More

    ಉತ್ತರ ಕರ್ನಾಟಕ ನಿರ್ಲಕ್ಷಿಸಿದ್ದೇಕೆ ?; ಸಿಎಂಗೆ ಪತ್ರ ಬರೆದು ಕೇಳಿದ ಮಾಜಿ ಸಿಎಂ

    ಬೆಂಗಳೂರು: ಉತ್ತರಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ನಿರ್ದಿಷ್ಟ ನಿರ್ಧಾರ ಪ್ರಕಟಿಸದೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ.

    ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಸುದೀರ್ಘ ಪತ್ರ ಬರೆದಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಳಗಾವಿಯಲ್ಲಿ ಚೊಚ್ಚಲ ಅಧಿವೇಶನ ನಡೆಯಿತು. ಆದರೆ ಯಾವುದೇ ವಿಶೇಷವಾಗಿರುವ ಅಭಿವೃದ್ಧಿ ಪರ ನಿರ್ಣಯ ತೆಗೆದುಕೊಳ್ಳಲಿಲ್ಲ. ಚಾಲ್ತಿ ಕಾರ್ಯಕ್ರಮಗಳನ್ನು ಮತ್ತೆ ೋಷಿಸಿ ಉತ್ತರ ಕರ್ನಾಟಕದ ಜನರ ನಿರೀಕ್ಷೆ ಹುಸಿಗೊಳಿಸಲಾಗಿದೆ ಎಂದಿದ್ದಾರೆ.

    ಕೃಷ್ಣಾ ಮೇಲ್ದಂಡೆ ಹಂತ 3ರ 130 ಟಿಎಂಸಿ ಅಡಿ ನೀರು ಬಳಕೆಗೆ ನಮ್ಮ ಸರ್ಕಾರ ಮಾಡಿರುವ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಈ ವರ್ಷ ಒಂದು ರೂಪಾಯಿಯನ್ನೂ ನೀಡಿಲ್ಲ.

    ಮಹದಾಯಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅರಣ್ಯ ಇಲಾಖೆ ಅನುಮತಿ ಪಡೆಯಲು ತೆಗೆದುಕೊಂಡ ಕ್ರಮದ ವಿವರಣೆ ನೀಡದಿರುವುದು ನೋಡಿದರೆ ಯೋಜನೆ ಬಗ್ಗೆ ಆಸಕ್ತಿಯಿಲ್ಲದಂತೆ ಕಾಣಿಸುತ್ತದೆ ಎಂದು ಬೊಮ್ಮಾಯಿ ತಿವಿದಿದ್ದಾರೆ.

    ಪ್ರಸ್ತಾಪವಾಗದ ಯೋಜನೆಗಳು

    ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಾಯವಾಗಿ ಸಮತೋಲನ ಜಲಾಶಯ ನಿರ್ಮಾಣ, ಸಾಸಲಟ್ಟಿ, ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೀ, ಶ್ರೀ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳನ್ನು ಮುಂದುವರಿಸುವ ಅಥವಾ ಬಜೆಟ್‌ನಲ್ಲಿ ಹಣ ಕಾದಿರಿಸಿದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲಿಲ್ಲ.

    ಕಲಬುರಗಿಯ ಜವಳಿ ಪಾರ್ಕ್, ರಾಯಚೂರಿನ ಾರ್ಮಾ ಪಾರ್ಕ್, ವಿಜಯಪುರದ ದ್ರಾಕ್ಷಿ ಸಂಸ್ಕರಣೆ ಮತ್ತು ಶೀತಲ ಘಟಕ, ಬಳ್ಳಾರಿಯ ಜೀನ್ಸ್ ಪಾರ್ಕ್ ಬಗ್ಗೆ ಚಕಾರವೆತ್ತಿಲ್ಲ. ನಮ್ಮ ಸರ್ಕಾರ ಕಾದಿಟ್ಟ ಅನುದಾನ ಬಳಕೆ ಬಗ್ಗೆಯೂ ಉದಾಸೀನತೆ.

    ಉತ್ತರಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳ ನಿರ್ಮಾಣಕ್ಕೆ ವೇಗ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನಿರ್ಲಕ್ಷಿಸಲಾಗಿದೆ. ಹಾವೇರಿ ಮೆಡಿಕಲ್ ಕಾಲೇಜು, ಮೆಗಾ ಡೈರಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಂದುಳಿದ ಏಳು ಜಿಲ್ಲೆಗಳಿಗೆ ನೂತನ ವಿಶ್ವವಿದ್ಯಾಲಯ ಮಂಜೂರು ಮಾಡಲಾಗಿತ್ತು. ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವಿವಿಗಳನ್ನು ಅನುದಾನದ ಕೊರತೆ ನೆಪವೊಡ್ಡಿ ಮುಚ್ಚುವ ಪ್ರಸ್ತಾವನೆ ಕೈಬಿಡಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ಒತ್ತಾಯಿಸಿದ್ದಾರೆ.

    ಎರಡು ತಿಂಗಳ ನಂತರ ಸ್ವಕ್ಷೇತ್ರಕ್ಕೆ ಪ್ರವಾಸ

    ಹೃದಯದ ಶಸ ಚಿಕಿತ್ಸೆಗೆ ಒಳಗಾಗಿ ಗುಣಮುಖವಾಗಿರುವ ಬೊಮ್ಮಾಯಿಯವರು ಎರಡು ತಿಂಗಳ ನಂತರ ಬೆಂಗಳೂರಿನಿಂದ ಹೊರಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರಯಾಣ ಬೆಳೆಸುವ ಅವರು ಸ್ವಕ್ಷೇತ್ರದಲ್ಲಿ ಎರಡು ದಿನಗಳ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts