More

    2022ರಲ್ಲಿ ಮೌಲ್ಯ ಹೂಡಿಕೆ ಯಾಕೆ ನಿಮ್ಮ ಕಣ್ಣಳತೆಯಲ್ಲಿರಬೇಕು?

    | ಸಂತೋಷ್ ಆರಾಸಂಗ್ ಪಾಲುದಾರರು, ಫೈನಲಾಜಿಕಲ್ ಫೈನಾನ್ಷಿಯಲ್​ ಸರ್ವಿಸಸ್​

    ಮೌಲ್ಯ ಹೂಡಿಕೆ ಎಂದರೇನು?

    ಸರಳವಾಗಿ ಹೇಳುವುದಾದರೆ ಕಡಿತದ ದರದಲ್ಲಿ ಲಭ್ಯ ಇರುವ ಅವಕಾಶಗಳನ್ನು ಕಂಡುಕೊಳ್ಳುವುದೇ ಮೌಲ್ಯಹೂಡಿಕೆ. ಸ್ಟಾಕ್​ಗಳ ವಿಚಾರಕ್ಕೆ ಬಂದಲ್ಲಿ, ಸಾಮರ್ಥ್ಯಕ್ಕೆ ಹೋಲಿಸಿದರೆ ಕಡಿಮೆ ಮೌಲ್ಯ ಅಂದಾಜಿಸಿರುವ ಕಂಪನಿಗಳನ್ನು ಜಾಗ್ರತೆಯಿಂದ ಆರಿಸಿಕೊಳ್ಳುವುದು. ಏಕೆಂದರೆ ಸ್ಟಾಕ್​ಗಳನ್ನು ಮೌಲ್ಯವನ್ನು ಕಡಿಮೆ ಅಂದಾಜಿಸಲಿಕ್ಕೆ ಅಲ್ಲಿ ಹಲವಾರು ಕಾರಣಗಳಿದ್ದಿರಬಹುದು. ಕಂಪನಿಯ ಖ್ಯಾತಿಯಲ್ಲಿ ಇರದ ಕಾರಣಕ್ಕೆ ಅದರ ಒಳ್ಳೆಯ ಬೆಳವಣಿಗೆ ಗಮನಕ್ಕೆ ಬರದಿರುವುದು ಕೂಡ ಒಂದು ಕಾರಣವಾಗಿದ್ದಿರಬಹುದು. ಹೀಗಾಗಿ ಅದು ಕೆಲವೇ ಹೂಡಿಕೆದಾರರ ಗಮನ ಸೆಳೆದಿರಬಹುದು. ಅಲ್ಲದೆ ಕಂಪನಿಯ ಷೇರುಮೌಲ್ಯ ಹೊರಗಿನ ಕೆಲವು ಕಾರಣಗಳಿಂದಾಗಿ ಕದಡಿ ಹೋಗಿರಬಹುದು ಅಥವಾ ಕಂಪನಿಯ ಮ್ಯಾನೇಜ್​ಮೆಂಟ್​ ಇಲ್ಲವೇ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಬದಲಾವಣೆ ಆಗಿರದಿದ್ದರೂ ಅದರ ಸ್ಟಾಕ್​ಗಳು ದೊಡ್ಡ ಮಾರುಕಟ್ಟೆಯ ವಿದ್ಯಮಾನಗಳಿಂದಾಗಿ ಹೊಡೆತ ಅನುಭವಿಸಿರಬಹುದು.

    ಇನ್ನು ಕೆಲವೊಂದು ಕ್ಷೇತ್ರಗಳಲ್ಲಿ ಬದಲಾವಣೆಯ ವರ್ತುಲಗಳೂ ಇರುತ್ತವೆ. ಕಳೆದ ಕೆಲವು ವರ್ಷಗಳಿಂದ ಒಳ್ಳೆಯ ಲಾಭದಲ್ಲಿದ್ದ ಕ್ಷೇತ್ರ ಅಧಿಕ ಮೌಲ್ಯದ ವ್ಯಾಪ್ತಿಗೆ ತಲುಪಿರಬಹುದು, ಮತ್ತೊಂದೆಡೆ ಇತ್ತೀಚೆಗೆ ಅನುಕೂಲಕರ ಸ್ಥಿತಿಯಿಂದ ಹೊರಗಿದ್ದ ಕ್ಷೇತ್ರ ಇದೀಗ ಗುಣಮಟ್ಟದ ಖರೀದಿ ಹಂತಕ್ಕೆ ಬಂದಿರಬಹುದು.

    ಮೌಲ್ಯದಲ್ಲಿ ಹೂಡಿಕೆ ಏಕೆ?

    1988-89 ಮತ್ತು 2007-08ರಲ್ಲಿ ಇದ್ದ ಹಾಗೆ 2020ರ ಸೆಪ್ಟೆಂಬರ್​ ವರೆಗೂ ಮೌಲ್ಯ ಅನುಕೂಲದ ಹೊರಗೇ ಇತ್ತು. ಅದಾಗ್ಯೂ ಸಾಂಕ್ರಾಮಿಕ ಪಿಡುಗಿನಿಂದಾಗಿ ಮೌಲ್ಯವು ಥೀಮ್​ ಆಗಿ ಗಮನ ಸೆಳೆಯಿತು. ಪ್ರಸ್ತುತ ಜಿಯೋ-ಪೊಲಿಟಿಕಲ್​ ಮತ್ತು ಆರ್ಥಿಕ ಪರಿಸ್ಥಿತಿ ತೀವ್ರಗತಿಯಲ್ಲಿ ವಿಕಸಿತಗೊಳ್ಳುತ್ತಿದೆ. ರಷ್ಯಾ-ಯೂಕ್ರೇನ್​ ಸಂಘರ್ಷದ ಹಿನ್ನೆಲೆಯಲ್ಲಿನ ಯಾವುದೇ ಗುಣಾತ್ಮಕ ಬೆಳವಣಿಗೆಯು ಮಾರುಕಟ್ಟೆಯ ಭಾವನೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಮೇಲೆ ಬದಲಾವಣೆ ತರುವ ಸಾಮರ್ಥ್ಯ ಹೊಂದಿವೆ. ಇದು ಇನ್ನೊಂದು ರೀತಿಯಲ್ಲಿ ಆರ್ಥಿಕತೆ ಹಾಗೂ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತದೆ.

    ಈಕ್ವಿಟಿ ಹೂಡಿಕೆಗಳ ವಿಷಯದಲ್ಲಿ ಹೇಳುವುದಾದರೆ ಮುಂದಿನ 12 ತಿಂಗಳುಗಳಲ್ಲಿ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಮತ್ತು ಮಾರುಕಟ್ಟೆ ವೀಕ್ಷಕರು ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ. ಅದಾಗ್ಯೂ ಇದು ಎಲ್ಲ ಗದ್ದಲಗಳ ನಡುವೆ ಮೌಲ್ಯದ ಪಂಥಗಳಿಗೆ ಅವಕಾಶಗಳನ್ನು ಕಲ್ಪಿಸಲಿದೆ. ಅಲ್ಲದೆ, ಮಾರುಕಟ್ಟೆ ಎತ್ತರದಲ್ಲಿರುವ ಸಮಯದಲ್ಲಿ ಮೌಲ್ಯದ ಹೂಡಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೌಲ್ಯವು ಪರವಾಗಿಲ್ಲದ ಸಮಯದಲ್ಲಿ ಹೂಡಿಕೆ ಮೇಲೆ ಗಮನ ಕೇಂದ್ರೀಕರಿಸುವುದು ದೀರ್ಘಾವಧಿಯ ಮೌಲ್ಯ ಹೊಂದಿರುತ್ತದೆ.

    ನೀವೇನು ಮಾಡಬೇಕು?

    ಹೂಡಿಕೆ ಕುರಿತು ಅಷ್ಟೇನೂ ತಿಳುವಳಿಕೆ ಇಲ್ಲದವರು ಕಂಪನಿಯ ಪ್ರತಿಯೊಂದು ಸೂಕ್ಷ್ಮ ವಿವರಗಳು ಮತ್ತು ಎಲ್ಲ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಅದರಿಂದಾಗು ಪರಿಣಾಮಗಳನ್ನು ಅಂದಾಜಿಸುವುದು ಸುಲಭದ ಕೆಲಸವಲ್ಲ. ಹೀಗಾಗಿ ಅಂಥವರು ತಮ್ಮ ದೀರ್ಘಾವಧಿಯ ಆರ್ಥಿಕ ಗುರಿ ಸಾಧಿಸಲು ಮ್ಯೂಚುವಲ್ ಫಂಡ್​ಗಳ ಮೇಲೆ ಹೂಡಿಕೆ ಮಾಡುವುದು ಪ್ರಾಯೋಗಿಕ ವಿಧಾನ. ಏಕೆಂದರೆ ಇವು ಮೌಲ್ಯ ಹೂಡಿಕೆ ಥೀಮ್​ ಮೇಲೆ ಗಮನ ಕೇಂದ್ರೀಕರಿಸಿರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts