More

    ಸಾಯುವ ಹಂತದಲ್ಲಿದ್ದ ಕಾಡು ಕುರಿಯ ರಕ್ಷಣೆ: ಕತ್ತರಿಸಿದ ತುಪ್ಪಟದ ತೂಕ ಕೇಳಿದ್ರೆ ಅಚ್ಚರಿ ಪಡ್ತೀರಾ!

    ಮೆಲ್ಬೋರ್ನ್​: ವಿಚಿತ್ರ ಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಲೆದಾಡುತ್ತಿದ್ದ ಕಾಡು ಕುರಿಯನ್ನು ರಕ್ಷಿಸಿ, ಅದರ ಮೈಯಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಸುಮಾರು 35 ಕೆ.ಜಿ. ತೂಕದ ತುಪ್ಪಟವನ್ನು ತೆಗೆದು ಹಾಕುವ ಮೂಲಕ ಮುಂದೆ ಸಂಭವಿಸುತ್ತಿದ್ದ ಅನಾಹುತದಿಂದ ಕುರಿಯನ್ನು ಬಚಾವ್​ ಮಾಡಲಾಗಿದೆ.

    ಸುಮಾರು 5 ವರ್ಷಗಳ ಅನಿಯಂತ್ರಿತ ಬೆಳವಣಿಗೆಯ ಪರಿಣಾಮ ಇಷ್ಟೊಂದು ತುಪ್ಪಟ ಕರಿಯಲ್ಲಿ ಬೆಳೆದಿದೆ ಎನ್ನಲಾಗಿದೆ. ವರ್ಷಗಳ ಕಾಲ ಮಣ್ಣು ಮತ್ತು ಗೋಜಲಿನ ಅವಶೇಷಗಳಿಂದ ಕೂಡಿದ ಹೊಲಸು ಉಣ್ಣೆಯ ಜತೆಯಲ್ಲಿ ಹೋರಾಟ ಮಾಡಿದ್ದ ಕುರಿ ಆಸ್ಟ್ರೇಲಿಯಾದ ವಿಕ್ಟೋರಿಯನ್​ ಸ್ಟೇಟ್​ ಅರಣ್ಯದಲ್ಲಿ ಪತ್ತೆಯಾಗಿದ್ದು, ಅದನ್ನು ಮೆಲ್ಬೋರ್ನ್​ನಲ್ಲಿರುವ ಪ್ರಾಣಿ ಪಾರುಗಾಣಿಕಾ ಅಭಯಾರಣ್ಯಕ್ಕೆ ಕರೆತರಲಾಯಿತು.

    ಇದನ್ನೂ ಓದಿರಿ: ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಮೋಡಿ, ಎರಡನೇ ದಿನಕ್ಕೆ ಆಂಗ್ಲರ ಬಗ್ಗುಬಡಿದ ವಿರಾಟ್ ಪಡೆ

    ಅಷ್ಟೊಂದು ತುಪ್ಪಟ ಬೆಳೆದಿದ್ದರೂ ಕುರಿಯು ಇನ್ನು ಜೀವಂತವಾಗಿದೆ ಅಂದರೆ ನನ್ನಿಂದ ನಂಬಲು ಆಗುತ್ತಿಲ್ಲ ಎಂದು ಎಡ್ಗರ್ ಅವರ ಮಿಷನ್ ಫಾರ್ಮ್ ಅಭಯಾರಣ್ಯದ ಸಂಸ್ಥಾಪಕ ಪಾಮ್​ ಅಹೆರ್ನ್​ ತಿಳಿಸಿದ್ದಾರೆ. ಸುಮಾರು 5 ವರ್ಷಗಳವರೆಗೆ ತುಪ್ಪಟ ಅನಿಯಂತ್ರಿತವಾಗಿ ಬೆಳೆದಿದೆ ಎಂದು ಪಾಮ್​ ಅಂದಾಜಿಸಿದ್ದಾರೆ.

    ಭಾರಿ ತುಪ್ಪಟದಿಂದಾಗಿ ಕುರಿ ನಡೆದಾಡಲು ಸಾಕಷ್ಟು ಶ್ರಮಪಟ್ಟಿದೆ. ವರ್ಷಕೊಮ್ಮೆಯಾದರೂ ಕ್ಷೌರವಿಲ್ಲದೆ ಪ್ರಾಣಿಗಳು ಕಾಡಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾದ ಕಠಿಣ ಮತ್ತು ಶುಷ್ಕ ಬೇಸಿಗೆಯಲ್ಲಿ ಇದು ಸಾಧ್ಯವೇ ಇಲ್ಲ ಎಂದಿದ್ದಾರೆ. ಸದ್ಯ ಕಾಡು ಕುರಿ ರಕ್ಷಿಸಲಾಗಿದ್ದು, ಭಾರದ ತುಪ್ಪಟವನ್ನು ಕಳೆದುಕೊಳ್ಳುವ ಮೂಲಕ ತನ್ನ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕ್ಲಾಸ್​ಮೇಟ್​ ಮಾತು ನಂಬಿ ಜತೆಗೆ ಹೋದ ಡಿಗ್ರಿ ವಿದ್ಯಾರ್ಥಿನಿಯ ದುರಂತ ಅಂತ್ಯ..!

    ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

    ಗಂಡ ಹೆಂಡತಿ ಇದ್ದರೇ ಕುಟುಂಬ; ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಒಪ್ಪಲು ಅಸಾಧ್ಯವೆಂದ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts