More

    ಮಲ್ಟಿ-ಕ್ಯಾಪ್ ಮ್ಯೂಚುವಲ್​ ಫಂಡ್‌ಗಳೆಂದರೇನು?: ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟ ಫಂಡ್​ಗಳ ವಿವರ ಇಲ್ಲಿದೆ…

    ಮುಂಬೈ: ಮ್ಯೂಚುವಲ್​ ಫಂಡ್​ಗಳಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಪ್ರಮುಖ ವರ್ಗ ಮಲ್ಟಿ-ಕ್ಯಾಪ್ ಫಂಡ್‌ಗಳದ್ದಾಗಿದೆ. 2023ನೇ ಸಾಲಿನಲ್ಲಿ ಮಲ್ಟಿ-ಕ್ಯಾಪ್ ಫಂಡ್‌ಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಸರಿಸರಿಯಾಗಿ ಪ್ರತಿ ತಿಂಗಳಿಗೆ ಶೇಕಡಾ 2.5ರಷ್ಟು ಲಾಭವನ್ನು ಇವು ಗಳಿಸಿಕೊಟ್ಟಿವೆ. ಮೀಟರ್​ ಬಡ್ಡಿ ಸರಿಸಮನಾದ ಆದಾಯ ಇದೆಂದು ಹೇಳಬಹುದು.

    ಮಲ್ಟಿ-ಕ್ಯಾಪ್ ಫಂಡ್‌ಗಳು ಎಂದರೇನು?

    ಇದು ಇಕ್ವಿಟಿ-ಆಧಾರಿತ ಫಂಡ್​ ಆಗಿದೆ. ಅಂದರೆ, ಷೇರುಗಳಲ್ಲಿ ಹೂಡಿಕೆ ಮಾಡಲಾಗುವ ಫಂಡ್​ ಇದು, ಹೆಸರೇ ಸೂಚಿಸುವಂತೆ ವಿವಿಧ ರೀತಿಯ ಷೇರುಗಳಲ್ಲಿ (ಮಲ್ಟಿ ಕ್ಯಾಪ್​) ಹೂಡಿಕೆ ಮಾಡುವ ಫಂಡ್​ ಇದಾಗಿರುತ್ತದೆ. ಲಾರ್ಜ್​ ಕ್ಯಾಪ್​, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್​ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಮ್ಯೂಚುವಲ್​ ಫಂಡ್​ಗಳಲ್ಲಿ ಜನರು ತೊಡಗಿಸುವ ಹಣವನ್ನು ಬೃಹತ್​, ಮಧ್ಯಮ ಹಾಗೂ ಸಣ್ಣ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
    ಫಂಡ್​ನ ಒಟ್ಟಾರೆ ಮೊತ್ತದ ಕನಿಷ್ಠ 75ರಷ್ಟನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾರ್ಜ್-ಕ್ಯಾಪ್, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್​ಗಳಲ್ಲಿ ತಲಾ ಕನಿಷ್ಠ ಶೇಕಡಾ 25ರಷ್ಟು ಹೂಡಿಕೆ ಮಾಡಲಾಗುತ್ತದೆ. ಹೀಗೆ ಈ ಮೂರು ವರ್ಗದ ಷೇರುಗಳಲ್ಲಿ ಬಹುತೇಕವಾಗಿ ಸಮ ಪ್ರಮಾಣದ ಹೂಡಿಕೆಯನ್ನು ಈ ಫಂಡ್​ಗಳಲ್ಲಿ ಮಾಡಲಾಗುತ್ತದೆ.

    2023ರಲ್ಲಿ ಲಾಭ ಎಷ್ಟು?:

    ಮಲ್ಟಿ ಕ್ಯಾಪ್ ಫಂಡ್‌ಗಳು 2023 ರಲ್ಲಿ ಶೇಕಡಾ 28.54ನಷ್ಟು ಸರಾಸರಿ ಆದಾಯವನ್ನು ನೀಡಿವೆ. ಈ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ಈ ವರ್ಷದಲ್ಲಿ ತಂದುಕೊಟ್ಟಿವೆ.

    ಮಲ್ಟಿ ಕ್ಯಾಪ್ ವಿಭಾಗದಲ್ಲಿ ವಿವಿಧ ಮ್ಯೂಚುವಲ್​ ಫಂಡ್​ ಕಂಪನಿಗಳ ಅಂದಾಜು 16 ಯೋಜನೆಗಳಿವೆ. 2023ರಲ್ಲಿ ಮಲ್ಟಿ ಕ್ಯಾಪ್ ಫಂಡ್​ ವರ್ಗಕ್ಕೆ 18,293.82 ಕೋಟಿ ರೂಪಾಯಿ ಹಣ ಹರಿದುಬಂದಿದೆ. ನವೆಂಬರ್ 30, 2023ರವರೆಗೆ ಮಲ್ಟಿ ಕ್ಯಾಪ್ ವರ್ಗದ ನಿರ್ವಹಣೆಯಲ್ಲಿರುವ ಆಸ್ತಿಯು 1.03 ಲಕ್ಷ ಕೋಟಿ ರೂ. ಇದೆ. ಮಲ್ಟಿ ಕ್ಯಾಪ್ ವರ್ಗದ ನಿರ್ವಹಣೆಯಲ್ಲಿರುವ ಆಸ್ತಿಯು 2023 ರಲ್ಲಿ 55.91% ರಷ್ಟು ಏರಿಕೆಯಾಗಿದೆ. ಕಳೆದಜನವರಿಯಲ್ಲಿ ರೂ 66,099.74 ಕೋಟಿಯಿಂದ ನವೆಂಬರ್‌ನಲ್ಲಿ ರೂ 1.03 ಲಕ್ಷ ಕೋಟಿಗೆ ಏರಿದೆ.

    ಈ ವಿಭಾಗದ ಫಂಡ್​ಗಳ ಪೈಕಿ ಲಾಭ ನೀಡುವುದರಲ್ಲಿ ಎಚ್‌ಡಿಎಫ್‌ಸಿ ಮಲ್ಟಿ ಕ್ಯಾಪ್ ಫಂಡ್ ಅಗ್ರ ಸ್ಥಾನದಲ್ಲಿದೆ. ಈ ಯೋಜನೆಯು ರೂ 10,000 ಕೋಟಿ ರೂ.ಗಳ ಆಸ್ತಿ ನಿರ್ವಹಿಸುತ್ತದೆ. ಕೊಟಕ್ ಮಲ್ಟಿಕ್ಯಾಪ್ ಫಂಡ್ ಶೇಕಡಾ 34.28ರಷ್ಟು ಲಾಭ ನೀಡಿದೆ. ನಿಪ್ಪಾನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್, ಸ್ವತ್ತುಗಳ ಆಧಾರದ ಮೇಲೆ ಈ ವಿಭಾಗದಲ್ಲಿ ಅತಿದೊಡ್ಡ ಯೋಜನೆಯಾಗಿದೆ. ಅಂದರೆ, ನಿಪ್ಪಾನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್​ನಲ್ಲಿ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲಾಗಿದ್ದು, ಇದು ಈ ವರ್ಷ ಶೇಕಡಾ 33.85ರಷ್ಟು ಲಾಭ ನೀಡಿದೆ. ಈ ಯೋಜನೆಯು ರೂ 22,695.37 ಕೋಟಿ ಆಸ್ತಿ ನಿರ್ವಹಿಸುತ್ತದೆ. ಈ ಫಂಡ್​ಗಳ ಪೈಕಿ ಕ್ವಾಂಟ್ ಆ್ಯಕ್ಟಿವ್ ಫಂಡ್ (ಶೇಕಡಾ 18.46% ) ಕಡಿಮೆ ಆದಾಯ ತಂದುಕೊಟ್ಟಿರುವ ಯೋಜನೆಯಾಗಿದೆ.

    2023ರಲ್ಲಿ ಶೇಕಡಾ 30%ಕ್ಕಿಂತ ಹೆಚ್ಚು ಲಾಭ ನೀಡಿದ 6 ಮಲ್ಟಿ ಕ್ಯಾಪ್ ಫಂಡ್​ಗಳು ಈ ರೀತಿ ಇವೆ.

    ಎಚ್​ಡಿಎಫ್​ಸಿ ಮಲ್ಟಿ ಕ್ಯಾಪ್ ಫಂಡ್ 35.63%
    ಕೋಟಾಕ್ ಮಲ್ಟಿಕ್ಯಾಪ್ ಫಂಡ್ 34.28%
    ನಿಪ್ಪಾನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್ 33.85%
    ಐಟಿಐ ಮಲ್ಟಿ-ಕ್ಯಾಪ್ ಫಂಡ್ 33.50%
    ಆಕ್ಸಿಸ್ ಮಲ್ಟಿಕ್ಯಾಪ್ ಫಂಡ್ 32.36%
    ICICI ಪ್ರುಡೆನ್ಶಿಯಲ್ ಮಲ್ಟಿಕ್ಯಾಪ್ ಫಂಡ್ 31.06%

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts