More

  ತೆಲುಗಿನಲ್ಲಿ ಹೊಸ ಸಾಹಸಕ್ಕಿಳಿದ ಮಲಯಾಳಿ ಬೆಡಗಿ ಪ್ರಿಯಾ ಪ್ರಕಾಶ್​ ವಾರಿಯರ್

  ಹೈದರಾಬಾದ್: ಕಣ್ಸನ್ನೇ ಮೂಲಕವೇ ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆದ ನಟಿ ಪ್ರಿಯಾ ಪ್ರಕಾಶ್​ ವಾರಿಯರ್, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಾದ ಮೇಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಸಿನಿಮಾ ನಟನೆಯ ಜತೆಗೆ ಗಾಯಕಿಯಾಗಿಯೂ ಪ್ರಿಯಾ ಗುರುತಿಸಿಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: ತಮಿಳುನಾಡಿನ ಶನೈಶ್ವರ ದೇವಸ್ಥಾನಕ್ಕೆ ನಟ ಯಶ್​ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ್ ಭೇಟಿ

  ಹೌದು, ಹಾಗಂತ ಮಲಯಾಳಂನಲ್ಲಿ ಅವರೇನು ಹಾಡಿಗೆ ಧ್ವನಿ ನೀಡುತ್ತಿಲ್ಲ. ಬದಲಿಗೆ ತೆಲುಗು ಹಾಡೊಂದಕ್ಕೆ ಈಗಾಗಲೇ ಧ್ವನಿ ನೀಡಿದ್ದು, ಇನ್ನೇನು ಶೀಘ್ರದಲ್ಲಿ ಬಿಡುಗಡೆ ಆಗಲಿರುವ ಹಾಡಿಗೆ ಶ್ರೀ ಚರಣ್ ಪಕಾಲ ಸಂಗೀತ ನೀಡಿದ್ದಾರೆ.

  ಇದನ್ನೂ ಓದಿ: ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ ‘ಮಿ.ಬ್ಯಾಚುಲರ್’​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!

  ಚಿಕ್ಕಂದಿನಿಂದ ಕರ್ನಾಟಿಕ್ ಸಂಗೀತ ಕಲಿಯುತ್ತಿರುವ ಪ್ರಿಯಾ, ಮಲಯಾಳಂನಲ್ಲಿ ಒಂದಷ್ಟು ಹಾಡುಗಳಿಗೆ ಈಗಾಗಲೇ ಧ್ವನಿ ನೀಡಿದ್ದಾರೆ. ಇದೀಗ ಮೊದಲ ಬಾರಿ ತೆಲುಗು ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತ ತೆಲುಗಿನಲ್ಲಿ ನಿತಿನ್ ಜತೆಗೆ ಚೆಕ್ ಸಿನಿಮಾದಲ್ಲಿ ಪ್ರಿಯಾ ನಟಿಸಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. (ಏಜೆನ್ಸೀಸ್​)

  ಹೊಸವರ್ಷಕ್ಕೆ ‘ಒಲವೇ’ ಆಲ್ಬಂ ಸಾಂಗ್ ರಿಲೀಸ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts