More

    ಇನ್ನು2-3 ದಿನಗಳಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮಹಾರಾಷ್ಟ್ರ…! ದಾಖಲೆ ಬರೆಯುವತ್ತ ಸಾಗಿದೆ ಈ ರಾಜ್ಯ

    ಮುಂಬೈ: ದೇಶದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 2, 36, 657ಕ್ಕೆ ಏರಿದ್ದು, ವೈರಸ್​ ಅತ್ಯಂತ ಹೆಚ್ಚು ಬಾಧಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಏರಿದೆ.

    ದೇಶದಲ್ಲಿ ಸುಮಾರು 1,14,072 ಮಂದಿ ಕೊವಿಡ್​-19ರಿಂದ ಗುಣಮುಖರಾಗಿದ್ದಾರೆ. 6,642 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
    ನಮ್ಮ ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ಈಗಾಗಲೇ ಆ ರಾಜ್ಯ 80,000ದ ಗಡಿದಾಟಿದ್ದು ಒಂದು ಹೊಸ ದಾಖಲೆಯ ದಾರಿಯಲ್ಲಿ ಸಾಗುತ್ತಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಉದ್ಯಮಿಯ ಬರ್ಬರ ಹತ್ಯೆ; ಜನರೆದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಚೀನಾದಲ್ಲಿ ಕೊವಿಡ್​-19 ಸೋಂಕಿತರ ಸಂಖ್ಯೆ 84, 000. ಮಹಾರಾಷ್ಟ್ರ ಈಗಾಗಲೇ 80,000ಕ್ಕೆ ತಲುಪಿದೆ. ಅಲ್ಲಿ ದಿನದಿನವೂ ವೈರಸ್​ ಪ್ರಸರಣ ಪ್ರಮಾಣ ತುಂಬ ಹೆಚ್ಚುತ್ತಿದೆ. ಹೀಗಾದರೆ ಇನ್ನು ಒಂದೆರಡು ದಿನಗಳಲ್ಲಿ ವೈರಸ್​ ಹುಟ್ಟಿದ ದೇಶದಲ್ಲಿನ ಸೋಂಕಿತರ ಸಂಖ್ಯೆಯನ್ನು ನಮ್ಮ ರಾಷ್ಟ್ರದ ಒಂದು ರಾಜ್ಯ ಹಿಂದಿಕ್ಕಿದಂತೆ ಆಗುತ್ತದೆ. ಈ ಮೂಲಕ ಮಹಾರಾಷ್ಟ್ರ ಒಂದು ದಾಖಲೆ ಬರೆದಂತೆ ಆಗುತ್ತದೆ.

    ಮಹಾರಾಷ್ಟ್ರ ಹೊರತುಪಡಿಸಿದರೆ ತಮಿಳುನಾಡು, ಗುಜರಾತ್​ ಮತ್ತು ದೆಹಲಿ ರಾಜ್ಯಗಳು ಕರೊನಾದಿಂದ ಅತಿಯಾಗಿ ಬಾಧಿತಗೊಂಡಿವೆ.

    ಶನಿವಾರದವರೆಗೆ ಮಹಾರಾಷ್ಟ್ರದಲ್ಲಿ ಕೊವಿಡ್​-19 ಸೋಂಕಿತರ ಸಂಖ್ಯೆ 80,229 ದಾಖಲಾಗಿದೆ. 2,849 ಮಂದಿ ಅಲ್ಲಿ ಮೃತಪಟ್ಟಿದ್ದಾರೆ. 35, 156 ಜನರು ಗುಣಮುಖರಾಗಿದ್ದಾರೆ.
    ತಮಿಳುನಾಡಿನಲ್ಲಿ 28, 694 ಮಂದಿ ಸೋಂಕಿತರು ಇದ್ದು, 232 ಜನರು ಪ್ರಾಣ ಕಳೆದುಕೊಂಡಿದ್ದಾರೆ. 15, 762 ಮಂದಿ ಚೇತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಆನೆ ತಿಂದಿದ್ದು ಪೈನಾಪಲ್​ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!​

    ಹಲಿಯಲ್ಲಿ 26, 334 ಸೋಂಕಿತರು ಇದ್ದು, 10,315 ಮಂದಿ ಕೊವಿಡ್​ನಿಂದ ಗುಣಮುಖರಾಗಿದ್ದಾರೆ. 708 ಜನರು ಪ್ರಾಣಕಳೆದುಕೊಂಡಿದ್ದಾರೆ. ಹಾಗೇ ಗುಜರಾತ್​​ನಲ್ಲಿ 19,094ಕ್ಕೆ ಸೋಂಕಿತರ ಸಂಖ್ಯೆ ಏರಿದೆ. 13,003 ಮಂದಿ ಗುಣಮುಖರಾಗಿದ್ದು, 1,190 ಜನರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts