More

    ಚೀನಾದ 59 ಆ್ಯಪ್​ ನಿಷೇಧಿಸ್ಪಟ್ಟರೂ, ಪಬ್​ಜಿ ಗೇಮ್​ ಯಾಕೆ ಬ್ಯಾನ್​ ಆಗಲಿಲ್ಲ ಗೊತ್ತೇ?

    ನವದೆಹಲಿ: ಲಡಾಖ್​ ಗಡಿ ಗಲಾಟೆಯ ಬಳಿಕ ಭಾರತೀಯರ ಖಾಸಗಿ ಮಾಹಿತಿಗಳ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಸೋಮವಾರವಷ್ಟೇ ನಿಷೇಧಿಸಿದೆ. ಆದರೆ ಭಾರತದಲ್ಲಿ ಮಕ್ಕಳಿಂದ ಯುವಕರವರೆಗೆ ಸಾಕಷ್ಟು ಜನಪ್ರಿಯವಾಗಿರುವ ಮೊಬೈಲ್​ ಗೇಮ್​ ಆ್ಯಪ್​ ಪಬ್​ಜಿ ಯಾಕೆ ನಿಷೇಧವಾಗಿಲ್ಲ ಎಂಬ ಪ್ರಶ್ನೆ ಈಗ ಸಾಕಷ್ಟು ಜನರನ್ನು ಕಾಡುತ್ತಿದೆ. ಟಿಕ್​ಟಾಕ್​, ಶೇರ್​ಇಟ್​, ಯುಸಿ ಬ್ರೌಸರ್​ ಮತ್ತು ಕ್ಯಾಮ್​ ಸ್ಕಾನರ್​ನಂಥ ಹಲವು ಜನಪ್ರಿಯ ಆ್ಯಪ್​ಗಳು ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಪ್ಲೇಯರ್​ ಅನ್​ನೋನ್ಸ್​ ಬ್ಯಾಟಲ್​ಗ್ರೌಂಡ್ಸ್​ (ಪಬ್​ಜಿ)ಗೇಮ್​ ಹೇಗೆ ನಿಷೇಧದಿಂದ ಪಾರಾಯಿತು ಎಂಬುದು ಹಲವರಿಗೆ ಅಚ್ಚರಿ ಹುಟ್ಟಿಸಿದೆ. ಇದಕ್ಕೆ ಕಾರಣ ಇಲ್ಲಿದೆ ಓದಿ…

    ಪಬ್​ಜಿ ಸಂಪೂರ್ಣವಾಗಿ ಚೀನಾದ ಆ್ಯಪ್​ ಆಗದೇ ಇರುವುದು ಅದು ನಿಷೇಧಕ್ಕೊಳಗಾಗದಿರಲು ಪ್ರಮುಖ ಕಾರಣವಾಗಿದೆ. ಈ ಗೇಮ್​ ಅನ್ನು ದಕ್ಷಿಣ ಕೊರಿಯಾದ ಕಂಪನಿ ಬ್ಲೂಹೋಲ್​ ಸಿದ್ಧಪಡಿಸಿದ್ದು, ಅದುವೇ ಇದರ ನಿರ್ವಹಣೆಯನ್ನೂ ಮಾಡುತ್ತಿದೆ. ಆದರೆ ಈ ಗೇಮ್​ ಜನಪ್ರಿಯಗೊಂಡ ಬಳಿಕ ಚೀನಾದ ಬಹುರಾಷ್ಟ್ರೀಯ ಕಂಪನಿ ಟೆನ್​ಸೆಂಟ್​ ಕೂಡ ಈ ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದು, ಚೀನಾದಲ್ಲೂ ಇದನ್ನು ಸಾಕಷ್ಟು ಜನಪ್ರಿಯಗೊಳಿಸಿದೆ. ಬಳಿಕ ಅದನ್ನು ಭಾರತದಲ್ಲೂ ಹಂಚಿಕೆ ಮಾಡಿ ಜನಪ್ರಿಯಗೊಳಿಸಿದೆ. ಭಾರತದಲ್ಲಿ ಇದರ ಮಾರುಕಟ್ಟೆಯ ಹಕ್ಕು ಟೆನ್​ಸೆಂಟ್​ ಹೋಲ್ಡಿಂಗ್ಸ್​ ಬಳಿಯಲ್ಲಿಯೇ ಇದೆ. ಈ ರೀತಿ ಮಿಶ್ರ ಪಾಲುದಾರಿಕೆ ಹೊಂದಿರುವ ಕಾರಣದಿಂದಾಗಿ ಈ ನಿಷೇಧಕ್ಕೊಳಗಾಗಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?

    ನೆಟ್ಟಿಗರಿಂದ ಟ್ರೋಲ್​

    ಪಬ್​ಜಿ ನಿಷೇಧದಿಂದ ಪಾರಾದ ಬೆನ್ನಲ್ಲೇ ಈ ಗೇಮ್​ ಇಷ್ಟಪಡುವವರು, ಟಿಕ್​ಟಾಕ್​ ಇಷ್ಟಪಡುವವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಪಬ್​ಜಿ ಆಡುತ್ತಲೇ ಹೆಚ್ಚಿನ ಸಮಯ ಕಳೆಯುವ ಮಕ್ಕಳ ಪಾಲಕರು, ಪಬ್​ಜಿ ನಿಷೇಧಿಸದಿರುವುದಕ್ಕೆ ಕೋಪಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts