More

    ಚಿಕ್ಕನಾಯಕನಹಳ್ಳಿಯಲ್ಲಿ ಹೇಮೆ ನಾಲೆ ಕಾಮಗಾರಿ ಮುಗಿಯುವುದೆಂದು?

    ಚಿಕ್ಕನಾಯಕನಹಳ್ಳಿ: ತಾಲೂಕಿನ 26 ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ಯೋಜನೆ ನಾಲೆ ಕಾಮಗಾರಿ 8 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದು, ಮುಂದಿನ ವರ್ಷವಾದರೂ ಕೆರೆಗಳಿಗೆ ನೀರು ಹರಿಯಬಹುದೆಂದು ಜನರು ಎದುರು ನೋಡುತ್ತಿದ್ದಾರೆ.

    102 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, 5 ಕೆರೆಗಳಿಗೆ ಏತ ನೀರಾವರಿ ಮೂಲಕ ಈಗಾಗಲೇ ನೀರು ಹರಿದು ಮೂರು ವರ್ಷಗಳು ಕಳೆದಿದೆ. ಇನ್ನು 22 ಕೆರೆಗಳಿಗೆ ನೀರು ತುಂಬಿಸುವ ನಾಲೆ ಕಾಮಗಾರಿ ಕುಂಟುತ್ತ್ತ ಸಾಗಿದೆ.

    ತಾಲೂಕಿಗೆ ಹೇಮೆ ನೀರು ಹರಿಸುವಂತೆ 2003ರಲ್ಲಿ ಹುಳಿಯಾರಿನಲ್ಲಿ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ 61 ದಿನ ಕಾಲ ಉಪವಾಸ ಸತ್ಯಾಗ್ರಹ ನಡೆದಿತ್ತು. ಹೋರಾಟದ ಫಲವಾಗಿ ವಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಸರ್ವೇ ಮಾಡಲು ಹಣ ಬಿಡುಗಡೆ ಮಾಡಿದ್ದರು. 2007ರಲ್ಲಿ ನಾಲೆ ಕಾಮಗಾರಿಗೆ ಅನುಮತಿ ದೊರೆಯಿತು.

    2012ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ್ದರು.
    ನಂತರ ವಾಧುಸ್ವಾಮಿ ಶಾಸಕರಾದ ನಂತರ ಯೋಜನೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ
    ಪ್ರಾರಂಭಿಸಲು ಕ್ರಮ ಕೈಗೊಂಡರಾದರೂ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ.

    ಸಚಿವ ಮಾಧುಸ್ವಾಮಿ ಅವರು ರೈತರಿಗೆ ಪರಿಹಾರ ನೀಡುವಲ್ಲಿ ಮತ್ತು ನ್ಯಾಯಾಲಯದ ಮೆಟ್ಟಿಲೇರಿದ್ದ ಗುತ್ತಿಗೆದಾರರನ್ನು ಮನವೊಲಿಸಿ ಕಾಮಗಾರಿ ಮಾಡುವಂತೆ ಮಾಡಿದ್ದಾರೆ. ಅದರಂತೆ ಕಾಮಗಾರಿ ನಡೆಯುತ್ತಿದ್ದು ಮುಂದಿನ ವರ್ಷದಲ್ಲಿ ತಾಲೂಕಿಗೆ ನೀರು ಹರಿಯುವುದರಲ್ಲಿ ಸಂದೇಹವಿಲ್ಲ.
    ಬೇವಿನಹಳ್ಳಿ ಚನ್ನಬಸವಯ್ಯ, ಗೌರವಾಧ್ಯಕ್ಷ, ನೀರಾವರಿ ಹೋರಾಟ ಸಮಿತಿ

    ಈ ವೇಳೆಗೆ ಸಾಸಲಿನ ಪೆಮ್ಮಲದೇವರಹಳ್ಳಿ ಕೆರೆಗೆ ಹೇವಾವತಿ ನೀರು ಹರಿಯಬೇಕಿತ್ತು. ಆದರೆ ಮಳೆಗಾಲದಲ್ಲಿ ನಾಲೆಯಲ್ಲಿ ಸುವಾರು 30 ಅಡಿ ನೀರು ತುಂಬಿದ್ದ ಕಾರಣ ಎರಡು ಮೂರು ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಅಲ್ಲಲ್ಲಿ ಬಂಡೆ ಸಿಕ್ಕಿರುವ ಕಾರಣ ಪ್ರತಿದಿನ ಕೆಲವೇ ಅಡಿಗಳಷ್ಟು ವಾತ್ರ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷ ಪ್ರಾಯೋಗಿಕವಾಗಿ ತಾಲೂಕಿನ ಸಾಸಲು ಕೆರೆಗೆ ಹೇಮೆ ನೀರು ಹರಿಯಲಿದೆ.
    ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts