ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಐದು ದಿನಗಳಲ್ಲಿ 400ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಸಾವಿರ ಕೋಟಿಯನ್ನು ಬಾಚುವ ಗುರಿಯನ್ನು ಹೊಂದಿದೆ.

ಡಿಸೆಂಬರ್ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರೆತ್ತಿದ್ದು, ಹಲವೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಅನಿಮಲ್ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಅತ್ತ ಟೀಂ ಇಂಡಿಯಾದ ಆಟಗಾರನೊಬ್ಬ ಸಿನಿಮಾವನ್ನು ದೂಷಿಸುವ ಮೂಲಕ ಸುದ್ದಿಯಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
I change my mind – Jaydev Unadkat deserved that 11cr Rajasthan Royals paid for him 💯 pic.twitter.com/9yhpoklh3M
— cloudy (@itsnotandeesh) December 3, 2023
ಇದನ್ನೂ ಓದಿ: ರೈತರ ಆತ್ಮಹತ್ಯೆಗೆ ಸ್ಪಂದಿಸದ ಸರಕಾರಕ್ಕೆ ಮುಸ್ಲಿಮರ ಓಲೈಕೆ ಮುಖ್ಯವಾಗಿದೆ: ಆರ್.ಅಶೋಕ್
ಟೀಂ ಇಂಡಿಯಾದ ಆಟಗಾರ ಜಯದೇವ್ ಉನದ್ಕತ್ ಅನಿಮಲ್ ಚಿತ್ರವನ್ನು ಅವಮಾನಕರ ಸಿನಿಮಾ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಕರುಣಾಜನಕವಾಗಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ನೋಡಿ, 3 ಗಂಟೆಗಳ ಕಾಲ ವ್ಯರ್ಥ ಮಾಡಲಾಯಿತು. ಡಿಸಾಸ್ಟರ್ ಮತ್ತು ಅವಮಾನಕರ ಎಂದಿರುವ ಅವರು, ಲಕ್ಷಾಂತರ ಜನ ವೀಕ್ಷಿಸುವ ಸಿನಿಮಾದಲ್ಲಿ ಇಂತಹ ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು. ಮನರಂಜನಾ ಉದ್ಯಮದಲ್ಲಿಯೂ ಸಾಮಾಜಿಕ ಜವಾಬ್ದಾರಿ ಎಂಬ ವಿಷಯವಿದೆ. ಅದನ್ನು ಎಂದಿಗೂ ಮರೆಯಬಾರದು ಎಂದಿದ್ದಾರೆ.
ಅಷ್ಟೆ ಅಲ್ಲ, ನಾವು ಕಾಡಿನಲ್ಲಿ, ಅರಮನೆಗಳಲ್ಲಿ ವಾಸಿಸುತ್ತಿಲ್ಲ. ಯುದ್ಧಗಳನ್ನು ಮಾಡುತ್ತಿಲ್ಲ ಅಥವಾ ಬೇಟೆಯಾಡಲು ಹೋಗುತ್ತಿಲ್ಲ. ನಟನೆ ಎಷ್ಟು ಚೆನ್ನಾಗಿತ್ತು ಎಂಬುದು ಮುಖ್ಯವಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್ ಅನ್ನು ಅಳಿಸಿದ್ದಾರೆ. ಆದರೆ ಸ್ಟಾರ್ ವೇಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.