More

    ಮೂರನೇ ಅಲೆ ಬೇಗ ಅಪ್ಪಳಿಸುತ್ತೆ : ಸರ್ಕಾರಕ್ಕೆ ಹೈಕೋರ್ಟ್​ ಎಚ್ಚರಿಕೆ

    ನವದೆಹಲಿ : ನಗರ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಕೋವಿಡ್ ಪ್ರೊಟೊಕಾಲ್ ಮೀರಿ ಓಡಾಡುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್​​ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ಜನರು ಮಾಸ್ಕ್​ ತೊಡದೆ, ಸಾಮಾಜಿಕ ಅಂತರ ಪಾಲಿಸದೆ ಮಾರುಕಟ್ಟೆಗಳಲ್ಲಿ ಖರೀದಿಯಲ್ಲಿ ತೊಡಗಿದ್ದು, ಈ ಬಗ್ಗೆ ಕೋರ್ಟ್​ ಸುಯೋ ಮೋಟೋ ವಿಚಾರಣೆ ಕೈಗೆತ್ತಿಕೊಂಡಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಹೆಚ್ಚಾಗಿ ಹರಡದಂತೆ ತಡೆಯಲು ಹೆಚ್ಚು ಕಠಿಣ ಕ್ರಮಗಳ ಅಗತ್ಯವಿದೆ ಎಂದಿರುವ ಕೋರ್ಟ್​, ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನೋಟೀಸ್ ಜಾರಿಗೊಳಿಸಿದೆ. ಈ ಬಗ್ಗೆ ಸ್ಟೇಟಸ್​ ರಿಪೋರ್ಟ್​ ಸಲ್ಲಿಸಲು ನಿರ್ದೇಶಿಸಿದೆ. ಜನಜಂಗುಳಿ ಮಾಡಿಕೊಂಡು ಈ ರೀತಿಯಾಗಿ ಕೋವಿಡ್​ ಪ್ರೊಟೊಕಾಲ್​ಅನ್ನು ಉಲ್ಲಂಘಿಸುವುದರಿಂದ ಮೂರನೇ ಅಲೆಯು ಬೇಗ ಬಂದು ಅಪ್ಪಿಳಿಸುವಂತೆ ಮಾಡಿದಂತಾಗುತ್ತದೆ. ಯಾವುದೇ ಸನ್ನಿವೇಶದಲ್ಲಿ ಅದಕ್ಕೆ ಅವಕಾಶ ಕೊಡಬಾರದು ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲ ಮತ್ತು ಆಶಾ ಮೆನನ್​ ಅವರ ರಜಾಕಾಲೀನ ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ: ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂಗಡಿಮುಂಗಟ್ಟುಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು. ಮಾರುಕಟ್ಟೆ ಮತ್ತು ವ್ಯಾಪಾರಿಗಳ ಸಂಘಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್​ ಹೇಳಿದೆ. (ಏಜೆನ್ಸೀಸ್)

    ‘ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸು’ – ಹಳ್ಳಿ ಹಕ್ಕಿಗೆ ಕುಟುಕಿದ ರೇಣುಕಾಚಾರ್ಯ

    ಜೂನ್ 30ರೊಳಗೆ ಲಸಿಕೆ ಪಡೆದವರಿಗೆಲ್ಲಾ ಉಚಿತ ಮೊಬೈಲ್ ರೀಚಾರ್ಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts