More

    ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಕೋವಿಡ್​ 19 ನಿಯಂತ್ರಣದ ರಾಜಕೀಯ ಜಟಾಪಟಿ; ಕೇಂದ್ರೀಯ ತಂಡಕ್ಕೆ ಮಾಹಿತಿ ಕೊಡದ ಸರ್ಕಾರ

    ನವದೆಹಲಿ: ಕೋವಿಡ್​ 19 ಹರಡದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಹಾಯ ಮಾಡಲು ಅಲ್ಲಿಗೆ ತೆರಳಿರುವ ಕೇಂದ್ರೀಯ ತಂಡಕ್ಕೆ ಮಾಹಿತಿ ಕೊಡದೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸತಾಯಿಸುತ್ತಿದೆ. ಹೀಗಾಗಿ ಕೋಲ್ಕತ ತಲುಪಿ ಐದು ದಿನಗಳಾದರೂ ತಾವುಳಿದುಕೊಂಡಿರುವ ಗೆಸ್ಟ್​ ಹೌಸ್​ನಿಂದಲೂ ಹೊರಬರಲಾಗದೆ ತಂಡದ ಸದಸ್ಯರು ಪರಿತಪಿಸುತ್ತಿದ್ದಾರೆ.

    ಬಹು ಸಚಿವಾಲಯಗಳ ಸದಸ್ಯರನ್ನು ಒಳಗೊಂಡ ಕೇಂದ್ರೀಯ ತಂಡದ ನೇತೃತ್ವ ವಹಿಸಿರುವ ಹಿರಿಯ ಐಎಎಸ್​ ಅಧಿಕಾರಿ ಅಪೂರ್ವ ಚಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಪೊಲೀಸರ ಅನುಮತಿ ಇಲ್ಲದೆ ತಂಡದ ಯಾವೊಬ್ಬ ಸದಸ್ಯರೂ ಗೆಸ್ಟ್​ ಹೌಸ್​ನಿಂದ ಹೊರಬರದಂತೆ ನೋಡಿಕೊಳ್ಳಬೇಕು ಎಂದು ತಮ್ಮೊಂದಿಗೆ ಬಂದಿರುವ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ ಎಂದು ಆರೋಪಿಸಿದ್ದಾರೆ.

    ಕಳೆದ ಐದು ದಿನಗಳಲ್ಲಿ ಮೂರು ಆಸ್ಪತ್ರೆಗಳು ಮತ್ತು ಒಂದು ಕ್ವಾರಂಟೈನ್​ ಕೇಂದ್ರಕ್ಕೆ ಮಾತ್ರವೇ ಎರಡು ಬಾರಿ ಭೇಟಿ ನೀಡಲು ಸಾಧ್ಯವಾಗಿದೆ ಎಂದು ಅಪೂರ್ವ ಚಂದ್ರ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳಕ್ಕೆ ಅಪೂರ್ವ ಚಂದ್ರಾ ನೇತೃತ್ವದ ತಂಡವನ್ನು ರವಾನಿಸಲು ನಿರ್ಧರಿಸಿದ ದಿನವೇ ಕೇಂದ್ರ ಸರ್ಕಾರ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೂ ಬಹು ಸಚಿವಾಲಯದ ಸದಸ್ಯರನ್ನು ಒಳಗೊಂಡ ತಂಡವನ್ನು ರವಾನಿಸಿ, ಕೋವಿಡ್​ 19 ನಿಯಂತ್ರಣಕ್ಕೆ ಸಹಕರಿಸಲು ನಿರ್ಧರಿಸಿತ್ತು. ಗುಜರಾತ್​, ತೆಲಂಗಾಣ ಮತ್ತು ತಮಿಳುನಾಡಿಗೂ ಇಂಥದ್ದೇ ತಂಡವನ್ನು ರವಾನಿಸಿತ್ತು. ಆದರೆ, ಕೇಂದ್ರದ ಈ ಕ್ರಮದ ಬಗ್ಗೆ ಮಮತಾ ಬ್ಯಾನರ್ಜಿ ಭಾರಿ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಯಾವ ಕಾನೂನಿನ ಆಧಾರದಲ್ಲಿ ತಂಡವನ್ನು ರವಾನಿಸಲಾಗಿದೆ ಎಂದು ಕೇಂದ್ರವನ್ನು ಪ್ರಶ್ನಿಸಿದ್ದರು.

    ಪಶ್ಚಿಮ ಬಂಗಾಳದಲ್ಲಿ ಇದುವರೆಗೂ 571 ಜನ ಮಾತ್ರ ಕರೊನಾ ಸೋಂಕಿತರಾಗಿದ್ದು, 18 ಜನರು ಸತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ನಿಜವಾದ ಅಂಕಿಸಂಖ್ಯೆವನ್ನು ಸರ್ಕಾರ ಬೇಕೆಂದೇ ಮುಚ್ಚಿಡುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ರಾಜ್ಯದ ಭೇಟಿ ತೆರಳಿರುವ ಕೇಂದ್ರದ ತಂಡದ ಪ್ರಕಾರ ಈ ಸಂಖ್ಯೆ 900ಕ್ಕೂ ಹೆಚ್ಚು ಇರುವ ಸಾಧ್ಯತೆ ಇದೆ ಎಂದು ಹೇಳಿದೆ.

    1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್​ಆರ್​ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts