More

    ರಷ್ಯಾ ಕರೊನಾ ಲಸಿಕೆ ಬಗ್ಗೆ ಜಗತ್ತಿಗೆ ಸಂಶಯ; 9 ತಿಂಗಳಲ್ಲಿ ಚುಚ್ಚುಮದ್ದು ತಯಾರಾಗಿದ್ದೇಗೆ?

    ಮಾಸ್ಕೋ: ಕರೊನಾ ನಿಗ್ರಹಕ್ಕೆ ಜಗತ್ತಿನ ಪ್ರಪ್ರಥಮ ಲಸಿಕೆ ಸಿದ್ಧಪಡಿಸಲಾಗಿದೆ ಎಂದು ತಿಂಗಳ ಹಿಂದೆಯೇ ರಷ್ಯಾ ಘೋಷಿಸಿತ್ತು. ಆಗಸ್ಟ್​ ಮಧ್ಯಭಾಗದಲ್ಲಿ ರೋಗಿಗಳ ಬಳಕೆಗೆ ಲಭ್ಯವಾಗಲಿದೆ ಎಂದೇ ಹೇಳಿತ್ತು. ಅದರಂತೆ ಈಗ ಲಸಿಕೆಯನ್ನು ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ.

    ರಷ್ಯಾದ ಕರೊನಾ ಲಸಿಕೆಯನ್ನು ನೋಂದಣಿ ಮಾಡಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಮಂಗಳವಾರವಷ್ಟೇ ಘೋಷಿಸಿದ್ದಾರೆ. ಜತೆಗೆ ತನ್ ಇಬ್ಬರು ಮಕ್ಕಳ ಪೈಕಿ ಒಬ್ಬರಿಗೆ ನೀಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

    ಇಷ್ಟೆಲ್ಲ ಬೆಳವಣಿಗೆಗಳಾದರೂ ಇಡೀ ಜಗತ್ತು ರಷ್ಯಾದ ಲಸಿಕೆ ಬಗ್ಗೆ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ.
    ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಆಕ್ಸ್​ಫರ್ಡ್​ ವಿವಿ ತಂಡ ಹಾಗೂ ಅಮೆರಿಕದ ಮಾಡೆರ್ನಾ ಕಂಪನಿಯನ್ನು ರಷ್ಯಾ ಸದ್ದಿಲ್ಲದೆ ಹಿಂದಕ್ಕೆ ಹಾಕಿವೆ. ಇವೆರಡು ಸಂಸ್ಥೆಗಳು ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಆರಂಭಿಸಿದಾಗಲೂ ರಷ್ಯಾ ಲಸಿಕೆ ಮಹತ್ವದ ಬೆಳವಣಿಗೆ ಸಾಧಿಸಿದ್ದರ ಬಗ್ಗೆ ಅಷ್ಟಾಗಿ ಮಾಹಿತಿಯೇ ಇರಲಿಲ್ಲ.

    ಇದನ್ನೂ ಓದಿ; ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್​ ಮಗಳಿಗೆ ಚುಚ್ಚುಮದ್ದು ಪ್ರಯೋಗ 

    ಎಲ್ಲಕ್ಕಿಂತ ಮುಖ್ಯವಾಗಿ ಕರೊನಾ ಮಹಾಮಾರಿ ಎಂದು ಜಗತ್ತಿಗೆ ಘೋಷಣೆಯಾಗಿ 9 ತಿಂಗಳಷ್ಟೇ ಕಳೆದಿವೆ. ಇಷ್ಟು ಕಡಿಮೆ ಸಮಯದಲ್ಲಿ ಅದೂ ಕೂಡ ಕ್ಲಿನಿಕಲ್​ ಟ್ರಯಲ್​ ಪೂರ್ಣಗೊಳ್ಳದೇ ನಾಗರಿಕ ಬಳಕೆಗಾಗಿ ಇದನ್ನು ಮುಕ್ತಗೊಳಿಸಿರುವುದು ತಜ್ಞರ ಅಚ್ಚರಿಗೆ ಕಾರಣವಾಗಿದೆ. ಲಸಿಕೆ ಮಾನವ ಬಳಕೆಗೆ ಸುರಕ್ಷಿತವಾಗಿದೆಯೇ ಹಾಗೂ ಕರೊನಾ ಗುಣಪಡಿಸುವ ಕ್ಷಮತೆ ಹೊಂದಿದೆಯೇ ಎಂಬ ಬಗ್ಗೆ ಅನುಮಾನಗಳು ದೂರವಾಗಿಲ್ಲ.

    ರಷ್ಯಾದ ತರಾತುರಿ ಬಗ್ಗೆ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಸಿತ್ತು. ಇದಲ್ಲದೇ, ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋಣಿ ಫೌಸಿ ಕೂಡ ರಷ್ಯಾ ಹಾಗೂ ಚೀನಾದಲ್ಲಿ ನಡೆಯುತ್ತಿರುವ ಲಸಿಕೆ ಸಂಶೋಧನೆಗಳ ಬಗ್ಗೆ ಕೆಲ ಸಂದೇಹಗಳನ್ನು ಎತ್ತಿದ್ದರು.

    ಕರೊನಾದ ನಿರ್ಜೀವ ವೈರಸ್​ ಬಳಸಿ ಈ ಲಸಿಕೆ ತಯಾರಿಸಲಾಗಿದೆ ಎಂದು ಚುಚ್ಚುಮದ್ದು ಅಭಿವೃದ್ಧಿಪಡಿಸಿರುವ ರಷ್ಯಾ ಸರ್ಕಾರಿ ಸ್ವಾಮ್ಯದ ಗಾಮೆಲಿಯಾ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕರು ಹೇಳಿದ್ದಾರೆ. ಇವರು ಹೇಳುವ ಪ್ರಕಾರ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಹೇಳಿದೆ. ಈವರೆಗೆ ಮೊದಲ ಹಂತದ ಫಲಿತಾಂಶಗಳನ್ನಷ್ಟೇ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ. ಲಸಿಕೆ ಯಶಸ್ವಿಯಾಗಿದ್ದು, ಅಗತ್ಯ ಪ್ರತಿರೋಧ ಶಕ್ತಿಯನ್ನು ದೇಹದಲ್ಲಿ ಉಂಟುಮಾಡಿದೆ ಎಂದು ರಷ್ಯಾ ಹೇಳಿಕೊಂಡಿದೆ.

    ಇದನ್ನೂ ಓದಿ; ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…! 

    ಸಾಮಾನ್ಯವಾಗಿ ಲಸಿಕೆಯೊಂದರ ಕ್ಲಿನಿಕಲ್​ ಟ್ರಯಲ್ ಹಲವು ವರ್ಷಗಟ್ಟಲೇ ನಡೆಯುತ್ತದೆ. ಅದನ್ನು ಸಾವಿರಾರು ಜನರ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ರಷ್ಯಾದ ಲಸಿಕೆ ವಿಚಾರದಲ್ಲಿ ಇದೆಲ್ಲವನ್ನೂ ಎರಡು ತಿಂಗಳಲ್ಲಿಯೇ ಪೂರ್ಣಗೊಳಿಸಲಾಗಿದೆ.

    ಈ ಹಿಂದೆ ಕಾಣಿಸಿಕೊಂಡ ಮಿಡಲ್​ ಈಸ್ಟ್​ ರೆಸ್ಪಿರೇಟರಿ ಸಿಂಡ್ರೋಮ್​ಗೆ (ಎಂಇಆರ್​ಎಸ್​) ಕಾರಣವಾದ ವೈರಸ್​ ಕೂಡ ಇದೇ ಗುಣಗಳನ್ನು ಹೊಂದಿತ್ತು. ಅದಕ್ಕೆ ಈಗಾಗಲೇ ಲಸಿಕೆ ಕಂಡುಹಿಡಿದಿರುವುದರಿಂದ ಅದೇ ಮಾದರಿಯಲ್ಲಿ ಕೋವಿಡ್​ಗೆ ತ್ವರಿತವಾಗಿ ಲಸಿಕೆ ಕಂಡುಹಿಡಿಯಲು ಸಾಧ್ಯವಾಯಿತು ಎಂಬುದು ರಷ್ಯಾ ವಾದ.
    ಲಸಿಕೆ ಬೆಲೆ ಎಷ್ಟು ಎಂಬುದನ್ನು ಬಹಿರಂಗ ಪಡಿಸಿಲ್ಲ. ಜತೆಗೆ 20ಕ್ಕೂ ಅಧಿಕ ದೇಶಗಳು ಲಸಿಕೆ ಪಡೆಯುವ ಆಸಕ್ತಿ ತೋರಿಸಿವೆ ಎಂದು ಹೇಳಿದೆ.

    ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್​ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts