More

    ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ರಾಹುಲ್​ ಗಾಂಧಿಗೆ ಎರಡು ಅನುಮಾನ; ಪ್ರಧಾನಿಗೆ ಪ್ರಶ್ನೆ

    ನವದೆಹಲಿ: ಪೂರ್ವ ಲಡಾಖ್​ನ ವಾಸ್ತವ ಗಡಿ ರೇಖೆ ಬಳಿ ಭಾರತದ ಭೂ ಪ್ರದೇಶದೊಳಗೆ ಚೀನಿಯರು ನುಗ್ಗಲಿಲ್ಲ. ಒಂದು ಸಣ್ಣ ಭೂಭಾಗವನ್ನೂ ಅತಿಕ್ರಮಣ ಮಾಡಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಸರ್ವಪಕ್ಷಗಳೊಂದಿಗೆ ನಡೆಸಿದ ವರ್ಚ್ಯುವಲ್​ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಆದರೆ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಮತ್ತೆ ಪ್ರಧಾನಿಯವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್​ ಮೂಲಕ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಆಕ್ರಮಣಶೀಲತೆಗೆ ನಮ್ಮ ಭೂಪ್ರದೇಶವನ್ನು ಒಪ್ಪಿಸಿಬಿಟ್ಟಿದ್ದಾರೆ. ಚೀನಾದವರು ಭಾರತದ ಭೂಭಾಗವನ್ನು ಪ್ರವೇಶಿಸಿಲ್ಲ ಎಂದಾದ ಮೇಲೆ ಸಂಘರ್ಷ ನಡೆದಿದ್ದು ಚೀನಾ ಭೂಪ್ರದೇಶದಲ್ಲಿ ಎಂದಾಯಿತು. ಹಾಗಂದಮೇಲೆ ಅದ್ಯಾಕೆ ಚೀನಾ ಭೂ ಪ್ರದೇಶದಲ್ಲಿ ಭಾರತೀಯ ಸೈನಿಕರು ಹುತಾತ್ಮರಾದರು? ನಿಜಕ್ಕೂ ನಮ್ಮ ಯೋಧರು ಮೃತಪಟ್ಟ ಸ್ಥಳ ಯಾವುದು ಎಂದು ಟ್ವಿಟರ್​​ನಲ್ಲಿ ಕೇಳಿದ್ದಾರೆ. ಇದನ್ನೂ ಓದಿ: ‘ಬಾಲಿವುಡ್​ನ ಓರ್ವ ನಟನಿಂದಲೇ ಸಂಕಷ್ಟ…’: ಮ್ಯೂಸಿಕ್​ ಮಾಫಿಯಾ ಕರಾಳ ಸತ್ಯ ಬಿಚ್ಚಿಟ್ಟ ಸೋನು ನಿಗಂ

    ಜೂ.15ರಂದು ಭಾರತ-ಚೀನಾ ಸಂಘರ್ಷ ಏರ್ಪಟ್ಟಿದಾಗಿನಿಂದಲೂ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಗಡಿಯಲ್ಲಿ ಏನಾಗುತ್ತಿದೆ ಎಂಬ ನೈಜ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಬೇಕು ಎಂದು ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳೆಲ್ಲ ಒತ್ತಾಯಿಸುತ್ತಿವೆ. ಇದನ್ನೂ ಓದಿ: ಕಟ್ಟಿಗೆ ತರಲು ಕಾಡಿಗೆ ಹೋದ ಯುವಕನ ತಲೆ-ಕಾಲು ಬಿಟ್ಟು ಅರ್ಧ ದೇಹವನ್ನೇ ತಿಂದ ಸ್ಥಿತಿಯಲ್ಲಿ ಶವಪತ್ತೆ 

    ಈಗ ಮತ್ತೆ ಪ್ರಧಾನಿ ಮೋದಿಯವರ ಸ್ಪಷ್ಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಚೀನಾದವರು ಒಳನುಗ್ಗಿಲ್ಲ ಎಂದಾದ ಮೇಲೆ ಭಾರತೀಯ ಸೈನಿಕರು ಯಾಕೆ ಕೊಲ್ಲಲ್ಪಟ್ಟರು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts