More

    ವಿಶ್ವ ಕ್ರಿಕೆಟ್​ನ ಬೆಸ್ಟ್​ ಕ್ಯಾಪ್ಟನ್​ ಯಾರು? ಯಾರೂ ನಿರೀಕ್ಷೆ ಮಾಡಿರದ ಉತ್ತರ ಕೊಟ್ಟ ಶಮಿ!

    ನವದೆಹಲಿ: ಕ್ರಿಕೆಟ್​ ಜಗತ್ತಿನಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆಗೆ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್ ಮೊಹಮ್ಮದ್​ ಶಮಿ ನೀಡಿರುವ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.​

    ಟೀಮ್​ ಇಂಡಿಯಾದಲ್ಲಿ ಈವರೆಗೂ ಬೆಸ್ಟ್​ ಕ್ಯಾಪ್ಟನ್​ ಅಂದರೆ ಎಂ.ಎಸ್​. ಧೋನಿ ಎಂಬುದು ಎಲ್ಲರಿಗೂ ತಿಳಿದಿದೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಮತ್ತು 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

    ಧೋನಿ ಅವರು 2020ರಲ್ಲಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಆಗಿರುವ ಧೋನಿ, ಮುಂಬರುವ ಐಪಿಎಲ್​ ಸೀಸನ್​ಗಾಗಿ ಅಭ್ಯಾಸ ಮಾಡುತ್ತಿದ್ದಾರೆ. ಇದರ ನಡುವೆ ವಿಶ್ವ ಕ್ರಿಕೆಟ್​ನ ಉತ್ತಮ ಕ್ಯಾಪ್ಟನ್​ ಯಾರು ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಶಮಿ ಅವರಿಗೆ ಕೇಳಲಾಯಿತು.

    ಶಮಿ ಉತ್ತರ ಏನು?
    ಈ ಪ್ರಶ್ನೆಗೆ ಉತ್ತರ ನೀಡುವುದು ನಿಜಕ್ಕೂ ಕಷ್ಟಕರ. ಉತ್ತಮ ನಾಯಕ ಯಾರು ಎಂದು ಇನ್ನೊಬ್ಬರ ಜತೆ ಹೋಲಿಕೆ ಮಾಡುವುದು ತಪ್ಪು ಎಂದು ನನಗನಿಸುತ್ತದೆ. ಪ್ರತಿಯೊಬ್ಬರಲ್ಲೂ ಅವರದೇಯಾದ ವಿಶೇಷ ಗುಣ ಹಾಗೂ ಪ್ರತಿಭೆ ಇದ್ದೇ ಇರುತ್ತದೆ. ಉತ್ತಮ ಅಥವಾ ಸಾಧಾರಣ ಎಂದು ಅಳೆಯಲು ಆಗದು ಎಂದು ಶಮಿ ಉತ್ತರಿಸಿದ್ದಾರೆ.

    ಮಾತು ಮುಂದುವರಿಸಿದ ಶಮಿ, ವಿಶ್ವದಲ್ಲೇ ಯಶಸ್ವಿ ನಾಯಕ ಯಾರು ಎಂದು ಕೇಳಿದರೆ, ಧೋನಿ ಎಂದು ಹೇಳುತ್ತೇನೆ. ಧೋನಿ ಅವರ ರೀತಿ ಯಾರೊಬ್ಬರು ಸಹ ಗೆಲುವು ಸಾಧಿಸಲಿಲ್ಲ. ತಮ್ಮ ನಾಯಕತ್ವದ ಅವಧಿಯಲ್ಲಿ ಗೆಲುವನ್ನೇ ಹೆಚ್ಚಾಗಿ ಕಂಡಿದ್ದಾರೆ. ಈ ಮೂಲಕ ಉತ್ತಮ ನಾಯಕ ಎನಿಸಿಕೊಂಡಿದ್ದಾರೆ ಎಂದು ಶಮಿ ಹೇಳಿದ್ದಾರೆ. ಶಮಿಯ ಉತ್ತರಕ್ಕೆ ನೆಟ್ಟಿಗರು ಬಹುಪರಾಕ್​ ಹಾಕಿದ್ದಾರೆ. ಇದು ಪ್ರಬುದ್ಧತೆಯ ಉತ್ತರ ಎಂದು ಕೊಂಡಾಡಿದ್ದಾರೆ.

    Shami and Dhoni

    ಧೋನಿ ಬಗ್ಗೆ ಹೇಳುವುದಾದರೆ, 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ​ ಅವರ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅವರ 7ನೇ ನಂಬರಿನ ಜರ್ಸಿಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಬಿಸಿಸಿಐ, ಧೋನಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿದೆ. ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ಕ್ರೀಡಾ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್​ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಮತ್ತು 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

    ತಂಡದ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್​ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್​ರೇಟ್​ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್​ ಕಲೆಹಾಕಿದ್ದಾರೆ.

    ವಿಕೆಟ್​ಕೀಪರ್​ ಆಗಿ ತಮ್ಮ ವೃತ್ತಿಬದುಕಿನಲ್ಲಿ​ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್​ ಹಾಗೂ ರನೌಟ್​ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್​ ಕೀಪರ್​ಗಳ ಸಾಲಿನಲ್ಲಿ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಒಟ್ಟು 294 ಬಾರಿ ವಿಕೆಟ್​ಗಳನ್ನು ತೆಗೆದಿದ್ದಾರೆ. (ಏಜೆನ್ಸೀಸ್​)

    ನಿವೃತ್ತಿ ನಂತ್ರ ಧೋನಿ ಪ್ಲ್ಯಾನ್​ ಏನು? ಕುಟುಂಬಕ್ಕಿಂತ ಮಾಹಿಯ ಮೊದಲ ಆದ್ಯತೆ ಕೇಳಿ ಸಲಾಂ​ ಎಂದ ನೆಟ್ಟಿಗರು

    ಧೋನಿಯ ಜರ್ಸಿ ನಂ.7 ನಿವೃತ್ತಿ! ಸಚಿನ್ ಬಳಿಕ ವಿಶೇಷ ಗೌರವ ಪಡೆದ ಎರಡನೇ ಆಟಗಾರ ಮಾಹಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts