More

    ರೋಹಿತ್​ ಆರ್​ಸಿಬಿಯ ನಾಯಕನಾಗಿದ್ದರೆ ಹೀಗೇ ಗೆಲ್ಲುತ್ತಿದ್ದರಾ? ಗೌತಮ್​ ಗಂಭೀರ್​ಗೆ ಆಕಾಶ್​ ಛೋಪ್ರಾ ಪ್ರಶ್ನೆ

    ನವದೆಹಲಿ: ಐಪಿಎಲ್​ 2020 ಸರಣಿಯಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾರನ್ನು ಭಾರತದ ಕ್ಯಾಫ್ಟನ್​ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಟಿ20 ಆಟಗಳಿಗಾದರೂ ಅವರನ್ನು ನಾಯಕನನ್ನಾಗಿಸಿ ಎಂದು ಅನೇಕರು ಕೇಳುತ್ತಿರುವ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ವಿಶ್ಲೇಷಣೆ ನೀಡಿದ್ದಾರೆ.

    ಇದನ್ನೂ ಓದಿ: ಒಬ್ಬ ಮಗನ ವಿರುದ್ಧ ಡ್ರಗ್ಸ್​ ಕೇಸ್​, ಇನ್ನೊಬ್ಬನದ್ದು ರೇಪ್​ ಕೇಸ್​: ಅಂತೂ ರಾಜೀನಾಮೆ ನೀಡಿದ ಕೋಡಿಯೇರಿ

    ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ ಶರ್ಮಾರನ್ನು ಟಿ20 ನಾಯಕನನ್ನಾಗಿ ಮಾಡದಿದ್ದರೆ ಭಾರತ ತಪ್ಪು ಮಾಡಿದಂತಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಹೇಳಿದ್ದರು. ಅವರ ಈ ಹೇಳಿಕೆಗೆ ಆಕಾಶ್​ ಉತ್ತರ ನೀಡಿದ್ದಾರೆ. ‘ರೋಹಿತ್​ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್​ ಬದಲಾಗಿ ಆರ್​ಸಿಬಿಯನ್ನು ಕೊಟ್ಟಿದ್ದರೆ, ಅವರಿಗೆ ಈ ರೀತಿಯ ಸಕ್ಸಸ್​ ಕಾಣಲು ಸಾಧ್ಯವಾಗುತ್ತಿತ್ತೇ? ಅವರು ಈಗ ಗೆದ್ದಿರುವ ಐದು ಕಪ್​ಗಳಲ್ಲಿ ಇಲ್ಲಿ ಎಷ್ಟನ್ನು ಗೆಲ್ಲುತ್ತಿದ್ದರು?’ ಎಂದು ಅವರು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ರೈಲು ಹಳಿಯ ಮೇಲೆ ಪತ್ರಕರ್ತನ ಶವ- ಲೇಡಿ ಇನ್ಸ್​ಪೆಕ್ಟರ್​ ವಿರುದ್ಧ ಎಫ್​ಐಆರ್​

    ರೋಹಿತ್​ ಶರ್ಮಾ ಅದ್ಭುತ ನಾಯಕ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಅದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರ. ಆರ್​ಸಿಬಿ ಸೋಲಿಗೆ ನಾವು ನಾಯಕ ಕೊಹ್ಲಿಯನ್ನು ದೂರಲಾಗುವುದಿಲ್ಲ. ಯಾವುದೇ ಗೆಲುವು ಅಥವಾ ಸೋಲು ಕೇವಲ ನಾಯಕನಿಂದ ನಿರ್ಧಾರವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಎಟಿಎಂಗೆ ಹಣ ತುಂಬುವ ಗಾಡಿಯೊಂದಿಗೇ ಎಸ್ಕೇಪ್​ ಆದ ಚಾಲಕ

    ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್​ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts