More

    ಹೆದ್ದಾರಿ ಬಂದ್‌!! ಗೋವಾಕ್ಕೆ ಹೋಗೋ ಉತ್ತರ ಕರ್ನಾಟಕ ಮಂದಿಗೆ ಮಹತ್ವದ ಸೂಚನೆ

    ಕಾರವಾರ: ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೆಲ ದಿನ ಬಂದಾಗಲಿದ್ದು, ವಾಹನ ಸವಾರರು ಗೋವಾಕ್ಕೆ ತೆರಳುವ ಮುಂಚೆ ಒಮ್ಮೆ ಎಚ್ಚರ ವಹಿಸುವುದೊಳಿತು.

    ಜೊಯಿಡಾ ತಾಲೂಕಿನ ರಾಮನಗರ ಅನಮೋಡ ನಡುವೆ ರೈಲ್ವೆ ಹಳಿಯನ್ನು ಡಬಲಿಂಗ್‌ ಕಾಮಗಾರಿಯ ಸಲುವಾಗಿ ರಾಮನಗರ- ಅನಮೋಡ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌4ಎ ದಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಆದೇಶ ಹೊರಡಿಸಿದ್ದಾರೆ.
    ನೈರುತ್ಯ ರೈಲ್ವೆ ವಿಭಾಗವು ತೀನೈಘಾಟ್‌-ಕ್ಯಾಸಲ್‌ರಾಕ್‌ ನಡುವೆ ಡಬಲಿಂಗ್‌ ಕಾರ್ಯ ನಡೆಸುತ್ತಿದೆ. ರೈಲ್ವೆ ವಿಕಾಸ ನಿಗಮವು ನೀಡಿದ ಮನವಿಯನ್ನು ಪರಿಗಣಿಸಿ ಜನವರಿ 5 ರಿಂದ 25 ರವರೆಗೆ 20 ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್‌ ಮಾಡಿ ಆದೇಶ ಹೊರಡಿಸಲಾಗಿದೆ. ಅನಮೋಡ ರಾಮನಗರ (ದಾಂಡೇಲಿ) ಕಡೆ ಹೋಗುವ ಲಘು ವಾಹನಗಳಿಗೆ ಅನಮೋಡ ಕ್ಯಾಸಲ್‌ರಾಕ್‌ ಕ್ರಾಸ್‌, ಕ್ಯಾಸಲ್‌ರಾಕ್‌ ಕುಣಗಿನಿ ಚೆಕ್‌ ಪೋಸ್ಟ್‌, ಚಾಂದೇವಾಡಿ ಜಗಲಬೇಟ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಮನಗರದಿಂದ ಅನಮೋಡ ಕಡೆ ಹೋಗುವ ವಾಹನಗಳಿಗೆ ರಾಮನಗರ ತೀನೈಘಾಟ್‌, ಮಾರ್ಸಂಗಳ್‌, ಕ್ರಾಸ್‌, ಹೆಮ್ಮಡಗಾ ರೋಡ್‌, ಅನಮೋಡ ಮಾರ್ಗದಲ್ಲಿ ಲಘು ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಮ ಮತ್ತು ಭಾರಿ ವಾಹನಗಳಿಗೆ ಅಳ್ನಾವರ-ಹಳಿಯಾಳ-ಯಲ್ಲಾಪುರ-ಕಾರವಾರ-ಗೋವಾ ಮಾರ್ಗ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
    ಪೊಲೀಸ್‌ ಇಲಾಖೆ ಅವಶ್ಯಕ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಸಂಚಾರ ಮಾರ್ಗ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಬೇಕು. ವಾಹನಗಳ ಚಲನ ವಲನಗಳ ಬಗ್ಗೆ ಸರಿಯಾಗಿ ನಿಗಾವಹಿಸಿ ಅಪಘಾತ ಆಗದಂತೆ ಕ್ರಮ ವಹಿಸುವಂತೆ ಪೊಲೀಸ್‌ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗ ಬದಲಾವಣೆ ಕುರಿತು ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಪೊಲೀಸ್‌ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಸೆಕ್ಯುರಿಟಿ ಗಾರ್ಡ್‌ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಬೇಕು. ಬದಲಿ ಮಾರ್ಗದಲ್ಲಿ ವಿದ್ಯುತ್‌ ಕಂಬಗಳಿಗೆ ಲೈಟ್‌ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಅಪಾಯಕಾರಿ ಅರಬೈಲ್ ಘಟ್ಟದಲ್ಲಿ ಸಾವಿನ ಆಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts