More

    ಸಿನಿಮಾ ವಿಮರ್ಶೆ: ವ್ಹೀಲ್​ಚೇರ್​ ರೋಮಿಯೋ- ಮಗ ಹೀರೋ, ಅಪ್ಪ ಸೂಪರ್ ​ಹೀರೋ …

    |ಹರ್ಷವರ್ಧನ್​ ಬ್ಯಾಡನೂರು

    ಚಿತ್ರ : ವ್ಹೀಲ್​ಚೇರ್​ ರೋಮಿಯೋ
    ನಿರ್ದೇಶನ : ಜಿ. ನಟರಾಜ್​
    ನಿರ್ಮಾಣ : ಟಿ. ವೆಂಕಟಾಚಲಯ್ಯ
    ತಾರಾಗಣ : ರಾಮ್​ ಚೇತನ್​, ಮಯೂರಿ ಕ್ಯಾಟರಿ, ರಂಗಾಯಣ ರು, ಸುಚೇಂದ್ರ ಪ್ರಸಾದ್​, ಗಿರೀಶ್​ ಶಿವಣ್ಣ, ತಬಲಾ ನಾಣಿ ಮತ್ತು ಮುಂತಾದವರು
    ಸ್ಟಾರ್​: 3.5

    ಆತ ಉಲ್ಲಾಸ್​ (ರಾಮ್​ ಚೇತನ್​). ಒಂದು ವಿಚಿತ್ರ ಮತ್ತು ಅಪರೂಪದ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಬಾಯಿ, ನಾಲಗೆ, ಕಣ್ಣು ಬಿಟ್ಟರೆ ಅವನ ದೇಹದ ಇನ್ಯಾವ ಅಂಗವೂ ಕೆಲಸ ಮಾಡುವುದಿಲ್ಲ. ಅವನಿಗೆ ಅಮ್ಮ ಇಲ್ಲ. ಅಪ್ಪನೇ (ಸುಚೇಂದ್ರ ಪ್ರಸಾದ್​) ಎಲ್ಲ. ಮಗನಿಗೂ ಅಪ್ಪನೇ ಪ್ರಪಂಚ. ಅಪ್ಪ&ಮಗನ ಬಂಧ ಎಷ್ಟರ ಮಟ್ಟಿಗೆ ಅಂದರೆ ಮಗನಿಗೆ ಕೆಟ್ಟ ಕುತೂಹಲ ತಣಿಸಲು ವೇಶ್ಯೆ ಸಂಗ ಮಾಡಲು ತಾನೇ ಮಾಂಸದ ಅಡ್ಡೆಗೆ ಕರೆದುಕೊಂಡು ಹೋಗುತ್ತಾನೆ. ಜಾಕ್​ ಮಾಮ (ರಂಗಾಯಣ ರು) ಮೂಲಕ ವೇಶ್ಯೆ ಡಿಂಪಲ್​ (ಮಯೂರಿ) ಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲಿ ಡಿಂಪಲ್​ ಕರಾಳ ಇತಿಹಾಸವೂ ತೆರೆದುಕೊಳ್ಳುತ್ತದೆ. ಉಲ್ಲಾಸ್​ ಪ್ರೀತಿಯನ್ನು ಡಿಂಪಲ್​ ಒಪು$್ಪತ್ತಾಳಾ? ಒಪ್ಪಿದರೂ ಪ್ರಸಾದ್​ ಇಬ್ಬರನ್ನೂ ಅಪು$್ಪತ್ತಾರಾ? ಅವರಿಬ್ಬರೂ ಒಂದಾಗುತ್ತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಸಿನಿಮಾ ನೋಡಿ…

    ಸಿನಿಮಾ ತೆರೆದುಕೊಳ್ಳುವ ಮೊದಲ ಸೀನ್​ನಿಂದಲೇ ಅದ್ಭುತ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದೆ “ವ್ಹೀಲ್​ಚೇರ್​ ರೋಮಿಯೋ’ ಚಿತ್ರತಂಡ. ಈ ಚಿತ್ರದ ಪಂಚಿಂಗ್​ ಸಂಭಾಷಣೆಗಳನ್ನು ಹರಿದು ಹಂಚಿದರೆ ಕಡಿಮೆ ಎಂದರೂ ಇನ್ನೂ 10 ಸಿನಿಮಾಗಳಿಗೆ ಬಳಸಬಹುದಿತ್ತೇನೋ? ಸಂಭಾಷಣೆಗಳು ಒಂದು ಕಡೆ ಖುಷಿಕೊಡುವುದರ ಜತೆಗೆ, ಇದು ರಾಧಾಕೃಷ್ಣ ಕಶ್ಯಪ್​ ಅವರ ಸಂಭಾಷಣೆಯ ಕೊನೆಯ ಸಿನಿಮಾ ಎಂಬ ವಿಷಯ ಬೇಸರ ತರಿಸುತ್ತದೆ.

    ಮೊದರ್ಲಧದವರೆಗೂ ಅದೇ ವೇಗ, ನಗು, ಒನ್​ಲೈನರ್​ಗಳ ಕಚಗುಳಿ ಪ್ರೇಕ್ಷಕರೊಂದಿಗೆ ಹಿಡಿದಿಡುತ್ತದೆ. ದ್ವೀತಿಯಾರ್ಧ ನಿಧಾನ ಎಂದನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಹೀರೋಗಳು ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಆದರೆ,ಈ ವ್ಹೀಲ್​ಚೇರ್​ಗೆ ನಾಲ್ಕು ಚಕ್ರಗಳು, ಅಲ್ಲಲ್ಲ ಹೀರೋಗಳು. ದಿ. ರಾಧಾಕೃಷ್ಣ ಕಶ್ಯಪ್​ ಅವರ ಸಂಭಾಷಣೆ ಒಂದು ಚಕ್ರವಾದರೆ, ಸುಚೇಂದ್ರ ಪ್ರಸಾದ್​ ಮತ್ತು ರಂಗಾಯಣ ರು ಜುಗಲ್​ಬಂದಿ ಅಭಿನಯ ಇನ್ನೊಂದು ಚಕ್ರ. ನಿರ್ದೇಶಕ ನಟರಾಜ್​ ಚಾಕಚಕ್ಯತೆ ಮತ್ತು ನಾಯಕ&ನಾಯಕಿಯ ವಿಭಿನ್ನ ಪಾತ್ರಗಳು ಇನ್ನೆರಡು ಚಕ್ರಗಳಾಗಿವೆ. ಈ ನಾಲ್ಕು ಚಕ್ರಗಳಿಂದ ಚಿತ್ರ ವಿಭಿನ್ನವಾಗಿ ಎದ್ದು ನಿಲ್ಲುತ್ತದೆ.

    ಹೀರೋಯಿಸಂ, ಬಿಲ್ಡಪ್​ಗಳ ಮಧ್ಯೆ ಕಥೆ ಕೇಂದ್ರಿತ ಸಿನಿಮಾಗಳೂ ಬರುತ್ತಿರುತ್ತವೆ ಎಂಬುದಕ್ಕೆ ಒಳ್ಳೆಯ ಉದಾಹರಣೆ “ವ್ಹೀಲ್​ಚೇರ್​ ರೋಮಿಯೊ’.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts