More

    ವಾಟ್ಸಪ್ 50 ನಿಮಿಷ ಸ್ಥಗಿತಗೊಂಡಿತ್ತು, ಆದ್ರೆ ಬಂಗಾಳದಲ್ಲಿ 50 ವರ್ಷ ಅಭಿವೃದ್ದಿ ಸ್ಥಗಿತಗೊಂಡಿದೆ; ದೀದಿಗೆ ತಿವಿದ ಮೋದಿ

    ಖರಗ್​ಪುರ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಯುಕ್ತ ಶನಿವಾರ ಖರಗ್​ಪುರದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ತಮ್ಮ ಹರಿತ ಮಾತುಗಳಿಂದ ವಾಗ್ದಾಳಿ ನಡೆಸಿದ್ದಾರೆ.

    ನಿನ್ನೆ ರಾತ್ರಿ ಸುಮಾರು 50 ರಿಂದ 55 ನಿಮಿಷ ವಾಟ್ಸ್​ಪ್ ಸೇವೆ ಸ್ಥಗಿತಗೊಂಡು ಲಕ್ಷಾಂತರ ಜನ ಸಮಸ್ಯೆ ಅನುಭವಿಸಿದರು. ಆದರೆ, ಪಶ್ಚಿಮ ಬಂಗಾಳದಲ್ಲಿ 50 ರಿಂದ 55 ವರ್ಷ ಅಭಿವೃದ್ಧಿಯೇ ಸ್ಥಗಿತಗೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.

    ಇದನ್ನೂ ಓದಿ: ಪಾಕಿಸ್ತಾನ ಮಹಿಳೆಯರನ್ನು ಮದುವೆಯಾಗುವುದು ಈ ರಾಷ್ಟ್ರದಲ್ಲಿ ನಿಷಿದ್ಧ!

    ಪಶ್ಚಿಮ ಬಂಗಾಳ ಜನ, ಕಾಂಗ್ರೆಸ್, ಎಡಪಕ್ಷಗಳ ಆಡಳಿತ ಹಾಗೂ ಟಿಎಂಸಿ ಆಡಳಿತ ನೋಡಿದ್ದಿರಾ. ಇದೊಂದು ಬಾರಿ ನಮಗೆ ಅವಕಾಶ ಕೊಟ್ಟು ನೋಡಿ, ನಿಜವಾದ ಬದಲಾವಣೆ ಎಂದರೆ ಏನು ಅಂತಾ ತೋರಿಸುತ್ತೇವೆ ಎಂದು ಮೋದಿ ಮತದಾರರಲ್ಲಿ ವಿನಂತಿಸಿದರು.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಮೋದಿ, ಕೇಂದ್ರದ ಯೋಜನೆಗಳು ಬಂಗಾಳಕ್ಕೆ ತಲುಪದಂತೆ ದೊಡ್ಡ ಗೋಡೆಯಾಗಿ ದೀದಿ ಕೆಲಸ ಮಾಡುತ್ತಿದ್ದಾರೆ. ನಮಗೆ ಐದು ವರ್ಷ ಅವಕಾಶ ಕೊಟ್ಟು ನೋಡಿ, ಅಭಿವೃದ್ಧಿಯನ್ನು ನಮ್ಮ ಜೀವಗಳನ್ನು ತ್ಯಾಗ ಮಾಡಿಯಾದರೂ ತೋರಿಸುತ್ತೇವೆ ಎಂದು ಭರವಸೆ ನೀಡಿದರು.

    ಇದೇ ತಿಂಗಳು 27 ರಿಂದ ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

    ಆರ್​​ಎಸ್​​ಎಸ್​​ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಯಾರು?

    ಬೆಳಗಾವಿ ಲೋಕಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts