More

    ಕರ್ನಾಟಕ ಕಾಂಗ್ರೆಸ್‌ನಲ್ಲಿ ಅರ್ಧ ಡಜನ್ ಮುಖ್ಯಮಂತ್ರಿಗಳು

    ಚಿತ್ರದುರ್ಗ: ಡಬಲ್ ಇಂಜಿನ್ ಸರ್ಕಾರದ ಅವಧಿ ಕರ್ನಾಟಕದಲ್ಲಿ ಜನ ಕಲ್ಯಾಣ ಯೋಜನೆಗಳ ಹಾಗೂ ಮೂಲ ಸೌಕರ್ಯಗಳಾಭಿವೃದ್ಧಿ ಕಾರ‌್ಯಗಳು ಸಾಕಷ್ಟು ಅನುಷ್ಠಾನಗೊಂಡಿವೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ವೇಗಕ್ಕೆೆ ಬ್ರೇಕ್ ಬಿ ದ್ದಿದೆ. ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಈಡೇರಿಸಿಲ್ಲ. ಸುಳ್ಳು ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರದ ಆಡಳಿತಕ್ಕೆ ಜನ ಪಶ್ವಾತ್ತಾಪ ಪಡುತ್ತಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಗಳು ಶೇ.100 ಪೂರ್ಣಗೊಳ್ಳುತ್ತಿವೆ. ಬೈ-ಮಿಸ್ಟಿಕ್ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎಂಬ ಭಾವನೆ ಜನರಲ್ಲಿದೆ. ಯುಪಿಎ ಆಡಳಿತಾವಧಿ ಹಾಗೂ ಮೋದಿ ಅವರ ಹತ್ತು ವರ್ಷಗಳಲ್ಲಿ ಜಾರಿಯಾಗಿರುವ ಯೋಜನೆಗಳ ಕುರಿತಂತೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸಿದ್ದರಾಮಯ್ಯಗೆ ಸವಾಲೆಸೆದರು.
    ರಾಜ್ಯದಲ್ಲಿ ಕಳೆದ 10 ತಿಂಗಳ ಅವಧಿ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ನಾಚಿಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
    ಕರ್ನಾಟಕದಲ್ಲಿ ಆರು ಮಂದಿ ಮುಖ್ಯಮಂತ್ರಿಗಳಿದ್ದಾರೆ. ಸಿದ್ದರಾಮಯ್ಯ (ಸಿಎಂ),ಡಿ.ಕೆ.ಶಿವಕುಮಾರ್(ಡಮ್ಮಿ ಸಿಎಂ), ಪ್ರಿಯಾಂಕ್ ಖರ್ಗೆ (ಸೂಪರ್ ಸಿಎಂ), ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ (ಶ್ಯಾಡೋ ಸಿಎಂ) ಆಗಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಿದರು.
    ಬಿಜೆಪಿಗೆ ಮೋದಿ ನಾಯಕರು. ನಾಯಿ ಹಿಡಿದುಕೊಂಡು ತಿರುಗಾಡುವ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ಎಂದು ಜರಿದರು. ಎಲ್ಲರ ಅಭಿವೃದ್ಧಿ ಬಿಜೆಪಿ ಮಂತ್ರ, ಕಾಂಗ್ರೆಸ್ ಒಡೆದಾಳುವ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿದ್ದು, ಈ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನರು ಮನೆಗೆ ಕಳಿಸಬೇಕಿದೆ ಎಂದರು.
    ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ ಕಾಂಗ್ರೆಸ್ ಆಡಳಿತದ ಆರಂಭವಿದು, ಹಿಂದೆ ಈ ಪಕ್ಷದ ಆಡಳಿತಾವಧಿ ಇದ್ದ ಆತಂಕದ ವಾತಾವರಣ ಮರುಕಳಿಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು.
    ರಾಜಕೀಯ ಹಸ್ತಕ್ಷೇಪದಿಂದ ಬಾಂಬ್ ಸ್ಫೋಟ ಆರೋಪಿ ಬಂಧನ ವಿಳಂಬವಾಗಿದೆ. ಪಕ್ಷದ 2ನೇ ಪಟ್ಟಿಯಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಆಗಬಹುದು. ಗೆಲುವೇ ಮುಖ್ಯ ಮಾನದಂಡ, ಸಮೀಕ್ಷೆ ವರದಿ ಜತೆಗೆ ಸ್ಥಳೀಯ ಘಟಕದ ಅಭಿಪ್ರಾಯಕ್ಕೂ ಮನ್ನಣೆ ಸಿಗಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಸಾವಂತ್ ಸಹಮತ ಸೂಚಿಸಿದರು.
    ಕರ್ನಾಟಕದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಲಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಕ್ಷೇತ್ರಗಳ ಉಸ್ತುವಾರಿಯನ್ನು ಪಕ್ಷ ನನಗೆ ವಹಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts