More

    ಮದುವೆಗೂ ಮುನ್ನ ಪತಿಯ ಜನನಾಂಗದಲ್ಲಿ ತೊಂದರೆ ಇದೆ ಎಂದು ತಿಳಿದರೂ ಆತನ ಬೆನ್ನಿಗೆ ನಿಂತ ಮಹಿಳೆಯ ಕತೆಯಿದು…

    ಲಂಡನ್​: ದಾಂಪತ್ಯ ಜೀವನ ಅನೋನ್ಯವಾಗಿರಲು ಸತಿ-ಪತಿ ನಡುವಿನ ಲೈಂಗಿಕ ಕ್ರಿಯೆ ಬಹಳ ಮುಖ್ಯವೆಂಬುದು ಬಹುತೇಕರ ಸಹಮತವಾಗಿದೆ. ಆದರೆ, ಮದುವೆಯಾದಗಿನಿಂದ ಒಮ್ಮೆಯೂ ಲೈಂಗಿಕ ಕ್ರಿಯೆ ನಡೆಸದೇ ನಮ್ಮ ಜೀವನ ಎಂದಿಗಿಂತಲೂ ಬಲಿಷ್ಠವಾಗಿತ್ತು ಎಂದು ಕ್ಯಾನ್ಸರ್​ ರೋಗಿಯ ಪತ್ನಿಯೊಬ್ಬರು ಹೇಳಿಕೆ ನೀಡಿ ಜಗತ್ತಿನ ಗಮನಸೆಳೆದಿದ್ದಾರೆ!

    ಮಾಂಸ ತಿನ್ನುವ ಬಗ್ಸ್​ಗಳಿಂದಾಗಿ ಪತಿಯು ಜನನಾಂಗ ಕಳೆದುಕೊಂಡ ಬಳಿಕ ತಮ್ಮ ನಡುವಿನ ದಾಪಂತ್ಯ ಜೀವನ ಹೇಗಿತ್ತು ಎಂಬುದನ್ನು ಮಹಿಳೆಯೊಬ್ಬರು ಪತ್ರಿಕೆಯೊಂದರಲ್ಲಿ ವಿವರಿಸಿದ್ದಾರೆ.

    ಆ್ಯಂಡ್ರಿವ್​ ಲೇನ್​(65) ಎಂಬುವರು ಇಂಗ್ಲೆಂಡ್​ನ ಎಸ್ಸೆಕ್ಸ್​ ನಗರದ ನಿವಾಸಿ. ಇವರು ಸಾವು ತರಬಲ್ಲಂತಹ ಮಾರಕ ನೆಕ್ರೊಟಿಸಿಂಗ್​ ಫಾಸಿಟೀಸ್​(ಮಾಂಸ ತಿನ್ನುವ ರೋಗ) ಎಂಬ ಸೋಂಕಿಗೆ ತುತ್ತಾಗಿ, ನಿರಂತರ ಆಪರೇಷನ್​ ಬಳಿಕ ಕೊನೆಗೆ ಅವರ ಜನನಾಂಗವನ್ನು 2013 ಮಾರ್ಚ್​ ತಿಂಗಳಲ್ಲಿ ತೆಗೆದು ಹಾಕಲಾಗಿದೆ.

    ರೋಗದ ಲಕ್ಷಣ ಕಂಡುಬಂದ ದಿನದಿಂದಲೂ ಲೇನ್ ಸಾಕಷ್ಟು ಬಾರಿ ಆಸ್ಪತ್ರೆಗೆ ಓಡಾಡಿದ್ದಾರೆ. ಇದರ ಹೊರತಾಗಿಯೂ ಲೇನ್​ರನ್ನು ಸ್ಯೂ(61) ಮದುವೆಯಾಗುವುದಾಗಿ ಒಪ್ಪಿ, ಲೇನ್​ ಆಸ್ಪತ್ರೆಯಿಂದ ಮನೆಗೆ ಮರಳಿದ ಒಂದು ತಿಂಗಳ ನಂತರ ಮದುವೆಯಾಗಿದ್ದಾರೆ. ಲೈಂಗಿಕ ಜೀವನ ಇರಲಿ ಅಥವಾ ಇರದಿರಲಿ ನಮ್ಮ ಸಂಬಂಧ ಮಾತ್ರ ಎಂದಿಗಿಂತಲೂ ಗಟ್ಟಿಯಾಗಿಬೇಕೆಂದು ಪರಸ್ಪರ ಒಪ್ಪಿ ವಿವಾಹವಾಗಿದ್ದಾರೆ.

    ಈ ಬಗ್ಗೆ ಟೇಕ್​ ಎ ಬ್ರೇಕ್​ ಮ್ಯಾಗಜೀನ್​ನೊಂದಿಗೆ ಮಾತನಾಡಿರುವ ಸ್ಯೂ, ಆ್ಯಂಡ್ರಿವ್​ ಬಹುತೇಕ ತನ್ನ ಜನನಾಂಗವನ್ನು ಕಳೆದುಕೊಂಡು ಮನುಷ್ಯನಗಿಂತ ಕಡೆಯಾಗಿರುವ ಭಾವನೆ ಕಾಡುತ್ತಿರುವುದಾಗಿ ನೊಂದುಕೊಂಡು ನನ್ನ ಬಳಿ ಹೇಳಿದ. ಪ್ರೀತಿಯ ಮದುವೆಯಲ್ಲಿ ಲೈಂಗಿಕ ಜೀವನ ತುಂಬಾ ಮುಖ್ಯವೇನಲ್ಲ ಎಂದು ಹೇಳಿ ಸಾಕಷ್ಟು ಬಾರಿ ಮನಪರಿವರ್ತಿಸಿದ್ದೇನೆ ಎಂದು ಸ್ಯೂ ಹೇಳಿದ್ದಾರೆ. ವಿಶೇಷವೆಂದರೆ ಸ್ಯೂ, ಲೇನ್​ರನ್ನು ಎಂದಿಗಿಂತಲೂ ಹೆಚ್ಚು ಇಷ್ಟ ಪಟ್ಟು ಅವರ ಜೀವನಕ್ಕೆ ಬೆಂಗಾವಾಲಾಗಿ ನಿಂತಿದ್ದಾರೆ.

    ಮುಂದುವರಿದು ಮಾತನಾಡಿ, 7 ವರ್ಷಗಳ ಹಿಂದಿನ ಕರಾಳ ಘಟನೆಯನ್ನು ಮೆಲುಕು ಹಾಕಿದ ಸ್ಯೂ, ದೇಹದೊಳಗಿನ ಹಾರರ್​ ಸಿನಿಮಾ ರೀತಿಯ ಶಬ್ದದ ವಿರುದ್ಧ ಆ್ಯಂಡ್ರಿವ್ ತುಂಬಾ ಹೋರಾಟ ನಡೆಸಿದ. ಬಳಿಕ ನಾವು ವೈದ್ಯರ ಬಳಿ ತೆರಳಿ ಹೊಟ್ಟೆಯ ಭಾಗದಲ್ಲಿ ಹರಡಿರುವ ಸೋಂಕು ತಾಗಿದ ಮಾಂಸವನ್ನು ಕತ್ತರಿಸಲು ಕೇಳಿದೆವು. ಪ್ರಾಸ್ಟೇಟ್​ ಕ್ಯಾನ್ಸರ್​ಗೆ ತಿರುಗಿದ್ದರಿಂದ ಅದನ್ನು ತೆಗೆಸಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts