More

    ಯುವರಾಜರಿಬ್ಬರಿಗೆ ಉತ್ತರ ಪ್ರದೇಶದಲ್ಲಿ ಏನಾಗಿತ್ತೋ ಬಿಹಾರದಲ್ಲೂ ಅದೇ ಮರುಕಳಿಸಲಿದೆ: ಪ್ರಧಾನಿ ಮೋದಿ

    ಪಟನಾ: ಈ ಹಿಂದೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಯುವರಾಜರಿಬ್ಬರಿಗೆ ಏನಾಗಿತ್ತೋ ಬಿಹಾರ ಚುಣವಣೆಯಲ್ಲೂ ಅದೇ ಮರುಕಳಿಸಲಿದೆ ಎಂದು ಪ್ರಧಾನಿ ಮೋದಿ ರಾಹುಲ್​ ಗಾಂಧಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್ ಹೆಸರೇಳದೆ ವಾಗ್ದಾಳಿ ನಡೆಸಿದರು.

    ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಛಾಫ್ರಾದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಿತು. ಇಬ್ಬರು ಯವರಾಜರು ತೆರೆದ ಬಸ್​ ಮೇಲೆ ನಿಂತು ಜನರತ್ತ ಕೈಬೀಸಿದ್ದರು. ಆದರೆ, ಜನರು ಅವರನ್ನು ವಾಪಸ್ಸು ಮನೆಗೆ ಕಳುಹಿಸಿದರು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಉ.ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮೈತ್ರಿಕೂಟದ ಹೆಸರೇಳೆದೆ ಕಾಲೆಳೆದರು.

    ಇದನ್ನೂ ಓದಿ: VIDEO| ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ವಧು ಹೇಳಿದ ಮಾತು ಕೇಳಿ ವರನಿಗೆ ಬಿಗ್​ ಶಾಕ್​!

    ಅದಿನ ಯುವರಾಜ ಇಂದು ಜಂಗಲ್​ ರಾಜ್​ ಯುವರಾಜನನ್ನು (ತೇಜಸ್ವಿ ಯಾದವ್​) ಭೇಟಿಯಾಗಿದ್ದಾರೆ. ಉತ್ತರ ಪ್ರದೇಶದಂತೆ ಜತೆಯಾಗಿದ್ದಾರೆ. ಇವರು ಸಹ ಬಿಹಾರದ ನೆಲದಲ್ಲಿ ಧೂಳೀಪಟವಾಗುತ್ತಾರೆ ಎಂದು ಕಾಂಗ್ರೆಸ್​ ಮತ್ತು ಆರ್​ಜೆಡಿ ಮೈತ್ರಿಕೂಟವನ್ನು ಟೀಕಿಸಿದರು.

    ಎರಡು ಎಂಜಿನ್​ (ಬಿಜೆಪಿ-ಜೆಡಿಯು) ಇರುವ ಎನ್​ಡಿಎ ನೇತೃತ್ವದ ಸರ್ಕಾರದಿಂದ ಬಿಹಾರ ಅಭಿವೃದ್ಧಿಯಾಗುತ್ತಿದೆ. ಅತ್ತ ಇಬ್ಬರು ಯುವರಾಜರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಇನ್ನು ಬಿಹಾರ ಚುನಾವಣೆ ಈಗಾಗಲೇ ಅ. 28ರಿಂದ ಆರಂಭವಾಗಿದ್ದು ನ. 7ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ. (ಏಜೆನ್ಸೀಸ್​)

    PHOTOS: ಮನುಷ್ಯರೇ ಕೂರುವಷ್ಟು ದೊಡ್ಡ ಎಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts