More

    ಭಾರತೀಯ ಇತಿಹಾಸದ ಪುನರ್​ರಚನೆಗೆ ಕರೆ ಕೊಟ್ಟ ಕೇಂದ್ರ ಗೃಹ ಸಚಿವ ಅಮಿತ್​ ಷಾ!

    ನವದೆಹಲಿ: ಭಾರತದ ಇತಿಹಾಸವನ್ನು ಮತ್ತೆ ಬರೆಯಲು ಇತಿಹಾಸಕಾರರಿಗೆ ಕರೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಇತಿಹಾಸವನ್ನು ಪುನರ್​ರಚಿಸುವವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

    ದೆಹಲಿಯಲ್ಲಿ ಅಸ್ಸಾಂ ಸರ್ಕಾರ ಏರ್ಪಡಿಸಿರುವ 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮ ವಾರ್ಷಿಕೋತ್ಸವದ ಮೂರು ದಿನಗಳ ಆಚರಣೆಯ 2ನೇ ದಿನದಂದು ಅಮಿತ್​ ಷಾ ಮಾತನಾಡಿದರು. ಅಂದಹಾಗೆ ನ.24ನ್ನು ಲಚಿತ್​ ದಿವಸ ಎಂದು ಆಚರಿಸಲಾಗುತ್ತದೆ.

    ನಾನು ಕೂಡ ಇತಿಹಾಸದ ವಿದ್ಯಾರ್ಥಿ ಮತ್ತು ನಮ್ಮ ದೇಶದ ಇತಿಹಾಸವನ್ನು ಸರಿಯಾಗಿ ಪ್ರಸ್ತುತ ಪಡಿಸಿಲ್ಲ ಎಂಬ ಮಾತುಗಳನ್ನು ಅನೇಕ ಬಾರಿ ಕೇಳಿದ್ದೇನೆ. ಅದು ನಿಜವೂ ಇರಬಹುದು. ಆದರೆ, ಈಗ ಅದನ್ನು ಸರಿಪಡಿಸಬೇಕಿದೆ ಎಂದು ಅಮಿತ್​ ಷಾ ಹೇಳಿದರು.

    ಇಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ಇತಿಹಾಸ ಸರಿಯಲ್ಲ ಎಂಬ ಕೂಗು ಇನ್ನು ಮುಂದೆ ಕೇಳದಂತೆ ಸರಿಪಡಿಸಲು ಮತ್ತು ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

    ಒಮ್ಮೆ ಇತಿಹಾಸವನ್ನು ಮರು ಬರೆದರೆ ಸಾಕು, ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡಲಾಗುತ್ತದೆ ಎಂಬ ಕಲ್ಪನೆಯು ಇರುವುದಿಲ್ಲ ಎಂದರು. ಅಲ್ಲದೆ, ವಿಜ್ಞಾನ ಭವನದಲ್ಲಿ ಹಾಜರಿರುವ ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಕೇಂದ್ರವು ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

    ಮುಂದೆ ಬನ್ನಿ, ಸಂಶೋಧನೆ ಮಾಡಿ ಮತ್ತು ಇತಿಹಾಸವನ್ನು ಪುನಃ ಬರೆಯಿರಿ. ಈ ರೀತಿಯಾಗಿ ನಾವು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಬಹುದು ಎಂದು ಅಮಿತ್​ ಷಾ ಕರೆ ನೀಡಿದರು.

    ಜನರ ಹೆಚ್ಚಿನ ಪ್ರಯೋಜನಕ್ಕಾಗಿ ಇತಿಹಾಸದ ಹಾದಿಯನ್ನು ಮರುಪರಿಶೀಲಿಸುವ ಸಮಯ ಇದೀಗ ಬಂದಿದೆ. ಮೊಘಲ್ ವಿಸ್ತರಣೆಯನ್ನು ತಡೆಯುವಲ್ಲಿ ಲಚಿತ್ ವಹಿಸಿದ ಪಾತ್ರವನ್ನು ಗುರುತಿಸಿದ ಅಮಿತ್​ ಷಾ, ಸರಿಘಾಟ್ ಯುದ್ಧದಲ್ಲಿ ಅವರ ಅನಾರೋಗ್ಯದ ಹೊರತಾಗಿಯೂ ಮೊಘಲರನ್ನು ಸೋಲಿಸಿದರು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ ಅಮಿತ್​ ಷಾ, ಈಶಾನ್ಯ ಭಾರತ ಮತ್ತು ಭಾರತದ ಉಳಿದ ಭಾಗಗಳ ನಡುವಿನ ಅಂತರವನ್ನು ಮೋದಿ ಕಡಿಮೆ ಮಾಡಿದ್ದಾರೆ. ಸರ್ಕಾರದ ಪ್ರಯತ್ನದಿಂದ ಈಶಾನ್ಯದಲ್ಲಿ ಶಾಂತಿ ನೆಲೆಸಿದೆ ಎಂದರು. (ಏಜೆನ್ಸೀಸ್​​)

    ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

    ಹಣದ ಜತೆ ಪತ್ನಿಯೂ ಇಲ್ಲ… ಪತಿಗೆ ಹೊಡೆದ 1.3 ಕೋಟಿ ಲಾಟರಿ ಹಣದೊಂದಿಗೆ ಪ್ರಿಯಕರನ ಜತೆ ಪತ್ನಿ ಪರಾರಿ!

    ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್: ಡಿ.ಕೆ. ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts