More

    ಜಕ್ಕಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ

    ಎಚ್.ಡಿ.ಕೋಟೆ: ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಸೋಮವಾರ ಸಂವಿಧಾನ ಜಾಗೃತಿ ಜಾಥಾ ರಾಥವನ್ನು ಸ್ವಾಗತಿಸಲಾಯಿತು. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಗ್ರಾಮಸ್ಥರು ಮಾಲಾರ್ಪಣೆಮಾಡಿ ಸ್ವಾಗತಿಸಿದರು.

    ಹ್ಯಾಂಡ್ ಪೋಸ್ಟ್ ಸರಗೂರು ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕಳಸ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಜೈ ಭೀಮ್ ಆಟೋ ಚಾಲಕರ ಸಂಘದವರು, ನಗಾರಿ ಕಲಾ ತಂಡ ಮೆರವಣಿಗೆಯಲ್ಲಿ ಭಾಗಿಯಾಗಿತ್ತು. ಗ್ರಾಮದ ಅಂಬೇಡ್ಕರ್ ಪುತ್ಥಳಿ ಬಳಿ ನಡೆದ ವೇದಿಕೆ ಕಾರ್ಯಕ್ರಮವನ್ನು ತುಂಬಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ಬಿ.ನಂಜಪ್ಪ ಉದ್ಘಾಟಿಸಿದರು. ಈ ಸಂದರ್ಭ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಲಾಯಿತು.

    ತಾಲೂಕು ಆದಿ ಕರ್ನಾಟಕ ಮಹಾಸಭಾ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಸಂವಿಧಾನ ಹೃದಯ ಮತ್ತು ತಾಯಿ ಇದ್ದಂತೆ. ಎಲ್ಲರಿಗೂ ಶಿಕ್ಷಣ, ಉದ್ಯೋಗ, ಸಮಾನತೆಯ ಬದುಕು ಸಾಗಿಸಲು ಅವಕಾಶ ನೀಡಿದೆ. ನಮ್ಮ ಹಕ್ಕಿಗೆ ಧಕ್ಕೆಯಾದರೆ ಅದರ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಎಂದು ಹೇಳಿದರು.

    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಕಂದಾಯ ಅಧಿಕಾರಿ ವಿಶ್ವನಾಥ್, ಗ್ರಾಮ ಲೆಕ್ಕಾಧಿಕಾರಿ ಸೈಯದ್, ಗ್ರಾಮ ಪಂಚಾಯಿತಿ ಸದಸ್ಯೆ ಮಹದೇವಮ್ಮ ಮಲ್ಲೇಶ, ಸಿ.ಶೋಭಾ ರಾಜಶೇಖರ್, ಗೌರಮ್ಮ ನಾಗಮಲೈ, ಎಸ್.ಪುಟ್ಟರಾಜು, ಚಲುವಯ್ಯ, ಶಿವರಾಜು, ರವೀಂದ್ರ, ಮಂಗಳಾ ದೇವರಾಜು, ಜೆ.ಕೆ.ನಾಗರಾಜು, ಸೋಮಣ್ಣ, ಮುತ್ತಯ್ಯ, ಲಿಂಗಯ್ಯ, ಗೌಡಿಕೆ ಜೆ.ಎಸ್.ಮೂರ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts