More

    ಅಪರೂಪದ ಬಿಳಿ ಹೆಬ್ಬಾವು ರಕ್ಷಣೆ

    ಕಾರವಾರ: ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಕಂಡುಬಂದ ಅಪರೂಪದ ಬಿಳಿ ಹೆಬ್ಬಾವನ್ನು ಉರಗ ರಕ್ಷಕ ಪವನ್ ನಾಯ್ಕ ಸೋಮವಾರ ರಕ್ಷಿಸಿದರು.
    ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿತ್ತು. ಸ್ಥಳೀಯ ಗಣೇಶ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.

    ಹೆಬ್ಬಾವು ಸುಮಾರು 9 ಅಡಿ ಉದ್ದವಿದೆ. ಇದು ದೇಶದಲ್ಲಿ ಕಂಡುಬಂದ ದೊಡ್ಡ ಬಿಳಿ ಹೆಬ್ಬಾವು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಗೆ ಹೆಬ್ಬಾವನ್ನು ಒಪ್ಪಿಸಲಾಗಿದೆ.

    ಇದನ್ನೂ ಓದಿ:ಡಿಸೆಂಬರ್ ವೇಳೆಗೆ ಮತ್ತೆ ಹಾಲಿನ ದರದಲ್ಲಿ ಪರಿಷ್ಕರಣೆ
    ಹೆಬ್ಬಾವಿನ ಮೈಮೇಲೆ ಸಣ್ಣಪುಟ್ಟ ಗಾಯಗಳಿದ್ದು, ಚಿಕಿತ್ಸೆ ನೀಡಿ ಮೈಸೂರಿನ ಮೃಗಾಲಯಕ್ಕೆ ಕಳಿಸುವುದಾಗಿ ಡಿಎಫ್‌ಒ ರವಿಶಂಕರ ತಿಳಿಸಿದ್ದಾರೆ. ಎಸಿಎಫ್ ಜಿ. ಲೋಹಿತ್, ಆರ್‌ಎಪ್‌ಒ ಎಸ್.ಟಿ.ಪಟಗಾರ, ಡಿಆರ್‌ಎಫ್‌ಒ ಹೂವಣ್ಣ ಗೌಡ ಸ್ಥಳದಲ್ಲಿದ್ದರು.
    ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ

    ಹೆಬ್ಬಾವಿನ ಮೈಮೇಲೆ ಸಣ್ಣಪುಟ್ಟ ಗಾಯಗಳಿದ್ದು, ಚಿಕಿತ್ಸೆ ನೀಡಿ ಮೈಸೂರಿನ ಮೃಗಾಲಯಕ್ಕೆ ಕಳಿಸುವುದಾಗಿ ಡಿಎಫ್‌ಒ ರವಿಶಂಕರ ತಿಳಿಸಿದ್ದಾರೆ. ಎಸಿಎಫ್ ಜಿ. ಲೋಹಿತ್, ಆರ್‌ಎಪ್‌ಒ ಎಸ್.ಟಿ.ಪಟಗಾರ, ಡಿಆರ್‌ಎಫ್‌ಒ ಹೂವಣ್ಣ ಗೌಡ ಸ್ಥಳದಲ್ಲಿದ್ದರು.
    ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್‌ ಆಗಿತ್ತು.

    Python-2

    ಈಗ ಅದರ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಕುಮಟಾದಲ್ಲೇ ಕಂಡುಬಂದಿರುವುದು ವಿಶೇಷವಾಗಿದೆ. ದೇಶದಲ್ಲೇ ಅತಿ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ಅವರಿಗೆ ಸಿಕ್ಕಿದೆ.
    ಏನಿದರ ವಿಶೇಷ:

    ಇಂತಹ ಬಿಳಿ ಹಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಕೂಡ ಕರೆಯುತ್ತಾರೆ.

    ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ‌. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರುವ ಕಾರಣ ಇದನ್ನು ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಪವನ್‌ ನಾಯ್ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts