More

    ಕಾಂಗ್ರೆಸ್ ನಾಯಕರ ಹಿಡನ್ ಅಜೆಂಡಾ ಏನು? ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಪ್ರಶ್ನೆ

    ಕಾರವಾರ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ದೇಶವೇ ಕಾದು ಕುಳಿತಿರುವಾಗ ಆಹ್ವಾನ ಕೊಟ್ಟರೂ ಪಾಲ್ಗೊಳ್ಳದಿರಲು ನಿರಾಕರಿಸಿದ ಕಾಂಗ್ರೆಸ್ ನಾಯಕರ ಹಿಡನ್ ಅಜೆಂಡಾ ಏನು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಪ್ರಶ್ನಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀರಾಮ ಮಂದಿರ ಉದ್ಘಾಟನೆ ಕೋಟ್ಯಂತರ ಭಾರತೀಯರ ಕನಸು. ಹೊರ ದೇಶಗಳಲ್ಲಿರುವ ಭಾರತೀಯರೂ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ಕಾಂಗ್ರೆಸ್ ನಾಯಕರಿಗೆ ಗೌರವಯುತವಾಗಿಯೇ ನೀಡಲಾಗಿದೆ. ಹಾಗಿದ್ದರೂ ಕೋಟಿ ಕೋಟಿ ದೇಶವಾಸಿಗಳ ಆರಾಧ್ಯದೈವ ಶ್ರೀರಾಮ ಮಂದಿರದ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ದುರ್ದೈವದ ಸಂಗತಿ ಹಾಗೂ ಆ ಪಕ್ಷ ಹಿಂದು ಸಂಪ್ರದಾಯ, ನಂಬಿಕೆ, ಆಚರಣೆ, ಧಾರ್ವಿುಕತೆ ಮೇಲೆ ಕೊಡಲಿ ಏಟು ನೀಡಿದಂತಾಗಿದೆ ಎಂದಿದಾರೆ.

    ಪ್ರಭು ರಾಮಚಂದ್ರರು ಸಮಸ್ತ ಭಾರತೀಯರನ್ನು ಒಂದುಗೂಡಿಸುವ ದೇವರು. ದೇಶಕ್ಕೆ ದೇಶವೇ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದೆ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಖಂಡನೀಯವಾಗಿದೆ. ದೇವರ ವಿಷಯದಲ್ಲೂ ಕಾಂಗ್ರೆಸ್​ನವರು ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಅಸಂಖ್ಯಾತ ಭಾರತೀಯರ ನಂಬಿಕೆ, ಸಂಪ್ರದಾಯ, ಆಚರಣೆಗಳಿಗೆ ಪದೇ ಪದೆ ಅಡ್ಡಿಪಡಿಸುತ್ತ ವಿಕೃತಿ ಮೆರೆಯುತ್ತಿರುವ ಕಾಂಗ್ರೆಸ್​ಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ.

    ವಿಧಾನಸಭೆ ಚುನಾವಣೆ ವೇಳೆಗೆ ಕೆಲ ಕಾಂಗ್ರೆಸ್ ಮುಖಂಡರು ಕೇಸರಿ ಪೇಟ, ಶಾಲು ಧರಿಸಿ ಮಿಂಚಿದ್ದರು. ಅವರ ಢೋಂಗಿತನವೆಲ್ಲ ಈಗ ಬಯಲಾಗಿದೆ. ಇವರಿಗೆ ಹಿಂದು ಧರ್ಮ, ದೇವರುಗಳ ಬಗ್ಗೆ ಗೌರವವೂ ಇಲ್ಲ. ನಂಬಿಕೆಯೂ ಇಲ್ಲ. ಕೇವಲ ಮತ ಗಳಿಕೆಗಾಗಿ ನಡೆಸಿದ ನಾಟಕ ಎನ್ನುವುದು ಪಕ್ಕಾ ಆಗಿದೆ ಎಂದು ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts