More

    16ರಿಂದ ಮೆಟ್ರೋ ರೈಲು ಸಂಚಾರ?

    ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶವ್ಯಾಪಿ ಮಾಡಲಾದ ಲಾಕ್​ಡೌನ್​ನಿಂದಾಗಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತಗೊಂಡಿರುವ ಮೆಟ್ರೋ ರೈಲು ಸೇವೆ ಆ. 16ಕ್ಕೆ ಆರಂಭವಾಗುವ ಸಾಧ್ಯತೆಗಳಿವೆ.

    ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಿ ವಿಮಾನ, ರೈಲು, ಬಸ್ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಮೆಟ್ರೋ ರೈಲು ಸೇವೆ ಆರಂಭಕ್ಕೆ ಅನುಮತಿ ಸಿಗಬೇಕಿದೆ.

    ಇದನ್ನೂ ಓದಿ: ‘ನೀವು ಬುಕ್​ ಮಾಡಿದ ಬಟ್ಟೆ ಸ್ಟಾಕ್​ ಇಲ್ಲ, ಓಟಿಪಿ ಹೇಳಿ ಅಕೌಂಟ್ ನೋಡ್ಕೊಳ್ಳಿ..’ಎಂದು ಯುವತಿಯ ವಂಚಿಸಿದ್ರು!

    15ರಂದು ನಿರ್ಧಾರ: ಲಾಕ್​ಡೌನ್​ನಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆಯಲಾಗುತ್ತಿದೆ. ಮೆಟ್ರೋ ರೈಲು, ಚಿತ್ರಮಂದಿರಗಳು ಸೇರಿ ಇನ್ನಿತರ ಉದ್ಯಮಗಳ ಕಾರ್ಯಚಟುವಟಿಕೆಗೆ ಅನುಮತಿ ನೀಡಿಲ್ಲ. 15ರಂದು ಲಾಕ್​ಡೌನ್ ತೆರವಿನ ಕುರಿತ ಮಾರ್ಗಸೂಚಿ ಬಿಡುಗಡೆ ಸಾಧ್ಯತೆಗಳಿವೆ.

    ಇದನ್ನೂ ಓದಿ: ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ನಗ, ನಗದು ಹಣ ದೋಚಿದವರ ಸೆರೆ

    ಮೆಟ್ರೋ ರೈಲು ಸೇವೆ ಆರಂಭಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇರುವುದರಿಂದ ಬಿಎಂಆರ್​ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲಸಕ್ಕೆ ಬರಲು ತಯಾರಿರುವಂತೆ ಸಿಬ್ಬಂದಿಗೆ ಈಗಾಗಲೆ ಸೂಚಿಸಿದೆ. ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.

    ಮೆಟ್ರೋ ನಿರ್ಮಾಣ ಹಂತದ ಮಾರ್ಗದಲ್ಲಿ ಬಿರುಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts