More

    ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್ ಎಲ್ಲಿ? ಮನೆಯಲ್ಲೂ ಇಲ್ಲ…ಸುಳಿವೂ ಸಿಗುತ್ತಿಲ್ಲ..; ಸಾದ್​ ಬಂಧನ ದೆಹಲಿ ಪೊಲೀಸರ ಸದ್ಯದ ಆದ್ಯತೆಯಲ್ಲ

    ನವದೆಹಲಿ: ಕರೊನಾ ವೈರಸ್​ ನಿಯಂತ್ರಣದ ಕ್ರಮವಾಗಿ ದೆಹಲಿ ಸರ್ಕಾರ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್​ 144 ಜಾರಿ ಮಾಡಿದ್ದರೂ ಅದನ್ನು ಉಲ್ಲಂಘನೆ ಮಾಡಿ ದೆಹಲಿ ನಿಜಾಮುದ್ದೀನ್​ ಮರ್ಖಜ್​ನಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆ ನಡೆಸಿದ್ದು, ಅದರಲ್ಲಿ 3000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನಂತರ ಅದೊಂದು ಕರೊನಾ ವೈರಸ್​ ಹಾಟ್​ಸ್ಫಾಟ್​ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

    ಭಾರತದಲ್ಲಿ ಕರೊನಾ ವೈರಸ್​ ಮೂರು ಸಾವಿರದ ಗಡಿ ದಾಟಿದೆ. ಅದರಲ್ಲಿ ಶೇ.30ರಷ್ಟು ತಬ್ಲಿಘಿ ಜಮಾತ್​ ಸಮಾವೇಶದಲ್ಲಿ ಭಾಗವಹಿಸಿದ್ದವರ ಪಾಲೇ ಇದೆ.

    ಪೊಲೀಸರು ಈಗಾಗಲೇ ತಬ್ಲಿಘಿ ಜಮಾತ್​ನ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್​ ಖಾಂಡಲ್ವಿ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ 1897ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಆದರೆ ಮೌಲಾನಾ ಸಾದ್​ ಪತ್ತೆಯಿಲ್ಲ. ಮಾ.28ರಿಂದಲೂ ತಲೆ ಮರೆಸಿಕೊಂಡಿದ್ದಾನೆ. ಈ ಮಧ್ಯೆ ಆಡಿಯೋವೊಂದನ್ನು ಬಿಡುಗಡೆ ಮಾಡಿರುವ ಆತ, ತನ್ನ ಅನುಯಾಯಿಗಳಿಗೆ ಸಂದೇಶವನ್ನೂ ನೀಡಿದ್ದ. ಕರೊನಾ ಸೋಂಕಿಗೆ ಸಂಬಂಧಪಟ್ಟಂತೆ ವೈದ್ಯರ ಸಲಹೆಗಳನ್ನು ಪಾಲಿಸಿ, ನಾನೂ ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದೇನೆ ಎಂದು ಹೇಳಿದ್ದ. ಆದರೆ ಮೌಲಾನಾ ಸಾದ್​ನ ಸುಳಿವು ಮಾತ್ರ ಸಿಗುತ್ತಿಲ್ಲ.

    ಆದರೆ ಮೌಲಾನಾ ಮೊಹಮ್ಮದ್​ ಸಾದ್​ ನಿಜಕ್ಕೂ ಕ್ವಾರಂಟೈನ್​ನಲ್ಲಿ ಇದ್ದಾನಾ? ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ನಾಟಕ ಆಡುತ್ತಿದ್ದಾನಾ ಎಂಬ ಅನುಮಾನವೂ ಕಾಡುತ್ತಿದೆ. ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಕರೊನಾ ವೈರಸ್​ ತಗುಲಿದೆ. ಹೀಗಿರುವಾಗ ಮೌಲಾನಾ ಸಾದ್​ಗೂ ಸೋಂಕು ತಗುಲದೆ ಇರುತ್ತದೆಯಾ ಎಂಬರ್ಥದಲ್ಲೇ ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಪೊಲೀಸರೂ ಇದೇ ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ದೆಹಲಿ ಪೊಲೀಸರೂ ಕೂಡ ಮೌಲಾನಾ ಸಾದ್​ ಬಂಧನಕ್ಕೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ತಾನು 14ದಿನಗಳ ಕ್ವಾರೆಂಟೈನ್​ನಲ್ಲಿ ಇದ್ದುದಾಗಿ ಸಾದ್​ ಹೇಳಿಕೊಂಡಿದ್ದರಿಂದ ಈ ಅವಧಿಯಲ್ಲಿ ಬಂಧನ ಸಾಧ್ಯವಿಲ್ಲ. ಸದ್ಯಕ್ಕೆ ನಿಜಾಮುದ್ದೀನ್​ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಇನ್ನಿತರರ ಪತ್ತೆಕಾರ್ಯವೇ ಮೊದಲ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೌಲಾನಾ ಸಾದ್​ ತಮ್ಮ ಮನೆಯಲ್ಲೂ ಇಲ್ಲ. ಈಗಾಗಲೇ ಪೊಲೀಸ್​ ಅಧಿಕಾರಿಗಳ ತಂಡವೊಂದು ಅವರ ಮನೆಗೂ ಭೇಟಿಕೊಟ್ಟಿತ್ತು. ಆದರೆ ಆತನ ಸುಳಿವು ಸಿಕ್ಕಿಲ್ಲ. ಎಲ್ಲಿದ್ದಾನೆ ಎಂಬ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

    ಈ ಮಧ್ಯೆ ಮೌಲಾನಾ ಪರ ವಕೀಲರು ಮತ್ತೊಂದು ವಿಷಯ ಹೇಳಿದ್ದಾರೆ. ಸಾದ್​ ಸದ್ಯ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ದೆಹಲಿ ಪೊಲೀಸರ ನೋಟಿಸ್​ಗೆ ಉತ್ತರಿಸುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts