More

    ಕನ್ನಡದ ‘ದಿಯಾ’ ತೆಲುಗಿಗೆ ರಿಮೇಕ್; ಖುಷಿ ಮಾಡಿದ ಪಾತ್ರ ಸಮಂತಾ ಮಾಡ್ತಾರಾ?

    ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡದ ಸೂಪರ್​ ಹಿಟ್ ಸಿನಿಮಾ ‘ದಿಯಾ’ ತೆಲುಗಿನಲ್ಲಿ ಡಬ್​ ಆಗಿ ತೆರೆಕಾಣಲಿದೆ ಎನ್ನಲಾಗಿತ್ತು. ತೆಲುಗು ವಿತರಕರೊಬ್ಬರು ಸಿನಿಮಾ ರಿಮೇಕ್​ ಬದಲು ಡಬ್ ಮಾಡಿ ತೆರೆಕಾಣಿಸುವ ಪ್ಲ್ಯಾನ್ ಹಾಕಿದ್ದರು. ಇದೀಗ ಇದೇ ಸಿನಿಮಾ ಕುರಿತು ಮತ್ತೊಂದು ಹೊಸ ಸುದ್ದಿಯೊಂದು ಅದೇ ಟಾಲಿವುಡ್​ ಅಂಗಳದಿಂದ ತೂರಿ ಬಂದಿದೆ. ಹೌದು, ಡಬ್ಬಿಂಗ್​ ಬದಲಿಗೆ ರಿಮೇಕ್ ಆಗಿಯೇ ಸಿನಿಮಾ ಮೂಡಿಬರಲಿದೆ ಎನ್ನಲಾಗುತ್ತಿದ್ದು, ಅಚ್ಚರಿ ವಿಚಾರ ಏನೆಂದರೆ, ರಿಮೇಕ್​ ಸಿನಿಮಾದಲ್ಲಿ ಸಮಂತಾ ಅಕ್ಕಿನೇನಿ ನಟಿಸಲಿದ್ದಾರಂತೆ.
    ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಲು ಸಾಲು ರಿಮೇಕ್ ಸಿನಿಮಾಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಯೂ-ಟರ್ನ್, ಓಹ್​ ಬೇಬಿ ಮತ್ತು ಜಾನು ಚಿತ್ರಗಳಲ್ಲಿ ಸಮಂತಾ ನಟಿಸಿದ್ದರು. ಇದೀಗ ಆ ರಿಮೇಕ್​ ಸಾಲಿಗೆ ದಿಯಾ ಸಿನಿಮಾ ಸಹ ಸೇರ್ಪಡೆಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈವರೆಗೂ ಅಧಿಕೃತ ಸುದ್ದಿ ಹೊರಬಿದ್ದಿಲ್ಲ. ಒಂದು ವೇಳೆ ಈ ಸುದ್ದಿ ಅಧಿಕೃತ ಆಗಿದ್ದೇ ಆದರೆ, ಕನ್ನಡದಲ್ಲಿ ಕಮಾಲ್ ಮಾಡಿದ್ದ ದಿಯಾ ತೆಲುಗು ಮಂದಿಗೂ ಇಷ್ಟವಾಗಲಿದೆ. ಪೃಥ್ವಿ ಅಂಬರ್​, ದೀಕ್ಷಿತ್​ ಶೆಟ್ಟಿ ನಾಯಕರಾಗಿ ಕಾಣಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts