More

    ಸೆ. 26ರಂದು ಬೆಂಗಳೂರು ಬಂದ್​: ರಾಜಧಾನಿಯಲ್ಲಿ ಏನಿರುತ್ತೆ? ಏನಿರುವುದಿಲ್ಲ? ಇಲ್ಲಿದೆ ಮಾಹಿತಿ

    ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದ್ದು, ಸೆಪ್ಟೆಂಬರ್​ 26ರಂದು (ಮಂಗಳವಾರ) ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ಗೆ ಕರೆ ನೀಡಿವೆ. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್​ಗೆ ಬೆಂಬಲ ಸೂಚಿಸಿವೆ.

    ಬೆಂಗಳೂರು ಬಂದ್ ದಿನ ಟೌನ್ ಹಾಲ್​​ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಬಹುತೇಕ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿರುವುದರಿಂದ ಸೆ. 26ರಂದು ರಾಜ್ಯ ರಾಜಧಾನಿ ಸಂಪರ್ಣ ಸ್ತಬ್ಧವಾಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಸೇವೆಗಳು ಬಂದ್​ ದಿನ ಇರುವುದಿಲ್ಲ. ಹಾಗಾದರೆ ಬೆಂಗಳೂರು ಬಂದ್ ವೇಳೆ ಏನಿರುತ್ತೆ? ಏನಿರುವುದಿಲ್ಲ ಎಂಬುನ್ನು ನಾವೀಗ ತಿಳಿಯೋಣ.

    ಏನಿರಲ್ಲ?

    * ಆಟೋ
    * ಮ್ಯಾಕ್ಸಿ ಕ್ಯಾಬ್
    * ಹೋಟೆಲ್
    * ಬಿಎಂಟಿಸಿ, ಕೆಎಸ್​ಆರ್​ಟಿಸಿ
    * ಲಾರಿ
    * ಮ್ಯಾಕ್ಸಿ ಕ್ಯಾಬ್
    * ಚಿಕ್ಕಪೇಟೆ
    * ಓಲಾ, ಊಬರ್
    * ಬಿಬಿಎಂಪಿ
    * ಖಾಸಗಿ ಶಾಲೆ, ಕಾಲೇಜುಗಳು

    ಇದನ್ನೂ ಓದಿ: ಕೃತಿ ಶೆಟ್ಟಿ ಬೇಡ ಬೇರೆ ಹೀರೋಯಿನ್ ಇದ್ರೆ ನೋಡಿ: ಸಿನಿಮಾ ತಿರಸ್ಕರಿಸಲು ಕಾರಣ ಕೊಟ್ಟ ವಿಜಯ್​ ಸೇತುಪತಿ

    ಏನಿರುತ್ತೆ? 

    * ಆಂಬುಲೆನ್ಸ್ ಸೇವೆ
    * ತರಕಾರಿ, ಹಾಲು
    * ಮೆಡಿಕಲ್ಸ್
    * ಆಸ್ಪತ್ರೆ
    * ಬ್ಯಾಂಕ್
    * ನಮ್ಮ ಮೆಟ್ರೋ

    50- 50 (ಬಂದ್​ಗೆ ಬೆಂಬಲ ನೀಡಬಹುದು ಅಥವಾ ನೀಡದೇ ಇರಬಹುದು) 

    * ಖಾಸಗಿ ಬಸ್
    * ಏರ್ ಪೋರ್ಟ್ ಟ್ಯಾಕ್ಸಿ
    * ಲಾರಿ ಮಾಲೀಕರು
    * ಸರ್ಕಾರಿ ನೌಕರರು
    * ಶಾಪಿಂಗ್ ಮಾಲ್
    * ಸರ್ಕಾರಿ ಕಛೇರಿಗಳು
    * ಏರ್ ಪೋರ್ಟ್ ಟ್ಯಾಕ್ಸಿ
    * ಐಟಿ ಬಿಟಿ ಕಂಪನಿಗಳು

    ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ, ಬಂದ್ ನಡೆಸಿದರೆ ರಾಜ್ಯ ಸರ್ಕಾರದ ಗಮನವನ್ನು ಹೆಚ್ಚಿನ ಮಟ್ಟಿಗೆ ಸೆಳೆದು ಕೇಂದ್ರದ ಮೇಲೆ ಮತ್ತು ಕಾನೂನಾತ್ಮಕವಾಗಿ ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಉತ್ತಮ ಎಂದು ವಿವಿಧ ಸಂಘಟನೆಗಳು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾವೆ.

    ಕಾವೇರಿ ಜಲವಿವಾದ; ಮಂಗಳವಾರ ಬೆಂಗಳೂರು ಬಂದ್​

    ಬೆಂಗಳೂರಿನಲ್ಲಿ ಡಿಎಂಕೆ ನಾಯಕನ ಮೇಲೆ ಹಲ್ಲೆ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ KKRTC ಬಸ್; ಇಬ್ಬರು ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts