More

    ಕೆ.ಎಲ್​. ರಾಹುಲ್​ಗೆ ಕೈತಪ್ಪುತ್ತಾ ಅವಕಾಶ? ಮುಖ್ಯ ಕೋಚ್​ ಡ್ರಾವಿಡ್​ ಹೇಳಿದ ಖಡಕ್​ ಮಾತುಗಳಿವು…

    ನವದೆಹಲಿ: ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್​. ರಾಹುಲ್ ತಮ್ಮ ಕಳಪೆ ಆಟದಿಂದ ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ. ಒಟ್ಟು ಮೂರು ಪಂದ್ಯಗಳನ್ನು ಆಡಿರುವ ರಾಹುಲ್​ ಕ್ರಮವಾಗಿ 4, 9 ಮತ್ತು 9 ರನ್​ಗಳೊಂದಿಗೆ ಕೇವಲ 22 ರನ್​ ಮಾತ್ರ ಗಳಿಸಿದ್ದಾರೆ. ಮೂರು ಪಂದ್ಯಗಳಲ್ಲೂ ಟೀಮ್​ ಇಂಡಿಯಾಗೆ ರಾಹುಲ್​ ಆರಂಭಿಕ ಆಘಾತ ನೀಡಿದ್ದಾರೆ. ಹೀಗಿರುವಾಗ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯಕ್ಕೆ ರಾಹುಲ್​ಗೆ​ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆ ಮೂಡಿದ್ದು, ಇದಕ್ಕೆ ಮುಖ್ಯ ತರಬೇತುದಾರ ರಾಹುಲ್​ ಡ್ರಾವಿಡ್​ ಉತ್ತರ ನೀಡಿದ್ದಾರೆ.

    ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡ್ರಾವಿಡ್​, ಕೆ.ಎಲ್​. ರಾಹುಲ್​, ಅದ್ಭುತ ಆಟಗಾರನೆಂದು ನಾನು ಭಾವಿಸುತ್ತೇನೆ. ಈ ಹಿಂದಿನ ಬಹುತೇಕ ಪಂದ್ಯಗಳಲ್ಲಿ ಅದನ್ನು ಸಾಬೀತು ಮಾಡಿದ್ದಾರೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸದ್ಯದ ಅವರ ಬ್ಯಾಟಿಂಗ್​ ಸ್ಥಿತಿಯು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಅಷ್ಟು ಸುಲಭವಲ್ಲ. ಪ್ರಸ್ತುತ ಟೂರ್ನಿಯು ಸವಾಲಿನದ್ದಾಗಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಅನುಭವಿ ಬೌಲರ್​ಗಳನ್ನು ಅಭ್ಯಾಸದ ಪಂದ್ಯದ ಸಮಯದಲ್ಲಿ ರಾಹುಲ್​ ಸಮರ್ಥವಾಗಿ ಎದುರಿಸಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲಿ ಎಲ್ಲವೂ ಒಟ್ಟಿಗೆ ಕ್ಲಿಕ್ ಆಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಡ್ರಾವಿಡ್​ ಹೇಳಿದರು.

    ಹೊರಗಡೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಮೇಲೆ ನಾವು ಗಮನ ಹರಿಸುವುದಿಲ್ಲ. ನಮ್ಮ ಮನಸ್ಸಿನಲ್ಲಿ ಕೆಲವೊಂದು ಯೋಜನೆಗಳಿವೆ ಮತ್ತು ನಾವು ನಮ್ಮ ಆಟಗಾರರ ಮೇಲೆ ನಂಬಿಕೆ ಇಡುತ್ತೇವೆ. ಎಲ್ಲರು ಏಳು-ಬೀಳುಗಳೊಂದಿಗೆ ಸಾಗುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಭಾರತೀಯ ಕ್ರಿಕೆಟ್​ನ ಸ್ವಭಾವನ್ನು ಸಹ ನಾವು ಅರ್ಥ ಮಾಡಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್​ಗೆ ಇನ್ನಷ್ಟು ಸಮಯ ಕೊಡಬೇಕಿದೆ. ಈ ನಿಟ್ಟಿನಲ್ಲಿ ನಾವು ಸಂಪೂರ್ಣ ಆತನ ಬೆಂಬಲಕ್ಕೆ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ರಾಹುಲ್​ ಪುಟಿದೇಳಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ರಾಹುಲ್​ ಹೇಳಿದರು.

    ರಾಹುಲ್ ಜೊತೆ ಯಾವ ರೀತಿ ಸಂಭಾಷಣೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಡ್ರಾವಿಡ್​, ನಾವು ಪ್ರತಿ ಆಟಗಾರರೊಂದಿಗೆ ಸಾಕಷ್ಟು ಸಂಭಾಷಣೆಗಳನ್ನು ನಡೆಸುತ್ತೇವೆ. ಅದನೆಲ್ಲ ಬಹಿರಂಗಪಡಿಸುವುದು ಕಷ್ಟ. ಈ ಟೂರ್ನಿಯ ಬಗ್ಗೆ ನಮಗೆ ಸಾಕಷ್ಟು ಸ್ಪಷ್ಟತೆ ಬಂದಿದೆ ಮತ್ತು ನಾವು ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.

    ಮುಂದಿನ ಪಂದ್ಯ ನಾಳೆ (ನ.02) ಅಡೆಲೇಡ್​ ಓವಲ್​ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. (ಏಜೆನ್ಸೀಸ್​)

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನ ಹತ್ಯೆ​ ಪ್ರಕರಣ: ಪೊಲೀಸ್​ ಠಾಣೆಯ ಬಾತ್​ರೂಮ್​ನಲ್ಲಿ ಪ್ರೇಯಸಿಯ ಹೈಡ್ರಾಮ

    ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಕಾರು ಅಪಘಾತ: ನಮಗಾಗಿ ಪ್ರಾರ್ಥಿಸಿ ಎಂದು ನಟಿ ರಂಭಾ ಮನವಿ

    ಯಲ್ಲಾಪುರದ ಶಿವಪುರ ಗ್ರಾಮದಲ್ಲಿರುವ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪುಂಡರ ದುರ್ವರ್ತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts