More

    ಎಟಿಎಂಗೆ ಹಣ ತುಂಬುವ ಗಾಡಿಯೊಂದಿಗೇ ಎಸ್ಕೇಪ್​ ಆದ ಚಾಲಕ

    ಮುಂಬೈ: ಎಟಿಎಂಗಳಿಗೆ ಹಣ ತುಂಬುವ ಗಾಡಿಯೊಂದಿಗೆ ಚಾಲಕ ಎಸ್ಕೇಪ್​ ಆಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಗಾಡಿಯಲ್ಲಿ ಸುಮಾರು 4.25 ಕೋಟಿ ರೂಪಾಯಿ ಇದ್ದಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ರೈಲು ಹಳಿಯ ಮೇಲೆ ಪತ್ರಕರ್ತನ ಶವ- ಲೇಡಿ ಇನ್ಸ್​ಪೆಕ್ಟರ್​ ವಿರುದ್ಧ ಎಫ್​ಐಆರ್​

    ಗುರುವಾರ ಸಂಜೆ 6.45ರ ಸಮಯಕ್ಕೆ ವಿರಾರ್​ನ ಬೋಲಿಂಜ್​ ಪ್ರದೇಶದಲ್ಲಿರುವ ಎಟಿಎಂ ಒಂದಕ್ಕೆ ಹಣ ತುಂಬಿಸಲು ಗಾಡಿಯಲ್ಲಿ ತೆರಳಲಾಗಿತ್ತು. ಗಾಡಿಯಲ್ಲಿ ಚಾಲಕನೊಂದಿಗೆ ವ್ಯವಸ್ಥಾಪಕ ಮತ್ತು ಸಶಸ್ತ್ರ ಭದ್ರತಾ ಸಿಬ್ಬಂದಿಯೂ ಇದ್ದರು. ಎಟಿಎಂಗೆ ಹಣ ತುಂಬಿಸಲು ವ್ಯವಸ್ಥಾಪಕರು ಮತ್ತು ಭದ್ರತಾ ಸಿಬ್ಬಂದಿ ಗಾಡಿಯಿಂದ ಕೆಳಗಿಳಿದು ಹೋಗಿದ್ದಾರೆ. ಅದೇ ಸಮಯಕ್ಕೆ ಕಾಯುತ್ತಿದ್ದ ಚಾಲಕ, ತಕ್ಷಣ ಗಾಡಿ ಸ್ಟಾರ್ಟ್​ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ದೀಪಾವಳಿ ಹಬ್ಬದ ಪ್ರಯುಕ್ತ ಹಣ ವಿತ್​ಡ್ರಾ ಜಾಸ್ತಿ ಆಗುತ್ತದೆಯೆಂದು ಹೆಚ್ಚು ಹಣವನ್ನು ಗಾಡಿಯಲ್ಲಿ ತರಲಾಗಿತ್ತು. ಚಾಲಕ ಗಾಡಿಯನ್ನು ತೆಗೆದುಕೊಂಡು ಹೋಗುವಾಗ ಗಾಡಿಯಲ್ಲಿ ಸುಮಾರು 4.25 ಕೋಟಿ ರೂಪಾಯಿ ಹಣವಿತ್ತು. ಚಾಲಕನನ್ನು ಚೆಂಬೂರು ನಿವಾಸಿ ರೋಹಿತ್​ ಬಬ್ಬನ್​ (26) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ತರಕಾರಿ ಲಾರಿಯಲ್ಲಿ ಗಾಂಜಾ ತಂದು ಮಾರುತ್ತಿದ್ದವನ ಸೆರೆ

    ಚಾಲಕನ ವಿರುದ್ಧ ಐಪಿಸಿ ಸೆಕ್ಷನ್​ 392ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಗರದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್​ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ

    ಸ್ಯಾನಿಟರಿ ಪ್ಯಾಡ್​ನಲ್ಲಿತ್ತು 62 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್​; ಇಬ್ಬರು ಮಹಿಳೆಯರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts