More

    ಗಿಡಗಳಿಗೆ ನೀರನ್ನು ಬೆಳಗ್ಗೆಯೇ ಏಕೆ ಕೊಡಬೇಕು? ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವಿದು..

    ಮುಂದುವರಿದ ಭಾಗ…

    ಗಿಡಗಳಿಗೆ ನೀರನ್ನು ಬೆಳಗ್ಗೆಯೇ ಏಕೆ ಕೊಡಬೇಕು? ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವಿದು..ಹೆಚ್ಚಿನ ಪಕ್ಷ ಸಸ್ಯಗಳು ರಾತ್ರಿಯ ಸಮಯದಲ್ಲಿ ನಾವು ಉಸಿರಾಡುವಂತೆಯೇ ಉಸಿರಾಡುತ್ತವೆ. ಅಂದರೆ ರಾತ್ರಿ ಹೊತ್ತು ಮರಗಳು ನಮ್ಮಂತೆಯೇ, ಪತ್ರರಂಧ್ರಗಳ ಮುಖಾಂತರ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡ್‌ನ್ನು ಗಾಳಿಗೆ ಬಿಡುತ್ತವೆ. ಹಗಲಿನಲ್ಲಿ ಉತ್ಪಾದನೆ ಮಾಡಿದ ಆಮ್ಲಜನಕದಲ್ಲಿ ಅಂದಾಜು ಶೇ.10 ಆಮ್ಲಜನಕವನ್ನು ಗಿಡಮರಗಳು ರಾತ್ರಿ ಸಮಯ ಉಸಿರಾಡುವಾಗ ತೆಗೆದುಕೊಳ್ಳುತ್ತವೆ. ಹಾಗೆಯೇ ಹಗಲು ಹೀರಿಕೊಂಡಿದ್ದ ಶಾಖವು ಉಸಿರಾಡುವಾಗ ವ್ಯಯವಾಗಿ ಮರದಲ್ಲಿರುವ ಉಷ್ಣಾಂಶವನ್ನು ಸರಿದೂಗಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.


    ಹಗಲಿನಲ್ಲಿ ತಯಾರಿಸಿದ ಗ್ಲೂಕೋಸ್ ಮತ್ತು ಪ್ರೊಟೀನ್‌ಗಳು ಮರದ ಇತರ ಭಾಗಗಳಿಗೆ ತಲುಪಬೇಕೆಂದರೆ, ಅದಕ್ಕೆ ಶಾಖದ ಜತೆಗೆ, ಶಕ್ತಿಯ ರೂಪದಲ್ಲಿ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಆದ್ದರಿಂದ ರಾತ್ರಿಯ ಸಮಯದಲ್ಲಿ, ಪತ್ರರಂಧ್ರಗಳು ಮತ್ತು ಬೇರಿನ ರೋಮಗಳ ಮೂಲಕ ಉಸಿರಾಟ ಮಾಡಿ ಆಮ್ಲಜನಕವನ್ನು ತೆಗೆದುಕೊಂಡು, ತಯಾರಾದ ಆಹಾರದ ಜತೆ ಸೇರಿ ಪ್ರಕ್ರಿಯೆಗೊಳಿಸಿ ಮರದ ಇತರ ಭಾಗಗಳಿಗೆ ಫ್ಲೂಯಂಗಳ ಮುಖಾಂತರ ಆಹಾರವನ್ನು ತಲುಪಿಸುತ್ತವೆ. ಆ ಸಂದರ್ಭದಲ್ಲಿ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಿ ಎಲೆಗಳ ಪತ್ರರಂಧ್ರಗಳ ಮುಖಾಂತರ ಹೊರಬರುತ್ತದೆ.


    ಬೆಳಗ್ಗೆ ಪುನಃ ಪನರಾವರ್ತನೆ ಆರಂಭವಾಗುತ್ತದೆ. ರಾತ್ರಿ ಪೂರ್ತಿ ಇಂಗಾಲದ ಡೈಆಕ್ಸೈಡ್‌ನ್ನು ತೆಗೆದುಕೊಳ್ಳದೇ, ತಯಾರಾದ ಆಹಾರ ಮತ್ತು ದೇಹದ ಉಷ್ಣಾಂಶ ಖಾಲಿಯಾಗಿರುವುದರಿಂದ ಮುಂಜಾನೆ ಹಸಿವಾಗಿರುತ್ತದೆ. ಆದ್ದರಿಂದ ಬೆಳಗಾದ ಕೂಡಲೆ, ಎಲೆಗಳಲ್ಲಿರುವ ಪತ್ರರಂಧ್ರಗಳು, ಬಾಯಿ ತೆರೆದು ಗಬಗಬನೆ ಇಂಗಾಲದ ಡೈಆಕ್ಸೈಡ್ ಮತ್ತು ಶಾಖವನ್ನು ತೆಗೆದುಕೊಂಡು ಮರಕ್ಕೆ ಬೇಕಾಗಿರುವ ಆಹಾರವನ್ನು ತಯಾರುಮಾಡಿ ಮರದ ಉಷ್ಣಾಂಶವನ್ನು ಸರಿದೂಗಿಸುತ್ತವೆ. ಆ ಸಂದರ್ಭದಲ್ಲಿ ಗಿಡಮರಗಳಿಗೆ ನೀರಿನ ಅಗತ್ಯತೆ ಜಾಸ್ತಿ ಇರುತ್ತದೆ. ಆದ್ದರಿಂದ ರೈತರು ತಾವು ಬೆಳೆಯುವ ಬೆಳೆಗೆ ಬೆಳಗಿನ ಜಾವದಲ್ಲಿ ನೀರನ್ನು ಕೊಡಬೇಕು. ಆದ್ದರಿಂದ ಬೆಳಗಿನ ಸಮಯದಲ್ಲಿ ಆಮ್ಲಜನಕವು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.

    ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts