More

    ಇತ್ತೀಚೆಗೆ ಟ್ರೆಂಡ್​ ಆಗಿರುವ ಬಿಯರ್​ ಟ್ಯಾನಿಂಗ್​ ಅಂದ್ರೇನು? ಇದು ಎಷ್ಟು ಡೇಂಜರ್? ಇಲ್ಲಿದೆ ಮಾಹಿತಿ…

    ಬಿಯರ್​ ಟ್ಯಾನಿಂಗ್​ ಅಂದರೆ ಸೂರ್ಯನಿಗೆ ಮೈಯೊಡ್ಡುವುದು ಎಂದರ್ಥ. ಈ ಬಿಯರ್​ ಟ್ಯಾನಿಂಗ್​ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್​ನಲ್ಲಿದೆ. ಆದರೆ, ತಜ್ಞರು ಇದನ್ನು ಪ್ರಯತ್ನಿಸದಂತೆ ಎಚ್ಚರಿಕೆ ನೀಡಿದರೂ ಇದನ್ನು ಅನುಸರಿಸುತ್ತಿರುವುದು ತುಂಬಾ ಕಳವಳಕಾರಿಯಾಗಿದೆ.

    ಬಿಯರ್​ ಮಸಾಜ್​

    ಸುಂದರವಾಗಿ ಕಾಣಲು ಪುರುಷ ಮತ್ತು ಮಹಿಳೆಯರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಚರ್ಮ ಬ್ಯೂಟಿಫುಲ್​ ಮತ್ತು ಸಾಫ್ಟ್​ ಆಗಲೆಂದು ಜನರು ಬಿಯರ್​ ಸುರಿದುಕೊಂಡು ಬಿಸಿಲಿಗೆ ಮೈಯೊಡ್ಡುತ್ತಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಬಿಯರ್​ ಅನ್ನು ದೇಹದ ಮೇಲೆ ಮಸಾಜ್​ ಮಾಡಿ ಸೂರ್ಯನಿಗೆ ಮೈಯೊಡ್ಡುತ್ತಾರೆ. ಇದಕ್ಕಾಗಿ ಹೆಚ್ಚು ಮಂದಿ ಸಾಮಾನ್ಯವಾಗಿ ಸಮುದ್ರ ತೀರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

    ಇದನ್ನೂ ಓದಿ: ಹೈಕಮಾಂಡ್ ವಿರುದ್ಧ ಅಸಂತೋಷ: ಶಾಸಕರ ಸಭೆ ನಡೆಸಿದ ಬಿಎಸ್​ವೈ; ಎಸ್​ಟಿಎಸ್, ಬೈರತಿ, ಸೋಮಣ್ಣ ಗೈರು

    ಬಿಯರ್​ ಟ್ಯಾನಿಂಗ್​ ಪರಿಣಾಮವೇನು?

    ಸೂರ್ಯನ ಕಿರಣಗಳು ಮತ್ತು ಆಲ್ಕೋಹಾಲ್​ ಚರ್ಮವನ್ನು ಸುಂದರವಾಗಿಸುತ್ತದೆ ಎಂದು ನಂಬಲಾಗಿದೆ. ಇದೀಗ ಬಿಯರ್​ ಟ್ಯಾನಿಂಗ್​ ಅಭ್ಯಾಸ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ತಜ್ಞರು ಎಚ್ಚರಿಕೆ ನೀಡಿದ್ದು, ಈ ವಿಧಾನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಇದರಿಂದ ಚರ್ಮವು ಕೆಂಪು ಮತ್ತು ಅಲರ್ಜಿಯಾಗುತ್ತದೆ. ಅದರಲ್ಲೂ ಯಾರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೋ ಅವರು ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು. ಇಂಥವರು ಬಿಯರ್​ ಟ್ಯಾನಿಂಗ್​ ಮಾಡಿದರೆ, ಚರ್ಮವು ಒಣಗಿ, ಹಾನಿಯಾಗಲಿದೆ. ಚರ್ಮದ ರಂಧ್ರಗಳು ಮುಚ್ಚಿಹೋಗುತ್ತವೆ ಮತ್ತು ಮೊಡವೆಗಳು ಬರುತ್ತವೆ. ಇದು ಚರ್ಮ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. PH ಬ್ಯಾಲೆನ್ಸ್ ತೊಂದರೆಯಾಗುತ್ತದೆ. ಚರ್ಮವು ಶುಷ್ಕವಾಗುತ್ತದೆ. ನಿರ್ಜಲೀಕರಣವು ವಯಸ್ಸಾದ ಚರ್ಮವನ್ನು ಉಂಟುಮಾಡುತ್ತದೆ. ಚರ್ಮವು ಒಣಗಿ, ನಿರ್ಜಲೀಕರಣವು ವಯಸ್ಸಾದಂತೆ ಕಾಣುವ ಚರ್ಮವನ್ನು ಉಂಟುಮಾಡುತ್ತದೆ. ಹೀಗಾಗಿ ಇದರಿಂದ ದೂರವಿರಲು ತಜ್ಞರು ಹೇಳುತ್ತಾರೆ.

    ಬಿಯರ್​ ಟ್ಯಾನಿಂಗ್​ಗೆ ಪರ್ಯಾಯವೇನು?

    ಪ್ರಪಂಚದಾದ್ಯಂತದ ಚರ್ಮರೋಗ ತಜ್ಞರು ಈ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಿಯರ್ ಟ್ಯಾನಿಂಗ್ ಮತ್ತು ಮುನ್ನೆಚ್ಚರಿಕೆಗಳನ್ನು ತಿಳಿದುಕೊಳ್ಳಲು ಜನರನ್ನು ಒತ್ತಾಯಿಸಿದ್ದಾರೆ. ಬಿಯರ್​ ಟ್ಯಾನಿಂಗ್​ ಬದಲು ಇದೇ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ರೂಪಿಸಲಾದ ಸೆಲ್ಫ್​ ಟ್ಯಾನಿಂಗ್ ಉತ್ಪನ್ನಗಳು ಅಥವಾ ಸ್ಪ್ರೇ ಟ್ಯಾನ್‌ಗಳನ್ನು ಬಳಸುವುದು ಉತ್ತಮ. ಇವು ಸೂರ್ಯನ ಹೊಳಪನ್ನು ಸಾಧಿಸಲು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಡಾರ್ವಿನ್ ವಿಕಾಸವಾದವೂ.. ವಾನರ ಉಪಟಳವೂ..

    ರಾಜ್ಯದ ರೈತರಿಗೆ ಅನುಕೂಲಕರ: ಬೆಂಬಲ ಬೆಲೆಯಲ್ಲಿ ಹೆಚ್ಚಿನ ರಾಗಿ, ಜೋಳ ಖರೀದಿ

    ಹಳ್ಳಿ ಬೆಳಗಿದರೆ ದೇಶಕ್ಕೆ ಬೆಳಕು: ಚುನಾವಣೆ ಗೆಲುವಿನ ಉದ್ದೇಶವಿಲ್ಲ; ದೇಶದ ಅಭಿವೃದ್ಧಿಗಾಗಿ ಕೆಲಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts