More

    ಭಾರತ, ಆಸೀಸ್ ಬಳಿಕ ವೆಸ್ಟ್ ಇಂಡೀಸ್ ಟಿ20 ತಂಡಕ್ಕೂ ಹೊಸ ಜೆರ್ಸಿ!

    ಆಕ್ಲೆಂಡ್: ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ಬಳಿಕ ವೆಸ್ಟ್ ಇಂಡೀಸ್ ಕೂಡ ಟಿ20 ಕ್ರಿಕೆಟ್‌ನಲ್ಲಿ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ನವೆಂಬರ್ 27ರಿಂದ ನಡೆಯಲಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಸಿದ್ಧಪಡಿಸಲಾಗಿರುವ ನೂತನ ಜೆರ್ಸಿಯನ್ನು ವೆಸ್ಟ್ ಇಂಡೀಸ್ ತಂಡ ಶನಿವಾರ ಅನಾವರಣಗೊಳಿಸಿದೆ.

    ವಿಂಡೀಸ್ ತಂಡದ ಸಾಂಪ್ರದಾಯಿಕ ಮರೂನ್ ಬಣ್ಣದ ಜತೆಗೆ ಹಳದಿ ಬಣ್ಣವನ್ನೂ ಹೊಸ ಜೆರ್ಸಿಯಲ್ಲಿ ಹೆಚ್ಚಾಗಿ ಬಳಸಲಾಗಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ವೆಸ್ಟ್ ಇಂಡೀಸ್ ತಂಡ ಇದೇ ಜೆರ್ಸಿ ಧರಿಸಿ ಆಡುವ ನಿರೀಕ್ಷೆ ಇದೆ. ವೆಸ್ಟ್ ಇಂಡೀಸ್ ಮಹಿಳಾ ಟಿ20 ತಂಡಕ್ಕೂ ಇದೇ ರೀತಿಯ ಜೆರ್ಸಿ ರೂಪಿಸಲಾಗಿದೆ.

    ಆಸ್ಟ್ರೇಲಿಯಾ ತಂಡ ಈಗಾಗಲೆ ಮುಂಬರುವ ಭಾರತ ವಿರುದ್ಧದ ತವರಿನ ಟಿ20 ಸರಣಿಯಲ್ಲಿ ಮೂಲನಿವಾಸಿಗಳಿಗೆ ಗೌರವ ಸಲ್ಲಿಸುವಂಥ ಹೊಸ ರೀತಿಯ ಜೆರ್ಸಿ ಧರಿಸಿ ಆಡುವುದಾಗಿ ಹೇಳಿಕೊಂಡಿದ್ದರೆ, ಪ್ರವಾಸಿ ಭಾರತ ತಂಡವೂ ಸೀಮಿತ ಓವರ್ ಸರಣಿಯಲ್ಲಿ ಹೊಸ ಕಿಟ್ ಪ್ರಾಯೋಜಕ ಎಂಪಿಎಲ್ ಸ್ಪೋರ್ಟ್ಸ್ ರೂಪಿಸಿರುವ 1992ರ ವಿಶ್ವಕಪ್‌ನಲ್ಲಿ ಆಡಿದ್ದಂಥ ಕಡುನೀಲಿ ಬಣ್ಣದ ಜೆರ್ಸಿಯಲ್ಲಿ ಆಡಲಿದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

    PHOTOS | ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷ ರೆಟ್ರೋ ಜೆರ್ಸಿ ಧರಿಸಲಿದೆ ಟೀಮ್ ಇಂಡಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts