More

    ಡ್ಯೂಟಿ ಮಧ್ಯೆ ಮುಟ್ಟಾದರೆ…?! ಮಹಿಳಾ ಪೊಲೀಸರಿಗೆ ಸಿಕ್ಕಿದೆ ಪರಿಹಾರ

    ಕುಡ್ಡಲೋರ್: ಲೈಂಗಿಕ ಸಮಾನತೆಯ ಬಗ್ಗೆ ಮಾತನಾಡುವುದು ಸುಲಭ. ಆದರೆ ಪುರುಷರಿಗೆ ಸರಿಸಮನಾಗಿ ದುಡಿಯಲು ಹೋಗುವ ಹೆಂಗಸರಿಗೆ ಎದುರಾಗುವ ಸಮಸ್ಯೆಗಳು ಒಂದೇ ಎರಡೇ?! ಉದಾಹರಣೆಗೆ, ಮಹಿಳಾ ಪೊಲೀಸರು ನಿರ್ಬಿಢೆಯಿಂದ ಪೊಲೀಸ್ ಠಾಣೆಗಳಲ್ಲಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಹ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆದರೆ ಕರ್ತವ್ಯದ ನಡುವೆ ತಿಂಗಳ ಆ ದಿನಗಳ ಕರೆ ಬಂದರೆ ಪರದಾಟ ತಪ್ಪಿದ್ದಲ್ಲ.

    ಕಾರ್ಪೋರೇಟ್ ಉದ್ಯೋಗಿಗಳಂತೆ ವಾನಿಟಿ ಬ್ಯಾಗನ್ನು ಎಲ್ಲೆಡೆ ಹಿಡಿದುಕೊಂಡು ಹೋಗಲು ಪೊಲೀಸ್​ ಕೆಲಸ ಮಾಡುವ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಇದಕ್ಕೆ ಪರಿಹಾರೋಪಾಯವನ್ನು ತಮಿಳುನಾಡಿನ ಕುಡ್ಡಲೋರ್ ಪೊಲೀಸರು ಹುಡುಕಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಡೆತಡೆಯಿಲ್ಲದೆ ಕರ್ತವ್ಯದ ಮೇಲೆ ಹೆಚ್ಚು ಗಮನ ನೀಡಲು ಸಹಾಯಕವಾಗುವಂತೆ ಜಿಲ್ಲೆಯ 65 ಸ್ಥಳಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್​ಅನ್ನು ಅಳವಡಿಸಲಾಗುತ್ತಿದೆ. ಐದು ರೂಪಾಯಿ ಜಮಾ ಮಾಡಿದರೆ ಸಾಕು, ಒಂದು ಪರಿಸರಸ್ನೇಹಿ ಸ್ಯಾನಿಟರ್ ಪ್ಯಾಡ್​ಅನ್ನು ಈ ವೆಂಡಿಂಗ್ ಮೆಷಿನ್​ಗಳಲ್ಲಿ ಪಡೆಯಬಹುದಾಗಿದೆ.

    ಇದನ್ನೂ ಓದಿ: ಹೊಸ ತಾಯಿ ಅನುಷ್ಕಾರ ಈ ಪೋಸ್ ನೋಡಿದ್ದೀರಾ ..?!

    ತಮಿಳುನಾಡಿನಲ್ಲಿ ಮೊದಲ ಪ್ರಯತ್ನ ಎನ್ನಲಾಗಿರುವ ಯೋಜನೆಯ ಅಂಗವಾಗಿ ಕುಡ್ಡಲೋರ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟರಿ ನಾಪ್​ಕಿನ್​ ವೆಂಡಿಂಗ್ ಮೆಷಿನ್​ಗಳು ಲಭ್ಯವಾಗಲಿವೆ. ಸನ್ಮಾರ್ ಗ್ರೂಪ್​ ಪ್ರಾಯೋಜಕತ್ವದಲ್ಲಿ ಒದಗಿಸಲಾಗುತ್ತಿರುವ ಈ ಸೌಲಭ್ಯವನ್ನು ಜಿಲ್ಲಾ ಪೊಲೀಸ್ ಕಛೇರಿ, ಆರ್ಮಡ್ ರಿಸರ್ವ್ ಮತ್ತು ಮಹಿಳಾ ಪೊಲೀಸರ ಮೊಬೈಲ್ ಟಾಯ್ಲೆಟ್​ನಲ್ಲಿ ಕೂಡ ಅಳವಡಿಸಲಾಗಿದೆ.

    ಕುಡ್ಡಲೋರ್ ಎಸ್ಪಿ ಎಂ.ಶ್ರೀ ಅಭಿನವ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಈ ಸೌಲಭ್ಯವನ್ನು ಬುಧವಾರ (ಫೆಬ್ರವರಿ 17) ಉದ್ಘಾಟಿಸಿದ್ದಾರೆ. ಕೆಲಸದ ಸ್ಥಳವನ್ನು ಉತ್ತಮಗೊಳಿಸುವ ಬಗ್ಗೆ ಮಹಿಳಾ ಪೊಲೀಸರೊಂದಿಗೆ ನಡೆಸಿದ ಚರ್ಚೆಯ ನಂತರ ತಾವು ಈ ಯೋಜನೆಯನ್ನು ರೂಪಿಸಿದ್ದಾಗಿ ತಿಳಿಸಿದ ಎಸ್ಪಿ, ಬಂದೋಬಸ್ತ್ ಡ್ಯೂಟಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡ್ಯೂಟಿ ನಿರ್ವಹಿಸುವ ಮಹಿಳಾ ಪೊಲೀಸರಿಗೆ ಇದು ಹೆಚ್ಚಾಗಿ ಉಪಯುಕ್ತವಾಗಲಿದೆ ಎಂದಿದ್ದಾರೆ.

    ಇದನ್ನೂ ಓದಿ: VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಕರ್ತವ್ಯದ ಸಮಯವು ಇಂತಿಷ್ಟೇ ಎಂದು ನಿಗದಿಯಾಗಿರದ ತಮಗೆ ಈ ಸೌಲಭ್ಯ ತುಂಬಾ ಉಪಯುಕ್ತವಾಗಲಿದೆ ಎಂದು ಮಹಿಳಾ ಪೊಲೀಸ್ ಸಿಬ್ಬಂದಿ ಸಂತೋಷಪಟ್ಟಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮುಟ್ಟು ಆರಂಭವಾದಲ್ಲಿ ಹತ್ತಿರದ ಮನೆಗಳಿಗೆ ಹೋಗಿ ಸಹಾಯ ಕೋರುತ್ತೇವೆ. ಈ ಹೊಸ ವ್ಯವಸ್ಥೆಯಿಂದ ಆ ರೀತಿ ಪರದಾಡುವ ಕಷ್ಟ ನಿವಾರಣೆಯಾಗಲಿದೆ” ಎಂದು ಡಿಎಸ್ಪಿ ಕೆ.ಶಾಂತಿ ಹೇಳಿದ್ದಾರೆ.(ಏಜೆನ್ಸೀಸ್)

    ಬಾಲಿವುಡ್ ನಟನ ಆತ್ಮಹತ್ಯೆ ಪ್ರಕರಣ : ಹೆಂಡತಿ, ಅತ್ತೆ ನೀಡಿದ್ದರೇ ಕಿರುಕುಳ ?

    ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

    ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts