More

    ಟ್ರಂಪ್​ ದಂಪತಿ ಜತೆಯಲ್ಲೇ ಸಬರಮತಿ ಆಶ್ರಮಕ್ಕೆ ತೆರಳಿದ ಈ ಮಹಿಳೆ ಯಾರು ಗೊತ್ತಾ?

    ನವದೆಹಲಿ: ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಹಮದಾಬಾದ್​ನ ಸರ್ದಾರ್​ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.​ ಈ ವೇಳೆ ಟ್ರಂಪ್​ ದಂಪತಿ ಜತೆಯಲ್ಲೇ ಬರುತ್ತಿದ್ದ ಮಹಿಳೆಯನ್ನು ಫೋಟೋಗ್ರಾಫರ್ ಸೆರೆಹಿಡಿದಿದ್ದರು.

    ಆ ಮಹಿಳೆ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ ಟ್ರಂಪ್​ ದಂಪತಿ ಜತೆಯಲ್ಲೇ ತೆರಳಿದರು. ಹೀಗಾಗಿ ಆ ಮಹಿಳೆ ಯಾರಿರಬಹುದೆಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು, ಅದಕ್ಕೆ ಉತ್ತರ ಮುಂದಿದೆ ಒಮ್ಮೆ ನೋಡಿ…

    ಅಂದಹಾಗೆ ಮಹಿಳೆಯ ಹೆಸರು ಗುರ್ದೀಪ್​​ ಚಾವ್ಲಾ. ಈಕೆ ಇಂಡಿಯನ್​-ಅಮೆರಿಕನ್​ ಮಹಿಳೆ. ಡೊನಾಲ್ಡ್​ ಟ್ರಂಪ್​ ಭಾರತ ಭೇಟಿ ಹಿನ್ನೆಲೆಯಲ್ಲಿ ದುಭಾಷಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 27 ವರ್ಷಗಳಿಂದ ದುಭಾಷಿಯಾಗಿ ಕೆಲಸ ಮಾಡುತ್ತಿದ್ದಾರೆ. 1990ರಲ್ಲಿ 21 ವರ್ಷ ವಯಸ್ಸಾಗಿದ್ದಾಗ ಭಾರತದ ಸಂಸತ್ತಿನಲ್ಲಿ ಮೊದಲು ಕೆಲಸ ಆರಂಭಿಸಿದರು.

    ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಅವರು 2015ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾಗಲೂ ಇವರು ದುಭಾಷಿಯಾಗಿ ಕಾರ್ಯನಿರ್ವಹಿಸಿದ್ದರು. ಯುಎಸ್​/ಕೆನಡಾ ಮತ್ತು ಭಾರತ ನಡುವೆ ಉನ್ನತ ಮಟ್ಟದ ರಾಜಕೀಯ ಸಭೆಗಳು ನಡೆದಾಗಲೆಲ್ಲ ಇವರ ಉಪಸ್ಥಿತಿ ಇದ್ದೇ ಇರುತ್ತದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದಾಗ ಗುರ್ದೀಪ್​​ ಚಾವ್ಲಾ ಅವರು ವ್ಯಾಖ್ಯಾನ ಮಾಡಿದ್ದರು. 2014ರಲ್ಲಿ ಮ್ಯಾಡಿಸನ್​ ಸ್ಕ್ವೇರ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲೂ ಪ್ರಧಾನಿ ಮೋದಿ ಜತೆಯಲ್ಲಿದ್ದರು. ಬಳಿಕ ಯುಎಸ್​ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮ ಜತೆ ಮಾತನಾಡಲು ಮೋದಿ ವಾಷಿಂಗ್ಟನ್​ಗೆ ತೆರಳಿದಾಗಲೂ ಅವರೊಂದಿಗೆ ಗುರ್ದೀಪ್​​ ಚಾವ್ಲಾ ಕೂಡ ಹೋಗಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts