಡಾ.ಪಾಟೀಲ

    ಬೈಲಹೊಂಗಲ: ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಸ್ವಗ್ರಾಮ ಲಿಂಗದಳ್ಳಿಯ ತಮ್ಮ ಗೃಹ ಕಚೇರಿಯಲ್ಲಿ ತಾಯಿ ಶಾಂತಾಬಾಯಿ, ಪತ್ನಿ ಪ್ರೀತಿ ಪಾಟೀಲ, ಕುಟುಂಬಸ್ಥರು, ಅಭಿಮಾನಿಗದೊಂದಿಗೆ ಮಂಗಳವಾರ ಗೋ ಮಾತೆಗೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ತಮ್ಮ 56ನೇ ಜನ್ಮದಿನ ಆಚರಿಸಿಕೊಂಡರು.

    ನಂತರ ಮಾತನಾಡಿ, ಅಧಿಕಾರದಲ್ಲಿ ಇಲ್ಲದಿದ್ದರೂ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇನೆ. ಕ್ಷೇತ್ರಕ್ಕೆ ಅಗತ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

    ಲಾಕ್‌ಡೌನ್ ಸಡಿಲಿಕೆಯಾಗಿದೆ ಎಂದು ಜನರು ನಿರ್ಲಕ್ಷಿೃಸಬಾರದು. ಕರೊನಾ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿದ ನಿಯಮಾವಳಿವನ್ನು ಕಡ್ಡಾಯವಾಗಿ ಪಾಲಿಸಬೇಕು. ಪದಾಧಿಕಾರಿಗಳು, ಕಾರ್ಯಕರ್ತರು ಸಕ್ರಿಯವಾಗಿ ಸಂಘಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆ ಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ನಂತರ ಪಟ್ಟಣದ ತಮ್ಮ ಗೃಹ ಕಚೇರಿ ಬಳಿ ಇರುವ ಉದ್ಯಾನದಲ್ಲಿ ಅಭಿಮಾನಿ ಬಳಗದೊಂದಿಗೆ ಸಸಿ ನೆಟ್ಟರು.

    ಆರಾದ್ರಿಮಠದ ಮಹಾಂತಯ್ಯ ಶ್ರೀ, ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ವೀರಣ್ಣ ಕರೀಕಟ್ಟಿ, ಬಸನಗೌಡ ಪಾಟೀಲ, ಸಿ.ಆರ್.ಪಾಟೀಲ, ರಾವಸಾಬ ಪಾಟೀಲ, ಮಡಿವಾಳಪ್ಪ ಚಳಕೊಪ್ಪ, ರುದ್ರಪ್ಪ ಹೊಸಮನಿ, ಮಹೇಶ ಹರಕುಣಿ, ಮುರುಗೇಶ ಗುಂಡ್ಲೂರ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಜು ಕುಡಸೋಮಣ್ಣವರ, ನಿಂಗಪ್ಪ ಚೌಡಣ್ಣವರ, ಸುಧೀರ ವಾಲಿ, ಶಿವಾನಂದ ಕೋಲಕಾರ, ಜಗದೀಶ ಜಂಬಗಿ, ವಿಜಯ ಪತ್ತಾರ, ವಿಶಾಲ ಹೊಸೂರ, ಅಕ್ಷರ ಆನಿಕಿವಿ, ರುದ್ರಗೌಡ ಪಾಟೀಲ, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts