More

    ಬಿಳಿ ಕೂದಲನ್ನು ಕಪ್ಪಾಗಿಸಲು ಸುಲಭವಾದ ಮನೆಮದ್ದು, ಏನೆಲ್ಲಾ ಮಾಡಬೇಕು ನೋಡಿ..!

    ನೈಸರ್ಗಿಕವಾಗಿ ಉದ್ದವಾದ, ಕಪ್ಪಾದ ಕೂದಲನ್ನು ಪಡೆಯಲು ಬಹಳ ನಿಮಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳು ಸಹಕಾರಿ ಆಗಿವೆ.ಕೂದಲು ಬೆಳ್ಳಗಾಗಲು ಹೆಚ್ಚುತ್ತಿರುವ ಮಾಲಿನ್ಯ, ಒತ್ತಡ, ರೋಗಗಳು, ತಪ್ಪು ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿರಬಹುದು. ಹಾಗಿದ್ರೆ ನೈಸರ್ಗಿಕವಾದ ಕಪ್ಪು ಕೂದಲು ಪಡೆಯೋಕೆ ಇರುವ ಮನೆಮದ್ದುಗಳಿವೆ ಏನದು ನೋಡೋಣ


    ಆಲೂಗಡ್ಡೆ – ಕೂದಲನ್ನು ಕಪ್ಪು ಮಾಡಲು ಆಲೂಗಡ್ಡೆ ಬಳಸಿಕೊಂಡು ನೀವು ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಬಹುದು. ನೀವು ಆಲೂಗಡ್ಡೆಯನ್ನು ಚೆನ್ನಾಗಿ ಕುದಿಸಿ, ಪಿಷ್ಠದ ಸೊಲ್ಯೂಷನ್ ಉತ್ಪತ್ತಿಯಾಗುವಂತೆ ಮಾಡಬೇಕು. ಇದರ ಬಳಿಕ ಸೋಸಿಕೊಂಡ ದ್ರವನ್ನು ಪಡೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದರ ಬಳಿಕ ನೀರಿನಿಂದ ತೊಳೆಯಿರಿ.


    ಜ್ಬ್ಲ್ಯಾಕ್ ಟೀ ಬ್ಲ್ಯಾಕ್ ಟೀಯನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗುವುದು. ಇದು ಕೂದಲು ದಪ್ಪವಾಗಿ ಬೆಳೆದು ಕಾಂತಿಯುತವಾಗುವಂತೆ ಮಾಡುವುದು. ಬ್ಲ್ಯಾಕ್ ಟೀ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿ ಮತ್ತು ಇದರ ಬಳಿಕ ಶಾಂಪೂ ಬಳಸಬೇಡಿ.


    ಈರುಳ್ಳಿ ಬಿಳಿ ಕೂದಲು ಹೋಗಲಾಡಿಸುತ್ತದೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ಅದನ್ನು ಹಾಗೆಯೇ ಬಿಡಿ. ಒಂದು ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.


    ಶುಂಠಿ ಮೊದಲು, ಶುಂಠಿಯನ್ನು ತುರಿಯಿರಿ. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ.


    ತೆಂಗಿನೆಣ್ಣೆ ಮತ್ತು ನಿಂಬೆ ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts