More

    ಚಕ್ರವರ್ತಿ ಸೂಲಿಬೆಲೆ ಲೇಖನ ಪಠ್ಯದಲ್ಲಿ ಸೇರಿಸಿದ್ದೇಕೆ?: ಇಲ್ಲಿದೆ ಶಿಕ್ಷಣ ಸಚಿವರ ಸ್ಪಷ್ಟನೆ..

    ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಹತ್ತನೇ ತರಗತಿಯ ಪಠ್ಯದ ವಿಚಾರವಾಗಿ ಎದ್ದಿರುವ ವಾದ-ವಿವಾದ ಇನ್ನೂ ಮುಂದುವರೆದಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಪಠ್ಯದಲ್ಲಿ ಅಳವಡಿಸಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಈ ಮಧ್ಯೆ ಶಿಕ್ಷಣ ಸಚಿವರು ಮತ್ತೊಮ್ಮೆ ಸ್ಪಷ್ಟನೆಯನ್ನು ನೀಡಿದ್ದಾರೆ.

    ಭಗತ್ ಸಿಂಗ್ ಅವರ ಬಗ್ಗೆ ಪಠ್ಯದಿಂದ ತೆಗೆದು ಹಾಕಿಲ್ಲ. ಆದರೆ ಹೆಗಡೇವಾರ್ ಅವರ ಕುರಿತ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟ ಪಡಿಸಿದರು‌.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಮಿತಿಯವರು ಪಠ್ಯದಲ್ಲಿ ಇದ್ದ ಅಂಬೇಡ್ಕರ್ ಮತ್ತು ಗಾಂಧಿ ಅವರ ಉದ್ಧಾತ ಚಿಂತನೆಗಳನ್ನು ತೆಗೆದು ಹಾಕಿದ್ದರು. ಆದರೆ ಈಗ ಮತ್ತೆ ಅಂತಹ ಮಹಾನ್ ಪುರುಷರ ವಿಚಾರಧಾರೆಗಳನ್ನು ಮತ್ತೆ ಪಠ್ಯದಲ್ಲಿ ಸೇರಿಸಲಾಗುತ್ತಿದೆ ಎಂದು ಹೇಳಿದರು.

    ಇನ್ನು ಚಕ್ರವರ್ತಿ ಸೂಲಿಬೆಲೆ ಅವರ ಲೇಖನವನ್ನು ಪಠ್ಯದಲ್ಲಿ ಸೇರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಸೂಲಿಬೆಲೆ ಕ್ರಾಂತಿಕಾರಿಗಳ ಬಗ್ಗೆ ಬರೆದಿದ್ದಾರೆ. ಹೀಗಾಗಿ ಅವರನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ.

    ಶಾಸಕ ಜಮೀರ್​ ಅಹಮದ್​ರಿಂದ ಎಂಜಲು ಸೇವನೆ; ತಿನ್ನಲು ಕಾರಣವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts