More

    ವನ್ಯಜೀವಿಗಳ ಸಂರಕ್ಷಣೆ ನಮ್ಮ ಹೊಣೆ

    ಹೊಸಪೇಟೆ: ಪೂರ್ವಬಯಲು ಸೀಮೆಯಲ್ಲಿ ಅಪಾರ ಜೀವ ವೈವಿಧ್ಯತೆ ಇದ್ದು, ಸಂರಕ್ಷಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಇದನ್ನೂ ಓದಿ: ಹೊಸಪೇಟೆಯಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ

    ತಾಲೂಕಿನ 88 ಮುದ್ದಾಪುರ ಗ್ರಾಮದಲ್ಲಿ ಶಂಕರ್ ಸಿಂಗ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಿಂದ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಗುರುವಾರ ಉಪನ್ಯಾಸದಲ್ಲಿ ಮಾತನಾಡಿದರು.

    ಆವಿಭಜಿತ  ಬಳ್ಳಾರಿ ಜಿಲ್ಲೆಯಲ್ಲಿ ದರೋಜಿ ಗುಡೆಕೋಟೆ ಕರಡಿ ದಾಮ, ತುಂಗಭದ್ರಾ ನೀರು ನಾಯಿ ಸಂರಕ್ಷಿತ ಮೀಸಲು ಹಾಗೂ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶಗಳಿವು. ನಮ್ಮ ಪರಿಸರದ ಜೀವ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಅಲ್ಲದೆ ಇನ್ನು ಅನೇಕ ಅರಣ್ಯ ಪ್ರದೇಶದಲ್ಲಿ ಅಪಾರ ಜೀವವೈವಿಧ್ಯತೆಯನ್ನು ದಾಖಲಿಸಿ ಸಂರಕ್ಷಿಸಬೇಕಾಗಿದೆ. ಪ್ರತಿಯೊಬ್ಬರೂ   ಕಾಡನ್ನು ಬೆಂಕಿಯಿಂದ ಕಾಪಾಡಬೇಕು.  ವನ್ಯಜೀವಿಗಳ ಕಳ್ಳ ಬೇಟೆಯನ್ನು ತಡೆಗಟ್ಟಬೇಕು. ಜಲ ಮೂಲವನ್ನು ಮಾಲಿನ್ಯದಿಂದ  ಸಂರಕ್ಷಿಸಬೇಕು ಎಂದರು.

    ಉಪನ್ಯಾಸಕ ಡಾ. ದೇವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೊದಲ ಕರ್ತವ್ಯ ಆಗಬೇಕು ಎಂದರು. ಎನ್ನೆಸೆಸ್ ಅಧಿಕಾರಿ ಡಾ.ರಘು ಪ್ರಸಾದ್, ಉಪನ್ಯಾಸಕ ಡಾ.ಷಣ್ಮುಖಪ್ಪ  ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts