More

    ಮಹಿಳೆ ಆರ್ಥಿಕ ಸಬಲೆಯಾಗಲಿ

    ರಾಯಬಾಗ: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಚಿಕ್ಕೋಡಿ ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ ಹೇಳಿದರು.

    ತಾಲೂಕಿನ ನಸಲಾಪುರ ಗ್ರಾಮದ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಾಯಬಾಗ, ಸತ್ಯ ನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನಸಲಾಪುರ ವಲಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕಾಡಾ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿದರು.

    ಬಾವನಸೌಂದತ್ತಿ ಓಂಕಾರಾಶ್ರಮದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಾರ್ವತಿ ಕುಂಬಾರ, ಚಿಕ್ಕೋಡಿ ಜಿಲ್ಲಾ ಶ್ರೀಕ್ಷೇತ್ರ ಧ.ಗ್ರಾ.ಯೋ.ನಿರ್ದೇಶಕ ವಿಠ್ಠಲ ಸಾಲಿಯಾನ, ತಾತ್ಯಾಸಾಬ ಕಾಟೆ, ಬಾಹುಸಾಬ ಪಾಟೀಲ, ತಾಲೂಕು ಯೋಜನಾಧಿಕಾರಿ ಸಚಿನಕುಮಾರ ಬಿ., ರಾಮಚಂದ್ರ ಕಾಟೆ, ಕಲ್ಪನಾ ಸಮಾಜೆ, ಪ್ರಕಾಶ ಮಹಾಜನ, ಅನಿಲ ಕೆಂಗಾಲೆ, ಜಿನೇಶ್ವರ ಮಗದುಮ್ಮ, ನೇಮಿನಾಥ ಖೊಂಬಾರೆ, ವಿಕಾಸ ಪಾಟೀಲ, ನಿಂಗಪ್ಪ ಕುಂಬಾರ, ಸಾತಪ್ಪ ತೋರಸೆ, ಚೇತನ ಕಾಟೆ, ಆನಂದ ಸಮಾಜೆ, ಮಹಾತೇಶ ಹಿರೇಮಠ, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts