More

    ಖಂಡಿತವಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ: ಲಕ್ಷ್ಮಣ್​ ಸವದಿ

    ಚಿಕ್ಕೋಡಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್​ ವಂಚಿತ ಲಕ್ಷ್ಮಣ್​ ಸವದಿ ಹೇಳಿಕೆ ನೀಡಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್​ ಸವದಿ, ಬೇರೆ ಬೇರೆ ಪಕ್ಷದ ಮುಖಂಡರು ನನ್ನ ಸಂಪರ್ಕ ಮಾಡಿದ್ದಾರೆ. ನನ್ನ ಹೈಕಮಾಂಡ್ ಹೇಳಿದ ಹಾಗೇ ಎಂದು ಅವರಿಗೆ ಹೇಳಿದ್ದೇನೆ. ಪ್ರಾಥಮಿಕ ಸದಸ್ಯತ್ವ ಹಾಗೂ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡಲು ಖಂಡಿತವಾಗಿಯೂ ತೀರ್ಮಾನ ಮಾಡಿದ್ದೇನೆ ಎಂದರು.

    ಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವನು ನಾನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ ಹೊರತು ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರು ಬೆನ್ನಿಗೆ ಚೂರಿ ಹಾಕಿಲ್ಲ ಎಂದು ರಮೇಶ್​ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್​ ಸವದಿ ಅಸಮಾಧಾನ ಹೊರಹಾಕಿದರು.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಬೆಕ್ಕು ಪತ್ತೆ ಹಚ್ಚಬಲ್ಲರು!

    ಸವದಿ ರಾಜೀನಾಮೆ‌ ಗೊತ್ತಿಲ್ಲ
    ಕುಮಟಳ್ಳಿ ಸ್ಪರ್ಧಿಸಿದ್ರೆ ಸೋಲ್ತಾರೆ ಎಂಬ ವಿಚಾರವಾಗಿ ಬೆಳಗಾವಿಯ ಅಥಣಿಯಲ್ಲಿ ಪ್ರತಿಕ್ರಿಯಿಸಿದ ಮಹೇಶ್​ ಕುಮಟ್ಟಳ್ಳಿ ಲಕ್ಷ್ಮಣ ಸವದಿ ಹಿರಿಯರು. ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಜತೆ ವರಿಷ್ಟರು ಮಾತುಕತೆ ಮಾಡುತ್ತಾರೆ. ಸವದಿ ರಾಜೀನಾಮೆ‌ ವಿಚಾರ ನನಗೆ ಗೊತ್ತಿಲ್ಲ ಎಂದರು.

    ಬಿಜೆಪಿಯಲ್ಲಿ ಯಾವುದೇ ತತ್ವಸಿದ್ಧಾಂತಗಳಿಲ್ಲ ಎಂಬ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿನ ಯಾವುದೇ ವಿಷಯ ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಈ ವಿಷಯದ ಬಗ್ಗೆ ಹೆಚ್ಚಿಗೆ ಹೇಳೋದಿಲ್ಲ. ನಮ್ಮಿಬ್ಬರಲ್ಲಿ ಒಬ್ಬರೂ ಸಾರ್ವತ್ರಿಕ ಚುನಾವಣೆ ಎದುರಿಸ್ತೇವೆ ಎಂದು ಅನೇಕ‌ ಬಾರಿ ಲಕ್ಷ್ಮಣ‌ ಸವದಿ ಹೇಳಿದ್ದಾರೆ. ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನನಗೆ ಚುನಾವಣೆ ಎದುರಿಸುವ ಭಾಗ್ಯ ಸಿಕ್ಕಿದೆ. ಹೀಗಾಗಿ ಬಿಜೆಪಿ ಎಲ್ಲ ಮುಖಂಡರಿಗೆ ಧನ್ಯವಾದ ಹೇಳುವೆ ಎಂದರು. (ದಿಗ್ವಿಜಯ ನ್ಯೂಸ್​)

    ಇದು ಡಿವೋರ್ಸ್​ ಫೋಟೋಶೂಟ್​! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ

    ಈಶ್ವರಪ್ಪ, ಶೆಟ್ಟರ್ ಸೇವೆ ಬೇರೆ ರಾಜ್ಯಗಳಿಗೆ ಬಳಸಬಹುದು: ಸಿ.ಟಿ.ರವಿ ಭವಿಷ್ಯ

    ಠೇವಣಿ ಕಳೆದುಕೊಂಡಿದ್ದ ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts