More

    ಒಂದೇ ಮನೆಯ ನಾಲ್ವರಿಗೆ ಪಾರ್ಕಿನ್ಸನ್: ಅಪರೂಪದ ರೋಗದಿಂದ ಬಡ ಕುಟುಂಬ ಕಂಗಾಲು

    ಬಂಟ್ವಾಳ: ಅಪರೂಪದ ಪಾರ್ಕಿನ್ಸನ್ ರೋಗ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಕುಟುಂಬವನ್ನು ಹೈರಾಣಾಗಿಸುತ್ತಿದೆ. ದೈಲ ಕ್ವಾರ್ಟ್ರಸ್ ನಿವಾಸಿ ವಿಶ್ವನಾಥ ಪೂಜಾರಿ(60) ಹಾಗೂ ಅವರ ಮೂವರು ಮಕ್ಕಳು ರೋಗಕ್ಕೆ ತುತ್ತಾಗಿದ್ದಾರೆ.

    ಕುಟುಂಬವನ್ನು ಪೋಷಿಸಬೇಕಾದ ಯುವಕ, ಮನೆ ಬೆಳಗಬೇಕಾದ ಯುವತಿ, ಗೃಹಿಣಿ ಎಲ್ಲರನ್ನೂ ಪಾರ್ಕಿನ್ಸನ್ ಕಾಯಿಲೆ ಬಲಹೀನರನ್ನಾಗಿಸಿದೆ. ಇದಕ್ಕೆ ಇನ್ನೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮನೆಮಂದಿ ಕಂಗಾಲಾಗಿದ್ದಾರೆ.

    15 ವರ್ಷ ಹಿಂದೆ ವಿಶ್ವನಾಥ ರೋಗಕ್ಕೆ ತುತ್ತಾದಾಗ ಅದರ ಅರಿವಿರಲಿಲ್ಲ. ಕೈ, ಕಾಲು ನಡುಕ, ದೇಹ ಕಂಪಿಸುವುದು ಹೆಚ್ಚಾಗಿ ಕೆಲಸಕ್ಕೆ ಹೋಗಲು ಅಸಾಧ್ಯವಾಗಿತ್ತು. ವೈದ್ಯರನ್ನು ಸಂಪರ್ಕಿಸಿದಾಗ ರೋಗ ಪತ್ತೆಯಾಗಿದೆ. ಇದೇ ವೇಳೆ ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಪುತ್ರ ನವೀನ್(35) ಮತ್ತು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವಿವಾಹಿತ ಕಿರಿಯ ಪುತ್ರಿಗೂ ರೋಗ ಬಂದು ಪ್ರಸ್ತುತ ಮನೆಯಲ್ಲಿದ್ದಾರೆ. ಹಿರಿಯ ಪುತ್ರಿಗೂ ರೋಗ ಲಕ್ಷಣಗಳು ಕಾಣಿಸುತ್ತಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಗೂ ರೋಗ ಬರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರಿಗೆ ದೈನಂದಿನ ಕೆಲಸ ಕಾರ್ಯ ಅಸಾಧ್ಯ. ಮಾತನಾಡುವುದೂ ಕಷ್ಟವಾಗಿದೆ.

    ಪ್ರಸ್ತುತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ವಿಶ್ವನಾಥ ಅವರ ಪತ್ನಿ ಸುಂದರಿ ಓರ್ವರ ಆದಾಯದಿಂದ ಮನೆ ಖರ್ಚು, ಚಿಕಿತ್ಸಾ ವೆಚ್ಚ ಭರಿಸಬೇಕಾಗಿದೆ. ಕಡು ಬಡವರಾದ ಅವರ ಮುಂದಿನ ಚಿಕಿತ್ಸೆಗೆ, ಜೀವನ ನಿರ್ವಹಣೆಗೆ ದಾನಿಗಳ ಸಹಕಾರದ ಅವಶ್ಯಕತೆ ಇದೆ. ಧನಸಹಾಯ ಮಾಡುವವರು ವಿಶ್ವನಾಥ ಅವರ ಪತ್ನಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
    ಸುಂದರಿ, ಖಾತೆ ನಂ. 01372210021618, ಕೆನರಾ ಬ್ಯಾಂಕ್, ಬಂಟ್ವಾಳ ಶಾಖೆ, ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ 0010137. ದೂರವಾಣಿ ಸಂಪರ್ಕ: 9008357590.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts