ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಮೀಜಿಗಳನೇಕರು ಭೇಟಿಯಾಗಿ, ಬೆಂಬಲ ಸೂಚಿಸಿದ್ದ ಸಂದರ್ಭದ ದೃಶ್ಯಾವಳಿಯೊಂದು ಬಹಳಷ್ಟು ಕಡೆ ಹರಿದಾಡಿತ್ತು. ಸಿಎಂ ಭೇಟಿ ವೇಳೆ ಎಲ್ಲ ಸ್ವಾಮೀಜಿಗಳಿಗೂ ಒಂದು ಲಕೋಟೆ ಕೊಡಲಾಗಿದ್ದು, ಆ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರಿಂದ ಆ ವಿಡಿಯೋ ಸಾಕಷ್ಟು ಹಂಚಿಕೆ ಆಗಿತ್ತು. ಇದೀಗ ಆ ಕುರಿತು ಸ್ವಾಮೀಜಿಯೊಬ್ಬರು ಮಾತನಾಡಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧೀಶರ ಸಮ್ಮೇಳನದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕಾಣಿಕೆ ಕೊಡುವುದು ಸಂಸ್ಕಾರ, ತೆಗೆದುಕೊಳ್ಳುವುದು ಧರ್ಮ. ನಾಡಿನ ಜನತೆಗಾಗಿ ಕಾಣಿಕೆ ತೆಗೆದುಕೊಳ್ಳುತ್ತೇವೆ. ವಿರೋಧ ಮಾಡುವವರು ಸಂಸ್ಕಾರ ಇರದವರು. ಅಷ್ಟಕ್ಕೂ ಅಂದು ಕೊಟ್ಟ ಲಕೋಟೆಯಲ್ಲಿ ಏನಿತ್ತು ಎಂಬುದು ಗೊತ್ತಿಲ್ಲ. ಆದರೆ ನಾವು ಯಾರಿಗೂ ಮಾರಾಟವಾಗಿಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ರು: ಕಟೀಲ್
ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!