More

    ಕೃಷಿಭೂಮಿ ರಕ್ಷಣೆಗೆ ತಂತಿಬೇಲಿ ಅಭಿಯಾನ

    ಕುಮಟಾ: ತಾಲೂಕಿನ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ಹಲವು ರೈತರು ಪರಸ್ಪರ ಸಹಕಾರ ತತ್ವದಡಿ ತಂತಿಬೇಲಿ ಅಭಿಯಾನ ನಡೆಸಿ, ಜಾನುವಾರು ಹಾಗೂ ಕಾಡು ಪ್ರಾಣಿಗಳಿಂದ ತಮ್ಮ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳುವ ತಂತ್ರ ಅಳವಡಿಸಿಕೊಳ್ಳುತ್ತಿದ್ದಾರೆ.

    ಜಾನುವಾರು ಹಾಗೂ ಕಾಡುಪ್ರಾಣಿಗಳಿಂದ ಪದೇ ಪದೆ ಬೆಳೆಹಾನಿಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳಿಂದ ರೈತರ ಮನವಿಗೆ ಯಾವ ಪರಿಣಾಮಕಾರಿ ಪರಿಹಾರೋಪಾಯವೂ ಇಲ್ಲ. ಹಾನಿಗೆ ಪರಿಹಾರವೂ ಅಷ್ಟಕ್ಕಷ್ಟೇ ಎಂಬ ಕಾರಣಕ್ಕೆ ಹೊಲನಗದ್ದೆಯ 21 ರೈತ ಕುಟುಂಬಗಳು ಒಗ್ಗೂಡಿ ಸುಮಾರು 50 ಎಕರೆಗೂ ಹೆಚ್ಚು ಕೃಷಿ ಭೂಮಿಗೆ ಮುಳ್ಳುತಂತಿ ಬೇಲಿಯನ್ನು ಹಾಕಲು ನಿರ್ಧರಿಸಿದ್ದಾರೆ.

    ಯೋಜನೆಯಂತೆ ಭೂಮಿ ಪೂಜೆಯೊಂದಿಗೆ ಕೋಟಿಕಟ್ಟೆಯ ಮೂಲೆಯಲ್ಲಿ ಸಿಮೆಂಟ್ ಕಂಬ ಹುಗಿದು ತಂತಿಬೇಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎನ್.ಟಿ. ಶಾಸ್ತ್ರಿ ಪೂಜೆ ನೆರವೇರಿಸಿದರು. ಡಾ.ಅನಿಲ ಹೆಗಡೆ, ವಿವೇಕ ಹೆಗಡೆ, ಲಲಿತಾ ಹೆಗಡೆ, ಯಶೋದಾ ಶಾಸ್ತ್ರಿ, ಶ್ರೀಧರ ಶಾಸ್ತ್ರಿ, ಎಸ್.ಟಿ. ಭಟ್ಟ, ಎಂ.ಎನ್. ಹೆಗಡೆ, ಉದಯ ಶಾಸ್ತ್ರಿ, ಕೋಟಿ ರಾಮ ಭಟ್ಟ, ಗೋಪಾಲ ಹೆಗಡೆ, ಯಂಕು ಪಟಗಾರ, ಗಂಗಾ ಹೆಗಡೆ, ಮಾಂತೇಶ ಹರಿಕಂತ್ರ, ಅನುರಾಧ ಭಟ್ಟ, ದೀಪಾ ಹಿಣಿ ಇತರರು ಇದ್ದರು.

    ಜಾನುವಾರು, ಹಂದಿ, ಕಾಡು ಪ್ರಾಣಿಗಳ ಕಾಟಕ್ಕೆ ಬೇಸತ್ತು ಹೋಗಿದ್ದೆವು. ಬಹಳಷ್ಟು ರೈತರು ಗದ್ದೆಗಳನ್ನು ಖಾಲಿ ಬಿಟ್ಟಿದ್ದರು. ಸಮಾನ ಮನಸ್ಕ ರೈತರು ಒಂದಾಗಿ ಚಿಂತನೆ ನಡೆಸಿ ಕೃಷಿ ಭೂಮಿಗೆ ಸೂಕ್ತ ರಕ್ಷಣೆ ಒದಗಿಸುವ ಪ್ರಯತ್ನ ಇದಾಗಿದೆ. ಯೋಜನೆಯಂತೆ ಪ್ರತಿ ರೈತರು ಕೈಜೋಡಿಸಿ ತಂತಿ ಬೇಲಿ ಕಾರ್ಯಕ್ರಮವನ್ನು ಅಭಿಯಾನದಂತೆ ಶುರು ಮಾಡಿದ್ದೇವೆ.

    | ರೇಖಾ ಹೆಗಡೆ, ರೈತ ಮಹಿಳೆ, ಹೊಲನಗದ್ದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts