More

    ಶ್ರೀಲಂಕಾದಿಂದ ಚೀನಾಕ್ಕೆ 1 ಲಕ್ಷ ಕೋತಿಗಳು ರಫ್ತು ; ಮಂಗಗಳು ಯಾಕೆ ಬೇಕು ಗೊತ್ತಾ?

    ಚೀನಾ: ಚೀನಾದಿಂದ ಭಾರೀ ಪ್ರಮಾಣದ ಸಾಲ ಪಡೆದಿರುವ ಶ್ರೀಲಂಕಾ ದೇಶಕ್ಕೆ ಚೀನಾದ ಯಾವುದೇ ಬೇಡಿಕೆಯನ್ನೂ ತಿರಸ್ಕರಿಸುವ ಶಕ್ತಿ ಇಲ್ಲ. ಚೀನಾ ದೇಶಕ್ಕೆ ಕೋತಿಗಳನ್ನು ರಫ್ತು ಮಾಡಲು ನಿರ್ಧರಿಸಿದೆ. ಅಳಿವಿನಂಚಿನಲ್ಲಿರುವ ಕೋತಿಗಳನ್ನು ಆಮದು ಮಾಡಿಕೊಳ್ಳಲು ಖಾಸಗಿ ಚೀನೀ ಕಂಪನಿಯಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದೆ. ಒಂದು ಲಕ್ಷ ಕೋತಿಗಳನ್ನು ಚೀನಾಕ್ಕೆ ಕಳುಹಿಸಿಕೊಡಲು ಲಂಕಾ ಸರ್ಕಾರ ಒಪ್ಪಿಕೊಂಡಿದೆ.

    ನಮ್ಮ ದೇಶದಲ್ಲಿಯೇ ಅಳಿವಿನಂಚಿನಲ್ಲಿರುವ ಕೋತಿಗಳನ್ನು ಕಳುಹಿಸಬಾರದು ಎಂದು ಪರಿಸರವಾದಿಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಲಂಕಾ ಸರ್ಕಾರ ಚೀನಾ ಬೇಡಿಕೆಗೆ ಸ್ಪಂದಿಸಿದೆ.

    ಚೀನಾದಲ್ಲಿ ಮೃಗಾಲಯದ ಜೊತೆಗೆ ಸಹಭಾಗಿತ್ವವುಳ್ಳ ಪ್ರಾಣಿ ಸಂತತಿ ವೃದ್ಧಿಗೆ ಒತ್ತು ನೀಡುವ ಖಾಸಗಿ ಕಂಪನಿಯೊಂದು ಒಂದು ಲಕ್ಷ ಕೋತಿಗಳಿಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಲಂಕಾ ಸರ್ಕಾರ ಒಪ್ಪಿದೆ. ಒಂದೇ ಬಾರಿಗೆ ಲಕ್ಷ ಕೋತಿಗಳನ್ನು ಹಿಡಿದು ಕಳುಹಿಸುವುದಿಲ್ಲ. ದೇಶದ ವಿವಿಧೆಡೆ ಕೋತಿಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿದೆ ಹೀಗಾಗಿ ಬೇಡಿಕೆಗೆ ಒಪ್ಪಿದ್ದೇವೆ. ಸಂರಕ್ಷಿತ ಪ್ರದೇಶದ ಕೋತಿಗಳನ್ನು ಮುಟ್ಟುವುದೂ ಇಲ್ಲ ಎಂದು ಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ಹೇಳಿದ್ದಾರೆ.

    ಇದನ್ನೂ ಓದಿ:  ವೆಜ್ ರೋಲ್ ಬದಲಿಗೆ ಚಿಕನ್ ರೋಲ್ ಕೊಟ್ಟ ಹೋಟೆಲ್​ ; 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟ ಗ್ರಾಹಕ!

    ಟೋಕ್ ಮಕಾಕ್ ಪ್ರಬೇಧದ ಕೋತಿಗಳಿಗೆ ಚೀನಾ ಬೇಡಿಕೆ ಇಟ್ಟಿದೆ. ಜೀವಂತ ಪ್ರಾಣಿಗಳನ್ನು ಹೊರದೇಶಕ್ಕೆ ಕಳುಹಿಸುವುದಕ್ಕೆ ಲಂಕಾದಲ್ಲಿ ನಿಷೇಧ ಇದೆ. ಆದರೆ ಮೂರು ಪ್ರಭೇದಗಳ ಕೋತಿಗಳು, ನವಿಲುಗಳು, ಕಾಡಹಂದಿಗಳು ಸೇರಿದಂತೆ ಹಲವು ವನ್ಯಜೀವಿಗಳು ಸಂರಕ್ಷಿತ ಪಟ್ಟಿಯಿಂದ ಶ್ರೀಲಂಕಾ ಕೈಬಿಟ್ಟಿದೆ. ಹಾಗಾಗಿ ಪಟ್ಟಿಯಿಂದ ಕೈಬಿಡಲಾದ ಪ್ರಾಣಿಗಳು ಕೃಷಿಭೂಮಿಯಲ್ಲಿ ಉಪದ್ರವ ಕೊಟ್ಟರೆ ರೈತರು ಅವುಗಳನ್ನು ಸಾಯಿಸಬಹುದಾಗಿದೆ.

    ಕೋತಿಗಳು ಚೀನಾಕ್ಕೆ ಯಾಕೆ ಬೇಕು?: ಚೀನಾ ದೇಶವು ತನಗೆ ಟೋಕ್ ಮಕಾಕ್ ತಳಿಯ ಕೋತಿಗಳೇ ಬೇಕು ಎಂದು ಕೇಳುತ್ತಿಲ್ಲ. ಆದರೆ, ಯಾವುದೇ ತಳಿಯ ಕೋತಿಗಳನ್ನಾದರೂ ರಫ್ತು ಮಾಡಿ ಎಂದು ಬೇಡಿಕೆ ಇಟ್ಟಿದೆ. ಒಟ್ಟು 1 ಲಕ್ಷ ಕೋತಿಗಳನ್ನು ಚೀನಾದ 1 ಸಾವಿರ ಪ್ರಾಣಿ ಸಂಗ್ರಹಾಲಯಗಳಲ್ಲಿ ಇರಿಸಲು, ಪ್ರದರ್ಶನ ಮಾಡಲು ನಿರ್ಧರಿಸಿರೋದಾಗಿ ಚೀನಾ ಹೇಳಿದೆ. ಆದ್ರೆ, ಈ ಕೋತಿಗಳನ್ನು ಆಹಾರವನ್ನಾಗಿ ಸೇವಿಸುವ ಉದ್ದೇಶದಿಂದ ಅಥವಾ ಪ್ರಯೋಗಾಲಯಗಳಲ್ಲಿ ಬಳಕೆ ಮಾಡಲು ಅಗತ್ಯವಿದೆ ಎಂದು ಚೀನಾ ಹೇಳಿಲ್ಲ. ಚೀನಾ ಕೇವಲ 18. ಕೋವಿಡ್-19 ಸಾಂಕ್ರಾಮಿಕವು ವೈದ್ಯಕೀಯ ಪರೀಕ್ಷೆಗಳಿಗಾಗಿ.  ವಿಶೇಷವಾಗಿ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಟೇಸ್ಟ್​​ಗಳಿಗೆ ಬಳಸುತ್ತದೆ ಎಂದು ಹೇಳಲಾಗಿದೆ.

    ದ್ವಿತೀಯ ಪಿಯು ಫಲಿತಾಂಶ: ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts