ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

blank

ಮುಂಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕರಾಗಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ತಂದುಕೊಟ್ಟ ಅಜಿಂಕ್ಯ ರಹಾನೆಗೆ ಗುರುವಾರ ಮನೆಗೆ ಮರಳಿದಾಗ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ರಹಾನೆ ಅವರಿಗಾಗಿಯೇ ವಿಶೇಷವಾದ ಶಾಕಾಹಾರದ ಮತ್ತು ಅವರಿಗೆ ಇಷ್ಟವಾದ ಚಾಕೋಲೇಟ್ ಕೇಕ್ ಸಿದ್ಧಪಡಿಸಲಾಗಿತ್ತು. ಆದರೆ ಅಜಿಂಕ್ಯ ರಹಾನೆ ಇದನ್ನು ಕತ್ತರಿಸಲು ನಯವಾಗಿಯೇ ನಿರಾಕರಿಸಿದ್ದರು. ಅದಕ್ಕೆ ಕಾರಣವೇನೆಂದು ಗೊತ್ತೇ?

blank

ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಕೇಕ್ ತಯಾರಕರು, ಕೇಕ್ ಮೇಲೆ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂ ರೂಪವನ್ನು ಇಡಲಾಗಿತ್ತು. ಇದರಿಂದಾಗಿ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದರು. ಅಕ್ಕಪಕ್ಕದ ಮನೆಯವರು ಒಟ್ಟಾಗಿ ತರಿಸಿಕೊಂಡಿದ್ದ ವಿಶೇಷ ಕೇಕ್‌ಅನ್ನು ಅವರ ಆಹ್ವಾನದಂತೆ ಕತ್ತರಿಸಲು ರಹಾನೆ ಮುಂದಾಗಿದ್ದರು. ಆದರೆ ಅದರ ಮೇಲೆ ಕಾಂಗರೂ ರೂಪ ಇರುವುದು ಕಂಡ ಕೂಡಲೆ ಕೇಕ್ ಕತ್ತರಿಸಲು ನಿರಾಕರಿಸಿದ್ದರು. ಕೇಕ್ ಕತ್ತರಿಸುವ ಕ್ಷಣವನ್ನು ಸೆರೆಹಿಡಿಯಲು ಕಾದಿದ್ದ ಮರಾಠಿ ಚಾನಲ್ ಯೋಜನೆಯನ್ನೂ ರಹಾನೆ ವಿಫಲಗೊಳಿಸಿದರು.

ಇದನ್ನೂ ಓದಿ: ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

ರಹಾನೆ ಕಾಂಗರೂ ರೂಪದ ಕೇಕ್ ಕತ್ತರಿಸಲು ನಿರಾಕರಿಸಿದ್ದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದನೆಯದಾಗಿ, ಕಾಂಗರೂ ಕೇಕ್ ಕತ್ತರಿಸಿದರೆ ಪ್ರಾಣಿ ಹಿಂಸೆಯನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಮತ್ತೊಂದೆಡೆ, ಕಾಂಗರೂ ಎಂದೇ ಕರೆಸಲ್ಪಡುವ ಆಸ್ಟ್ರೇಲಿಯಾ ತಂಡಕ್ಕೂ ಇದರಿಂದ ಅಗೌರವ ಸೂಚಿಸಿದಂತಾಗುತ್ತದೆ ಎಂಬುದಾಗಿದೆ.

ರಹಾನೆ ಕಾಂಗರೂ ರೂಪದ ಕೇಕ್ ಕತ್ತರಿಸದಿರುವ ಮೂಲಕ ಮೈದಾನದ ಹೊರಗೂ ಅಭಿಮಾನಿಗಳ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ನಡೆಯನ್ನು ಪ್ರಶಂಸಿಸಲಾಗುತ್ತಿದೆ. ಅಮೋಘ ಗೆಲುವಿನ ಬಳಿಕವೂ ರಹಾನೆ ಎದುರಾಳಿ ತಂಡಕ್ಕೆ ತೋರಿರುವ ಗೌರವ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

https://twitter.com/SachinP_IRTS/status/1352250782897192963

VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ..

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank