More

    ಯಾವ ದೇಶವು ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

    ನವದೆಹಲಿ: ಹೊಸ ವರ್ಷವು ಒಂದು ವರ್ಷದ ಅಂತ್ಯ ಮತ್ತು ಇನ್ನೊಂದು ವರ್ಷದ ಆರಂಭವನ್ನು ಸೂಚಿಸುತ್ತದೆ. ಹೊಸ ವರ್ಷದ ಪ್ರಾರಂಭದೊಂದಿಗೆ, ಜನರು ತಮ್ಮ ಜೀವನದಲ್ಲಿ ಹೊಸ ಬದಲಾವಣೆಯಾಗಿ ತಿರುಗಿಸಲು ಪ್ರಯತ್ನಿಸುತ್ತಾರೆ. ಇದು ಬಹಳ ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲ್ಪಡುವ ಸಂದರ್ಭವಾಗಿದೆ.  

    ಪ್ರಪಂಚದಾದ್ಯಂತ ಎಲ್ಲರೂ 2024 ಅನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಹೊಸ ವರ್ಷಕ್ಕೆ ಪ್ರವೇಶಿಸುವ ಆ ಅದ್ಭುತ ಕ್ಷಣಗಳನ್ನು ಆಚರಿಸಲು ತಯಾರಾಗುತ್ತಿದೆ. ಎಲ್ಲರಿಗೂ ಒಂದೇ ದಿನದಲ್ಲಿ ಹೊಸ ವರ್ಷ ಪ್ರಾರಂಭವಾಗುತ್ತದೆ. ಆದರೆ ಕೆಲವು ಗಂಟೆಗಳ ಅಂತರ. ಯಾವ ದೇಶವು ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಬನ್ನಿ ಈ ಕುರಿತಾಗಿ ತಿಳಿದುಕೊಳ್ಳೋಣ..

    ಪ್ರಪಂಚದ ಅನೇಕ ದೇಶಗಳು ಅವರ ಸಂಪ್ರದಾಯಗಳನ್ನು ಅನುಸರಿಸುತ್ತವೆ. ಗಡಿಯಾರ 12 ಗಂಟೆ ಹೊಡೆದಾಗ, ವರ್ಷ ಮತ್ತು ದಿನಾಂಕ ಬದಲಾದಾಗ, ಆಚರಣೆಗಳು ಪ್ರಾರಂಭವಾಗುತ್ತವೆ.ಹೊಸ ವರ್ಷದ ಆಚರಣೆಗಳು ಪ್ರಪಂಚದ ದೇಶಗಳಲ್ಲಿ ಸಮಯಕ್ಕೆ ಅನುಗುಣವಾಗಿ ಸ್ವಲ್ಪ ಹಿಂದಕ್ಕೆ ಮತ್ತು ಮುಂದಕ್ಕೆ ಪ್ರಾರಂಭವಾಗುತ್ತವೆ. ಯಾವ ದೇಶವು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? 

    ಯಾವ ದೇಶವು ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ?: ಪೆಸಿಫಿಕ್ ದ್ವೀಪಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾಟಿಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತವೆ. ಈ ದೇಶಗಳಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3.30 ಕ್ಕೆ ಪ್ರಾರಂಭವಾಗುತ್ತದೆ. ಡಿ.31ರಂದು ಬೆಳಗ್ಗೆ 10ಗಂಟೆಗೆ ಈ ದೇಶಗಳು ಹೊಸ ವರ್ಷವನ್ನು ಸಂಭ್ರಮಿಸುತ್ತವೆ.ಇದೊಂದು ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರವಾಗಿದ್ದು, ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಮೊದಲ ದೇಶಗಳಾಗಿವೆ ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತವೆ.

     ಕೊನೆಯಲ್ಲಿ ನ್ಯೂ ಇಯರ್‌ ಆಚರಿಸುತವ ದೇಶ: ಪ್ರಪಂಚದಾದ್ಯಂತ ಹೊಸವರ್ಷ ಆಚರಣೆ ಮಾಡಿದ ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮೀಪವಿರುವ ಹೌಲ್ಯಾಂಡ್ ಮತ್ತು ಬೇಕರ್ ದ್ವೀಪದಲ್ಲಿರುವ ಜನರು ಹೊಸ ವರ್ಷವನ್ನು ಆಚರಿಸುತ್ತಾರೆ.ಇಲ್ಲಿ ಹೊಸ ವರ್ಷವನ್ನು ಅಂತಿಮವಾಗಿ ಸ್ವಾಗತಿಸಲಾಗಿದೆ. ಹೀಗಾಗಿ, ಪ್ರಪಂಚದಾದ್ಯಂತದ ಕೆಲವು ದೇಶಗಳಲ್ಲಿ, ಹೊಸ ವರ್ಷದ ಆಚರಣೆಗಳು ಸಮಯದ ವ್ಯತ್ಯಾಸದೊಂದಿಗೆ ಪ್ರಾರಂಭವಾಗುತ್ತವೆ.ವಾಸ್ತವವಾಗಿ, ಇದೊಂದು ಜನವಸತಿಯಿಲ್ಲದ ದ್ವೀಪವಾಗಿದ್ದು, ಭೂಮಿಯ ಮೇಲೆ ನವೀನ ವರ್ಷವನ್ನು ಆಚರಿಸುವ ಕೊನೆಯ ಸ್ಥಳವಾಗಿದೆ ಎನ್ನಲಾಗಿದೆ. ಅವರು ಜನವರಿ 1 ರಂದು  ಮಧ್ಯಾಹ್ನ 12 ಗಂಟೆಗೆ ಅಥವಾ 5:30 IST ಕ್ಕೆ ಹೊಸ ವರ್ಷವು ಪ್ರಾರಂಭವಾಗುತ್ತದೆ. ಕೆಲವು ದೇಶಗಳಲ್ಲಿ ಡಿ.31 ಮಧ್ಯರಾತ್ರಿ 12 ಗಂಟೆಯಾಗಿದ್ದರೆ, ಭಾರತದಲ್ಲಿ ಜನವರಿ 1 ಆಗಿರುತ್ತದೆ. ಹೀಗಾಗಿ ಭಾರತ ಸಮಯಕ್ಕೆ ಹೋಲಿಸಿದರೆ ಕೊನಯದಾಗಿ ಸೆಲೆಬ್ರೆಟ್​​ ಮಾಡುತ್ತವೆ.

    ಭಾರತದಲ್ಲಿ ಡಿ.31ರಂದು ಸಾಯಂಕಾಲ 3:45 ಸಮಯವಾಗಿದ್ದಾಗ, ನ್ಯೂಜಿಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಹೀಗಾಗಿ ನ್ಯೂಜಿಲೆಂಡ್‌ನಲ್ಲಿ ಭಾರತೀಯ ಕಾಲಮಾನದಂತೆ ಡಿ.31ರ ಸಾಯಂಕಾಲ 3:45ಕ್ಕೆ ನ್ಯೂ ಇಯರ್‌ ಆಚರಿಸಲಾಗುತ್ತದೆ. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 6:30ಕ್ಕೆ ಹೊಸ ವರ್ಷ ಸಂಭ್ರಮಿಸಲಾಗುತ್ತದೆ. ಜಪಾನ್‌, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ನ್ಯೂ ಇಯರ್‌ ಸಂಭ್ರಮಿಸಲಿದ್ದಾರೆ.

    ಚೀನಾ, ಫಿಲಿಪಿನ್ಸ್‌, ಸಿಂಗಾಪುರದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 9:30ಕ್ಕೆ ಸಂಭ್ರಮಾಚರಣೆ ಮಾಡಲಾಗುವುದು. ಬಾಂಗ್ಲದೇಶದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ, ನೇಪಾಳದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 11:45ಕ್ಕೆ, ಪಾಕಿಸ್ತಾನದಲ್ಲಿ ಭಾರತೀಯ ಕಾಲಮಾನದಂತೆ ಮಧ್ಯರಾತ್ರಿ 12:30ಕ್ಕೆ ನ್ಯೂ ಇಯರ್‌ ಆಚರಿಸಲಾಗುವುದು.

    ಭಾರತ ಮತ್ತು ಶ್ರೀಲಂಕಾ ದೇಶಗಳ ಸಮಯ ಒಂದೇ ಆಗುರುತ್ತೆ. ಹೀಗಾಗಿ ಈ ಎರಡು ದೇಶಗಳಲ್ಲಿ ಒಂದೇ ಸಮಯಕ್ಕೆ ನ್ಯೂ ಇಯರ್‌ ಸಂಭ್ರಮಿಸಲಾಗುವುದು. ಕೆಲವು ದೇಶಗಳು ವರ್ಷದ ಕೊನೆಯಲ್ಲಿ ಸಂಭ್ರಮಾಚರಣೆ ಮಾಡುವುದಿಲ್ಲ. ಬದಲಾಗಿ ತಮ್ಮ ದೇಶದ ಸಂಪ್ರದಾಯ, ಹಬ್ಬಗಳಿಗೆ ಅನುಸಾರವಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಉದಾಹರಣೆಗೆ ಭಾರತಕ್ಕೆ ಹೊಸ ವರ್ಷವೆಂದರೆ ಅದು ಯುಗಾದಿ ಸಂದರ್ಭ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts