More

    ಪ್ರತಿಭಟನೆ ನಡೆಸಿ ಬಸ್​ಗಳಿಗೆ ಬೆಂಕಿ ಹಚ್ಚಿದರೆ, ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಾರೆ?; ಸಿಎಎ ಪ್ರತಿಭಟನೆ ವಿರುದ್ಧ ಸದ್ಗುರು ಕಿಡಿ

    ದಾವೋಸ್​: ಎಲ್ಲಿ ಪ್ರತಿಭಟನೆ ನಡೆಸಿ ಬಸ್​ಗಳಿಗೆ ಬೆಂಕಿ ಹಚ್ಚುತ್ತಾರೋ ಅಲ್ಲಿ ಹೂಡಿಕೆ ಮಾಡಲು ಯಾರೂ ಮುಂದೆ ಬರಲಾರರು ಎಂದು ಸದ್ಗುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಕಿಡಿಕಾರಿರುವ ಸದ್ಗುರು, ಈ ತೆರನಾದ ಪ್ರತಿಭಟನೆಗಳು ವಿದೇಶಿಗರ ದೃಷ್ಟಿಯಲ್ಲಿ ಭಾರತದ ಇಮೇಜನ್ನು ಹಾಳುಗೆಡುವುತ್ತವೆ. ಇದರಿಂದ ವಿದೇಶಿಗರು ದೇಶದಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಾರೆ ಎಂದಿದ್ದಾರೆ.

    ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಿರುವ ಅವರು, ಇಂತಹ ಬಸ್​ ಸುಡುವ ಅವಘಡಗಳು ದೇಶದ ಕೆಲವೆಡೆ ಮಾತ್ರ ನಡೆದಿವೆ. ಆದರೆ ಇವು ಸಣ್ಣ ಘಟನೆಗಳು ಎಂದು ಪರಿಗಣಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    400 ಲಕ್ಷ ಮಂದಿ ಭಾರತದಲ್ಲಿ ಈಗಲೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಿ ಬಂಡವಾಳವಿಲ್ಲದೆ ನಮಗೆ ಬೇಕಾದ್ದನ್ನು ನಾವು ಸಾಧಿಸಲು ಸಾಧ್ಯವಿಲ್ಲ. ಭಾರತೀಯರಾಗಿ ನಾವು ಇಲ್ಲಿ ಬಂಡವಾಳ ಹೂಡುವುದು ಒಳ್ಳೆಯದು ಎಂದು ಅವರಿಗೆ ಸ್ಪಷ್ಟಪಡಿಸಬೇಕು ಎಂದರು.

    ಭಾರತದ ಪ್ರಜಾಪ್ರಭುತ್ವ ಸೂಚ್ಯಂಕ 2019ರಲ್ಲಿ 10 ಸ್ಥಾನಗಳ ಕುಸಿದಿರುವ ಹಿನ್ನೆಲೆಯಲ್ಲಿ ದಾವೋಸ್‌ನ ಸಮ್ಮೇಳನದಲ್ಲಿ ಆತಂಕ ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ಸದ್ಗುರು ಈ ಮಾತುಗಳನ್ನು ಹೇಳಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts